ಸುದ್ದಿ

ಶ್ರೀಮಂತರನ್ನು ಹನಿಟ್ರ್ಯಾಪ್ ಮಾಡಿ ದೋಚುತ್ತಿದ್ದ ಕಿಲಾಡಿ ಲೇಡಿ ಪೊಲೀಸರ ಬಲೆಗೆ

ಬೆಳಗಾವಿ: ಶ್ರೀಮಂತ ಪುರುಷರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಿ ಅವರನ್ನು ದೋಚುತ್ತಿದ್ದ ಖತರ್‌ನಾಕ್ ಲೇಡಿಯನ್ನು ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಫ್ಯಾಶನ್ ಡಿಸೈನರ್ ದೀಪಾ ಎಂಬಾಕೆಯೇ ಬಂಧಿತ ಆರೋಪಿ. ಆಕೆಗೆ ಈ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಆರೋಪಿ ಶಿವಾನಂದನೇ ದೀಪಾಳಿಗೆ ಶ್ರೀಮಂತ ವ್ಯಕ್ತಿಗಳ ಮಾಹಿತಿ ನೀಡುತ್ತಿದ್ದ. ಆ‌ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಆಕೆ, ಬಳಿಕ ಅವರ ಜೊತೆ ಸಲುಗೆಯಿಂದ, ಆಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ […]

ಶ್ರೀಮಂತರನ್ನು ಹನಿಟ್ರ್ಯಾಪ್ ಮಾಡಿ ದೋಚುತ್ತಿದ್ದ ಕಿಲಾಡಿ ಲೇಡಿ ಪೊಲೀಸರ ಬಲೆಗೆ Read More »

ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ

ಧಾರವಾಡ: ಹೊಸಯಲ್ಲಾಪುರದ ಬೃಹತ್ ತ್ಯಾಜ್ಯ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಿಷಕಾರಿ ದಟ್ಟ ಹೊಗೆ ವಿದ್ಯಾಕಾಶಿಯನ್ನು ‌ನಲುಗಿಸಿದೆ. ಬೆಂಕಿಯ ಜ್ವಾಲೆ ತೀವ್ರವಾಗುತ್ತಿದ್ದು ಇದು ಸಮೀಪವಾಸಿಗಳು, ಸಾರ್ವಜನಿಕರನ್ನು ‌ಸಂಕಷ್ಟಕ್ಕೆ ದೂಡಿದೆ. ಪ್ಲಾಸ್ಟಿಕ್, ರಬ್ಬರ್ ಸೇರಿದಂತೆ ಇನ್ನೂ ಹಲವು ರೀತಿಯ ಪ್ರಕೃತಿಗೆ ಮಾರಕವಾದ ಅಂಶಗಳು ಈ ತ್ಯಾಜ್ಯದೊಳಗೆ ಇದ್ದು ಕಪ್ಪು ಬಣ್ಣದ ದಟ್ಟ ಹೊಗೆ ನಗರದಾದ್ಯಂತ ಆವರಿಸಲಾರಂಭಿಸಿದೆ. ರಸ್ತೆಗಳ ಸುತ್ತೆಲ್ಲಾ ಕಪ್ಪು ಹೊಗೆ ಆವರಿಸಿದ ಪರಿಣಾಮ ವಾಹನ ಸವಾರರು ಸಹ ಪರದಾಡುವಂತಾಗಿದೆ. ಅಪಘಾತದ ಭೀತಿಯೂ ಎದುರಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು,

ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ Read More »

ಸ್ನೇಹಿತೆಯ ‌ಪ್ರೀತಿಗೆ ಮಧ್ಯಸ್ಥಿಕೆಗೆ ಹೋದ ಹೆಂಡತಿ ಶವವಾಗಿ ಪತ್ತೆ: ಗಂಡನ ವಿರುದ್ಧ ಕೊಲೆ ಆರೋಪ

ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕರೆಯನ್ನು ಸ್ವೀಕರಿಸಿ ಮಾತನಾಡಿದ ಕಾರಣಕ್ಕೆ ಗಂಡ ಮತ್ತು ಹೆಂಡತಿಯ ನಡುವೆ ಜಗಳವಾಗಿದ್ದು, ಪತ್ನಿ ಶವವಾಗಿ ಪತ್ತೆಯಾದ ಘಟನೆ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರಲಕ್ಷ್ಮೀ(25) ಎಂಬಾಕೆಯೇ ಮೃತ ದುರ್ದೈವಿ. ವರಲಕ್ಷ್ಮೀ ತಮ್ಮ ಸ್ನೇಹಿತೆಯ ಬಾಯ್‌ಫ್ರೆಂಡ್ ಮಾಡಿದ್ದ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದಳು. ಇದಕ್ಕೆ ಆಕೆಯ ಗಂಡ ಗಂಗರಾಜು ಆಕ್ಷೇಪ ವ್ಯಕ್ತಪಡಿಸಿ, ಪ್ರೇಮಿಗಳ ಮಧ್ಯೆ ಹೋಗದಂತೆ, ಮಧ್ಯಸ್ಥಿಕೆ ವಹಿಸದಂತೆ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಷಯದಲ್ಲಿ ಪತಿ ಪತ್ನಿ ನಡುವೆ ಮಾತಿಗೆ ಮಾತು

