ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು

ಹಾಸನ: ಇಬ್ಬರು ಸಹೋದರರು ಕುರಿಯನ್ನು ತೊಳೆಯುವುದಕ್ಕಾಗಿ ಕೆರೆಗೆ ಇಳಿದಿದ್ದು, ಮುಳುಗಿ ಸಾವನ್ನಪ್ಪಿದ ಘಟನೆ ಅರಸೀಕೆರೆಯ ಜಾವಗಲ್‌ನಲ್ಲಿ ನಡೆದಿದೆ. ಮೃತ ಬಾಲಕರನ್ನು ಯಾಸಿನ್(13) ಮತ್ತು ಇಮ್ರಾನ್(15) ಎಂದು ಗುರುತಿಸಲಾಗಿದೆ. ಎಂಟು ಮತ್ತು ಹತ್ತನೇ ತರಗತಿಯಲ್ಲಿ ಈ ಇಬ್ಬರು ಬಾಲಕರು ಕಲಿಯುತ್ತಿದ್ದರು. ಬೇಸಿಗೆ ರಜೆಯಾದ್ದರಿಂದ ಇವರಿಬ್ಬರೂ ತಮ್ಮ ಕುರಿಗಳನ್ನು ತೊಳೆಯಲು ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳವಾದ ಭಾಗಕ್ಕೆ ಬಿದ್ದು ಮೃತ ಪಟ್ಟಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿದ ಅವರು ಕೊನೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿದೆ. […]

ಕುರಿ ತೊಳೆಯಲು ಹೋದ ಸಹೋದರರು ಕೆರೆಗೆ ಬಿದ್ದು ಮೃತ್ಯು Read More »

ಸ್ಲೀಪರ್ ಬಸ್ – ಕಾರಿನ ನಡುವೆ ಭೀಕರ ಅಪಘಾತ: ಹತ್ತಿಕೊಂಡ ಬೆಂಕಿಗೆ ನಾಲ್ಕಕ್ಕೂ ಹೆಚ್ಚು ಮಂದಿ ಸಾವು

ಯಾದಗಿರಿ: ಸ್ಲೀಪರ್ ಬಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತಿದ ಬೆಂಕಿ ಎರಡೂ ವಾಹನಗಳನ್ನು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿಸಿದ ಘಟನೆ ನಡೆದಿದೆ. ಸುರಪುರದ ಶಾಂತಪುರ ಕ್ರಾಸ್‌‌ನ ಬೀದರ್ – ಬೆಂಗಳೂರು ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸು ಕಲಬುರ್ಗಿ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ನಾಲ್ಕಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ. ಕಾರಿನಲ್ಲಿದ್ದ ಎಲ್ಲರೂ ಈ ದುರಂತದಲ್ಲಿ ಸಜೀವ ದಹನವಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾಗಿ ಹೇಳಲಾಗುತ್ತಿದೆ. ನಾಲ್ಕು ತಲೆ‌ ಬುರುಡೆಗಳು

ಸ್ಲೀಪರ್ ಬಸ್ – ಕಾರಿನ ನಡುವೆ ಭೀಕರ ಅಪಘಾತ: ಹತ್ತಿಕೊಂಡ ಬೆಂಕಿಗೆ ನಾಲ್ಕಕ್ಕೂ ಹೆಚ್ಚು ಮಂದಿ ಸಾವು Read More »

ಗರ್ಭಿಣಿಯಾಗಿದ್ದೇನೆ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಿದಾ ಖಾನ್‌

ನಾಸಿಕ್‌ನ ಟಿಸಿಎಸ್‌ ಕಚೇರಿ ಮತಾಂತರ ಪ್ರಕರಣದ ಆರೋಪಿ ನಾಸಿಕ್ : ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಬಯಲಾಗಿರುವ ಮತಾಂತರ ಮತ್ತು ಲೈಂಗಿಕ ಕಿರುಕುಳದ ಪ್ರಕರಣದ ಸೂತ್ರಧಾಇ ಎನ್ನಲಾಗಿರುವ ಎಚ್‌ಆರ್‌ ಹೆಡ್‌ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಗರ್ಭಿಣಿ ಎಂಬ ಅಸ್ತ್ರವನ್ನು ಬಳಸುತ್ತಿದ್ದಾಳೆ. ನಾಸಿಕ್ ಟಿಸಿಎಸ್ ಕಚೇರಿಯಲ್ಲಿ 2022ರಿಂದ 2026ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವ್ಯವಸ್ಥಿತ ಮತಾಂತರ ಸಂಚು ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಸದ್ಯ

