ಐದಕ್ಕೂ ಅಧಿಕ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದ ಕಾಂಗ್ರೆಸ್‌ ಶಾಸಕ

ಇ.ಡಿ ದಾಳಿಯಲ್ಲಿ ಶಾಸಕನ ಅಪಾರ ಸಂಪತ್ತಿನ ರಹಸ್ಯ ಬಯಲು ಬೆಂಗಳೂರು: ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಚಳ್ಳಕೆರೆಯ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಐದಕ್ಕೂ ಹೆಚ್ಚು ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ. ಕಿಂಗ್ 567, ರಾಜ 567, ಲಯನ್ 567, ಪ್ಲೇ 567, ಪ್ಲೇವಿನ್ 567 ಎನ್ನುವ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್ ನಡೆಸುತ್ತಿದ್ದರು ಎಂದು ಇ.ಡಿ. ಬಹಿರಂಗಪಡಿಸಿದೆ. ವೀರೇಂದ್ರ ಪಪ್ಪಿ ಆನ್‌ಲೈನ್‌ ಬೆಟ್ಟಿಂಗ್‌ […]

ಐದಕ್ಕೂ ಅಧಿಕ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದ ಕಾಂಗ್ರೆಸ್‌ ಶಾಸಕ Read More »

ಭಾರತದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ನವದೆಹಲಿ: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ಹುದ್ದೆಗೆ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ‌ರಾಧಾಕೃಷ್ಣನ್ ಅವರು ಸ್ಪಷ್ಟ ಬಹುಮತ ಪಡೆದು ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಧಾಕೃಷ್ಣನ್ ಅವರಿಗೆ 452 ಮತಗಳು ಲಭಿಸಿದ್ದು, ಆವರು ತಮ್ಮ ಪ್ರತಿಸ್ಪರ್ಧಿ ಇಂಡಿ ಒಕ್ಕೂಟದ ಅಭ್ಯರ್ಥಿ, ಸುಪ್ರೀಂ ಕೋರ್ಟ್‌ನ ಮಾಜಿ ಜಡ್ಜ್

ಭಾರತದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ Read More »

ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ

ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಪ್ರತಿಭಟನೆಯ ಹಿಂಸಾಚಾರ ಭುಗಿಲೆದ್ದಿದ್ದು, ಇದರ ನಡುವೆಯೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಓಲಿ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎರಡನೇಯ ದಿನವೂ ಪ್ರತಿಭಟನೆ ಮುಂದುವರಿದಿದ್ದು ಸೋಮವಾರ 2 0 ಜನರು ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಪ್ರತಿಭಟನಾಕಾರರು ಓಲಿ ಅವರನ್ನು ಪದಚ್ಯುಿತಗೊಳಿಸುವಂತೆ ಮತ್ತು ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಡ ಹೇರಿದ್ದರು. ಸೇನಾ ಮೂಲಗಳ ಪ್ರಕಾರ, ಓಲಿ ಅವರು

ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ Read More »

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಾಮಾನ್ಯ ಸಭೆ | ಗೃಹ ಲಕ್ಷ್ಮಿ ಯೋಜನೆಯಡಿ ಎದುರಾಗಿರುವ ಸಮಸ್ಯೆಗಳನ್ನು ಫಲಾನುಭವಿಗಳಿಗೆ ವಿವರಿಸಿ : ಉಮಾನಾಥ ಶೆಟ್ಟಿ

ಪುತ್ತೂರು: ಈಗಾಗಲೇ ಐ.ಟಿ., ಜಿ.ಎಸ್.ಟಿ. ಸಮಸ್ಯೆಗಳಿಂದ ಹಲವು ಗೃಹ ಲಕ್ಷ್ಮಿ ಫಲಾನುಭವಿಗಳು ವಂಚಿತರಾಗಿದ್ದಾರೆ. ಅಂತಹ ಫಲಾನುಭವಿಗಳಿಗೆ‌ ಇಲಾಖೆ ಹಾಗೂ ಗ್ರಾಮ ವನ್ ಕೇಂದ್ರದಲ್ಲಿಯೇ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ತಿಳಿಸಿದರು. ಅವರು ಸೆ.9 ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಪಂಚ  ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಡಿತರ ಚೀಟಿ ಹಾಗೂ

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಾಮಾನ್ಯ ಸಭೆ | ಗೃಹ ಲಕ್ಷ್ಮಿ ಯೋಜನೆಯಡಿ ಎದುರಾಗಿರುವ ಸಮಸ್ಯೆಗಳನ್ನು ಫಲಾನುಭವಿಗಳಿಗೆ ವಿವರಿಸಿ : ಉಮಾನಾಥ ಶೆಟ್ಟಿ Read More »