ಗರ್ಭಿಣಿಯಾಗಿದ್ದೇನೆ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಿದಾ ಖಾನ್‌ Read More »

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸಿದ ಅಪರಾಧಿಗೆ 5 ವರ್ಷ ಜೈಲು

ಮಂಗಳೂರು : ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿ ಟಿ.ಇ. ಜೋಸೆಫ್ ಎಂಬಾತನಿಗೆ ಮಂಗಳೂರು ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 2009ರ ಮಾರ್ಚ್ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ರಥಬೀದಿಯಲ್ಲಿ ಅಂದಾಜು 50,000 ರೂ.ಮೌಲ್ಯದ 1.500 ಕೆಜಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 60/09ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c) ಜೊತೆಗೆ 20(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸಿದ ಅಪರಾಧಿಗೆ 5 ವರ್ಷ ಜೈಲು Read More »

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಹಕ್ಕಿಜ್ವರ ಹಾವಳಿ

ಬೆಂಗಳೂರಿನ ಪೌಲ್ಟ್ರಿ ಫಾರಂನಲ್ಲಿ ವೈರಸ್‌ ಪತ್ತೆ ಬೆಂಗಳೂರು: ರಾಜ್ಯದಲ್ಲಿ ಹಕ್ಕಿಜ್ವರ ಹಾವಳಿ ಮತ್ತೆ ಕಾಣಿಸಿಕೊಂಡಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ತಪಾಸಣೆಯ ವೇಳೆ ಕೋಳಿಗಳಲ್ಲಿ ಈ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಆಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಹಕ್ಕಿಜ್ವರ ಹಾವಳಿ Read More »

ಮಂಗಳೂರು : ಲಾಡ್ಜ್‌ನಲ್ಲಿ ತಂಗಿದ್ದವರ ಚಿನ್ನಾಭರಣ ಕಳವು

ಮಂಗಳೂರು : ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ವೊಂದರಲ್ಲಿ ಇರಿಸಿದ್ದ ಬ್ಯಾಗ್‌ನಿಂದ ಚಿನ್ನಾಭರಣ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಿಜೈ ಬಳಿಯ ಖಾಸಗಿ ಲಾಡ್ಜ್‌ನಲ್ಲಿ ತಾನು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಏ.13ರಂದು ಬೆಳಗ್ಗೆ 6.30ರಿಂದ ತಂಗಿದ್ದು, ಏ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರುಬಾವಿ ಬೀಚ್‌ಗೆ ಹೋಗುವ ವೇಳೆ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್, ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ತನಗೆ ಸೇರಿದ ಬ್ರಾಸ್‌ಲೆಟ್‌ಗಳನ್ನಿಟ್ಟು ರೂಮ್‌ಗೆ ಲಾಕ್ ಮಾಡಿ ಕೀಯನ್ನು ಕೊಂಡು ಹೋಗಿದ್ದೆ.

ಮಂಗಳೂರು : ಲಾಡ್ಜ್‌ನಲ್ಲಿ ತಂಗಿದ್ದವರ ಚಿನ್ನಾಭರಣ ಕಳವು Read More »

ಮಂಗಳೂರು: ಲಾಠಿಚಾರ್ಜ್ ಪ್ರಕರಣದ 101 ಆರೋಪಿಗಳು ಖುಲಾಸೆ

2017ರಲ್ಲಿ ನಗರದಲ್ಲಿ ನಡೆದ ಲಾಠಿಚಾರ್ಜ್‌ ಪ್ರಕರಣ ಮಂಗಳೂರು : ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ 2017ರ ಏ.4ರಂದು ನಡೆದ ಲಾಠಿಚಾರ್ಜ್ ಪ್ರಕರಣದ ಎಲ್ಲ 101 ಆರೋಪಿಗಳನ್ನು ಬಿಡುಗಡೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಹ್ಮದ್ ಖುರೇಶಿ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ಸಂದರ್ಭ ಪರಿಸ್ಥಿತಿ

ಮಂಗಳೂರು: ಲಾಠಿಚಾರ್ಜ್ ಪ್ರಕರಣದ 101 ಆರೋಪಿಗಳು ಖುಲಾಸೆ Read More »

ಕಾಂಗ್ರೆಸ್‌ಗೆ ಈಗ ಮುಸ್ಲಿಂ ಸಮುದಾಯದ ಬೆಂಬಲ ಕಳೆದುಕೊಳ್ಳುವ ಭೀತಿ

ಸಂಪುಟ ಸಭೆಯಲ್ಲಿ ಮುಸ್ಲಿಂ ನಾಯಕರ ವಿರುದ್ಧ ಕೈಗೊಂಡ ಕ್ರಮಕ್ಕೆ ಆಕ್ರೋಶ ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಇನ್ನಷ್ಟೇ ಬರಬೇಕಿದೆ. ಆದರೆ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರ ಮಾತ್ರ ಬೀದಿಗೆ ಬಂದಿದ್ದು, ಪಕ್ಷದ ಒಗ್ಗಟ್ಟು ಮೂರಾಬಟ್ಟೆಯಾಗಿದೆ. ಮುಸ್ಲಿಂ ನಾಯಕರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು ಈಗ ಸರ್ಕಾರದ ಒಳಗೂ ಸಂಚಲನ ಮೂಡಿಸಿವೆ. ಎಂಎಲ್​ಸಿ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ತಲೆದಂಡದ ವಿಚಾರ ಗುರುವಾರ ನಡೆದ ಸಚಿವ ಸಂಪುಟ

ಕಾಂಗ್ರೆಸ್‌ಗೆ ಈಗ ಮುಸ್ಲಿಂ ಸಮುದಾಯದ ಬೆಂಬಲ ಕಳೆದುಕೊಳ್ಳುವ ಭೀತಿ Read More »

ರಾಮಾಯಣದ ವಿಕೃತ ವ್ಯಾಖ್ಯಾನ : ನಟ ಪ್ರಕಾಶ್‌ರಾಜ್‌ ವಿರುದ್ಧ ಕೇಸ್‌

ರಾಮನನ್ನು ಹಣ್ಣು ಕಳ್ಳ ಎಂದಿದ್ದ ಪ್ರಕಾಶ್‌ರಾಜ್‌ ಬೆಂಗಳೂರು: ರಾಮಾಯಣದ ಕಥೆಯನ್ನು ವಿಕೃತವಾಗಿ ವ್ಯಾಖ್ಯಾನಿಸಿದ ಖಳನಟ ಪ್ರಕಾಶ್‌ರಾಜ್‌ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಪ್ರಕಾಶ್‌ರಾಜ್ ಇತ್ತೀಚೆಗೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮ ಉತ್ತರ ಭಾರತದವನು ಹಾಗೂ ರಾವಣ ದಕ್ಷಿಣ ಭಾರತದ ಆದಿವಾಸಿ. ರಾಮ, ರಾವಣನ ತೋಟದಲ್ಲಿದ್ದ ಹಣ್ಣನ್ನು ಕಿತ್ತು ತಿಂದಿದ್ದರಿಂದ ಇಬ್ಬರ ಮಧ್ಯೆ ಕಿತ್ತಾಟ ಶುರುವಾಯಿತು ಎಂದು ಹೇಳಿ ರಾಮಾಯಣವನ್ನು ತನ್ನದೇ ಆದ ವಿಕೃತ ಕಲ್ಪನೆಯಲ್ಲಿ ವ್ಯಾಖ್ಯಾನಿಸಿದ್ದರು. ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ

ರಾಮಾಯಣದ ವಿಕೃತ ವ್ಯಾಖ್ಯಾನ : ನಟ ಪ್ರಕಾಶ್‌ರಾಜ್‌ ವಿರುದ್ಧ ಕೇಸ್‌ Read More »

ಎರಡು ಓಮ್ನಿಗಳ ನಡುವೆ ಅಪಘಾತ

ಪುತ್ತೂರು: ನಗರದ ಹಾರಾಡಿ ‌ಸಮೀಪ ಎರಡು ಓಮ್ನಿ ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ವಾಹನಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಓಮ್ನಿಗಳ ನಡುವೆ ಅಪಘಾತ Read More »

error: Content is protected !!
Scroll to Top