ಸೆ.9 ರಿಂದ ಅಂತರಾಷ್ಟ್ರೀಯ ತರಬೇತಿ ಸಂಸ್ಥೆ ಜೆಸಿಐ ಪುತ್ತೂರು ಘಟಕದಿಂದ 7 ದಿನಗಳ ಜೇಸಿ ಸಪ್ತಾಹ | ಧ್ವಜಾರೋಹಣದೊಂದಿಗೆ ಜೆಸಿ ಸಪ್ತಾಹಕ್ಕೆ ಇಂದು ಚಾಲನೆ

ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆ ಜೆಸಿಐ ಪುತ್ತೂರು ಘಟಕದ ವತಿಯಿಂದ ಜೆಸಿ ಸಪ್ತಾಹ 2025 ಸೆ.9 ರಿಂದ 15ರ ವರೆಗೆ ನಡೆಯಲಿದ್ದು, ಸಪ್ತಾಹಕ್ಕೆ ಮಂಗಳವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿದೆ ಎಂದು ಪುತ್ತೂರು ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ಹೇಳಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಪ್ತಾಃಧ ಎರಡನೇ ದಿನ ಸೆ.10 ರಂದು ವೆಬ್ ಪೀಪಲ್ ಸಂಸ್ಥೆ ಪುತ್ತೂರು ಇಲ್ಲಿ ಜೆಸಿಯೇತರ ಯುವ ಸಮುದಾಯಕ್ಕೆ ಜೆಸಿ ಸೇರಲು ಮಾಹಿತಿ ಕಾರ್ಯಾಗಾರ ಹಾಗೂ ಮಧ್ಯಾಹ್ನದ ನಂತರ ಸರಕಾರಿ ಪ್ರಥಮ ದರ್ಜೆ

ಸೆ.9 ರಿಂದ ಅಂತರಾಷ್ಟ್ರೀಯ ತರಬೇತಿ ಸಂಸ್ಥೆ ಜೆಸಿಐ ಪುತ್ತೂರು ಘಟಕದಿಂದ 7 ದಿನಗಳ ಜೇಸಿ ಸಪ್ತಾಹ | ಧ್ವಜಾರೋಹಣದೊಂದಿಗೆ ಜೆಸಿ ಸಪ್ತಾಹಕ್ಕೆ ಇಂದು ಚಾಲನೆ Read More »

ಕಸ ಬಿಸಾಡಿದವರಿಗೆ ದಂಡ ಪೊಲೀಸ್ ಇಲಾಖೆಯ ಸಹಕಾರ | ಕುಮಾರಧಾರ ನದಿ ಸೇತುವೆ ಬಳಿ ಘಟನೆ

ಸುಬ್ರಹ್ಮಣ್ಯ: ಗ್ರಾಮದ ನೈರ್ಮಲ್ಯ ಕಾಪಾಡುವ ಹಿತದೃಷ್ಟಿಯಿಂದ, ಕಸ ಎಸೆಯುವವರಿಗೆ ದಂಡ ವಿಧಿಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ಸೋಮವಾರ ನಡೆದಿದೆ. ಸೋಮವಾರ ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರು ಕಸ ಎಸೆಯುವ ದೃಶ್ಯವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಈ ಮಾಹಿತಿಯನ್ನು ತಕ್ಷಣವೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಒದಗಿಸಲಾಯಿತು. ಕೂಡಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದು, ಪೊಲೀಸರು ವಾಹನ ಮಾಲಿಕರನ್ನು ಪತ್ತೆಹಚ್ಚಲು ನೆರವಾದರು. ನಂತರ

ಕಸ ಬಿಸಾಡಿದವರಿಗೆ ದಂಡ ಪೊಲೀಸ್ ಇಲಾಖೆಯ ಸಹಕಾರ | ಕುಮಾರಧಾರ ನದಿ ಸೇತುವೆ ಬಳಿ ಘಟನೆ Read More »

ಪಾಣಾಜೆ ಚಂದ್ರಗಿರಿ ಗೋಕಳ್ಳತನ ಪ್ರಕರಣವನ್ನು ವಾರದೊಳಗೆ ಭೇದಿಸಿ ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ : ಪುತ್ತಿಲ ಪರಿವಾರ ಟ್ರಸ್ಟ್

ಪುತ್ತೂರು: ಪಾಣಾಜೆ ಗ್ರಾಮದ ಚಂದ್ರಗಿರಿ ಎಂಬಲ್ಲಿರುವ ಕೃಷಿಕ ಗಣೇಶ್ ಭಟ್ ಎಂಬವರ ತೋಟದಲ್ಲಿ ಮೇಯಲು ಬಿಟ್ಟ ದನವು ಕಾಣೆಯಾಗಿದ್ದು, ಎರಡು ದಿನದಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಹಸುವನ್ನು ಗೋ ಬಕ್ಷಕರು ಮಾಂಸಕ್ಕಾಗಿ ಕದ್ದು ಕೊಂಡೋಯ್ದಿರುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದ್ದು ಈ ಕುರಿತು ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಪಾಣಾಜೆಯಲ್ಲಿ ನಿರಂತರ ಅಕ್ರಮ ಗೋ ಸಾಗಟದ ಹಿನ್ನೆಲೆಯಲ್ಲಿ ಪೆರ್ನೆಯಲ್ಲಿ ಒಂದು ವಾರದ ಹಿಂದೆ ನಡೆದಂತಹ ರೀತಿಯಲ್ಲಿ ಇದು ಕೂಡ ನಡೆದಿರಬಹುದೆಂದು ಶಂಕೆಯು ಸಾರ್ವಜನಿಕರಲ್ಲಿದ್ದು ತಕ್ಷಣ ಪ್ರಕರಣವನ್ನು ಭೇದಿಸಿ

ಪಾಣಾಜೆ ಚಂದ್ರಗಿರಿ ಗೋಕಳ್ಳತನ ಪ್ರಕರಣವನ್ನು ವಾರದೊಳಗೆ ಭೇದಿಸಿ ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ : ಪುತ್ತಿಲ ಪರಿವಾರ ಟ್ರಸ್ಟ್ Read More »

ದ.ಕ. ಜಿಲ್ಲೆಯ ರೈತರ ಪರವಾಗಿ ರಾಜ್ಯ ಸರಕಾರ ನಿಲ್ಲಬೇಕು, ಅಡಿಕೆ ಬೆಳೆಗಾರರ ವಿಮಾ ಮೊತ್ತವನ್ನು ಹೆಚ್ಚಿಸಬೇಕು | ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರು ಆಗ್ರಹ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ವಾಣಿಜ್ಯ ಬೆಳೆಯ ಜಿಲ್ಲೆಯಾಗಿ ಇಂದು ಪರಿವರ್ತನೆಯಾಗಿ ಅಡಿಕೆ ಈ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 4000 ದಿಂದ 5000 ಮಿಲಿ ಮೀಟ‌ರ್ ಮಳೆಯಾಗುತ್ತಿದ್ದು ಪ್ರಕೃತ ವರ್ಷದಲ್ಲಿ ಮೇ ತಿಂಗಳಲ್ಲಿ ಆರಂಭವಾದ ಮಳೆ ಸಪ್ಟೆಂಬ‌ರ್ ತನಕವು ನಿರಂತರವಾಗಿ ಸುರಿಯುತ್ತಿದ್ದು ಜಿಲ್ಲೆಯಲ್ಲಿ ಅತೀವೃಷ್ಟಿಯಾಗಿದ್ದು ಪ್ರಮುಖವಾಗಿ ಕೃಷಿಕರು ಅಪಾರ ಕೃಷಿ ಹಾನಿ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರೈತರ ಪರವಾಗಿ ನಿಲ್ಲಬೇಕು ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ,

ದ.ಕ. ಜಿಲ್ಲೆಯ ರೈತರ ಪರವಾಗಿ ರಾಜ್ಯ ಸರಕಾರ ನಿಲ್ಲಬೇಕು, ಅಡಿಕೆ ಬೆಳೆಗಾರರ ವಿಮಾ ಮೊತ್ತವನ್ನು ಹೆಚ್ಚಿಸಬೇಕು | ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರು ಆಗ್ರಹ Read More »

ದಕ್ಷಿಣ ಕನ್ನಡ, ಕೊಡಗು ಅಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ | ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿ ಕೆಲಸಗಳು

ಕೊಡಗು: ದಕ್ಷಿಣಕನ್ನಡ ಕೊಡಗು ಅಭಿವೃದ್ಧಿ ಸಂಘ ರಿ ಸುಳ್ಳ್ಯ ಇದರ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪನವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಸುಳ್ಳ್ಯದ ನಿವೇಶನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದ್ದು ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ಎಂದು ನಿರ್ಣಯಿಸಲಾಯಿತು. ನಿವೇಶನವನ್ನು ಸ್ವಚ್ಛಗೊಳಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ದುಗ್ಗಳ ಕಪಿಲ ಕುಮಾರ್ ಬಿ. ಡಿ,ನಿರ್ದೇಶಕರಾದ

ದಕ್ಷಿಣ ಕನ್ನಡ, ಕೊಡಗು ಅಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ | ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿ ಕೆಲಸಗಳು Read More »

ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕ್‌ಗೆ ಜೈಕಾರ: FIR ದಾಖಲು

ಶಿವಮೊಗ್ಗ: ಭದ್ರಾವತಿಯ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಘಟನೆ ನಡೆದಿದೆ. ಸೋಮವಾರ ರಾತ್ರಿ ಮುಸ್ಲಿಮರು ಈದ್ ಮಿಲಾದ್ ಮೆರವಣಿಗೆ ನಡೆಸಿದ್ದು, ಅದರಲ್ಲಿ ಪಾಲ್ಗೊಂಡವವರು ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಭದ್ರಾವತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಡಿಯೋ‌ವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕ್‌ಗೆ ಜೈಕಾರ: FIR ದಾಖಲು Read More »

error: Content is protected !!
Scroll to Top