ಸ್ನೇಹಿತೆಯ ‌ಪ್ರೀತಿಗೆ ಮಧ್ಯಸ್ಥಿಕೆಗೆ ಹೋದ ಹೆಂಡತಿ ಶವವಾಗಿ ಪತ್ತೆ: ಗಂಡನ ವಿರುದ್ಧ ಕೊಲೆ ಆರೋಪ Read More »

ಮಧ್ಯಪ್ರಾಚ್ಯ ಬಿಕ್ಕಟ್ಟು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಇಸ್ರೇಲ್ – ಇರಾನ್‌ನ ನಡುವಿನ ಯುದ್ಧದ ತೀವ್ರತೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಕಡೆಗೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ಅಬುದಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ, ದೋಹಾ‌ಗಳಿಂದ ಬೆಂಗಳೂರಿಗೆ ಬರಬೇಕಾಗಿದ್ದ ಎಂಟು ವಿಮಾನಗಳು ಮತ್ತು ಬೆಂಗಳೂರಿನಿಂದ ಹೊರಡಬೇಕಾಗಿದ್ದ ಒಂಬತ್ತು ವಿಮಾನಗಳು ರದ್ದಾಗಿವೆ. ಭದ್ರತಾ ಕಾರಣಗಳು ಮತ್ತು ಏರ್‌ಸ್ಪೇಸ್ ನಿರ್ಬಂಧದ ಕಾರಣಕ್ಕಾಗಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲನೆ ಮಾಡುವಂತೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಧ್ಯಪ್ರಾಚ್ಯ ಬಿಕ್ಕಟ್ಟು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಹಾರಾಟ ರದ್ದು Read More »

ಬಂಧನದಲ್ಲಿದ್ದ ಯುವಕ ಸಾವು: ಪೊಲೀಸರ ಚಿತ್ರಹಿಂಸೆಯೇ ‌ಕಾರಣ ಎಂದು ಕುಟುಂಬಸ್ಥರ ಆರೋಪ

ಮಧುರೈ: ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ವಿಚಾರಣೆಗಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ದಲಿತ ಯುವಕನೊಬ್ಬ ಮೃತಪಟ್ಟಿದ್ದು, ಪೊಲೀಸರ ಚಿತ್ರಹಿಂಸೆಯಿಂದ ಈ ಘಟನೆ ನಡೆದಿದೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತನನ್ನು ಆಕಾಶ್ (26) ಎಂದು ಗುರುತಿಸಲಾಗಿದೆ. ಶಿವಗಂಗಾದಲ್ಲಿ ‌ನಡೆದ ಹಲ್ಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಈತನನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಆಕಾಶ್ ತಂದೆ ಮಾತನಾಡಿದ್ದು, ಸ್ನೇಹಿತರ ನಡುವೆ ಜಗಳ ನಡೆದಿದ್ದು, ಈ ಪ್ರಕರಣದಲ್ಲಿ ಆಕಾಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ‌ವಶಕ್ಕೆ ಪಡೆದಿದ್ದ ನನ್ನ ಪುತ್ರನನ್ನು ಪೊಲೀಸರು ಠಾಣೆಗೆ

ಬಂಧನದಲ್ಲಿದ್ದ ಯುವಕ ಸಾವು: ಪೊಲೀಸರ ಚಿತ್ರಹಿಂಸೆಯೇ ‌ಕಾರಣ ಎಂದು ಕುಟುಂಬಸ್ಥರ ಆರೋಪ Read More »

ಬಂಟ್ವಾಳ : ಬಸ್ಸಿನಿಂದ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದಿದ್ದ ಆರೋಪಿ ಸೆರೆ

ಬಂಟ್ವಾಳ : ಹೋಟೆಲ್‌ ಎದುರು ನಿಲ್ಲಿಸಿದ್ದ ಬಸ್ಸಿನಿಂದ ದಂಪತಿಯ ಲಕ್ಷಾಂತರ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿ ಐದು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ನಿವಾಸಿ ಸಮದ್‌ ಖಾನ್‌ (37) ಎಂಬಾತ ಆರೋಪಿ. ಅವನಿಂದ ಕಳವು ಮಾಡಿದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ನವೆಂಬರ್‌ 19ರಂದು ದುರ್ಗಾಂಬಾ ಬಸ್‌ ಕಲ್ಲಡ್ಕ ಸಮೀಪ ಕುದ್ರಬೆಟ್ಟುವಿನಲ್ಲಿರುವ ಸಮುದ್ರ ಹೋಟೆಲ್‌ ಎದುರು ಪ್ರಯಾಣಿಕರಿಗೆ ಉಪಾಹಾರ ಸೇವಿಸಲೆಂದು ನಿಲ್ಲಿಸಿದ್ದ ವೇಳೆ ಬವ್ರಹ್ಮಾವರ ಮೂಲದ ದಂಪತಿಯ ಬ್ಯಾಗಿನಲ್ಲಿದ್ದ ಸುಮಾರು 20 ಲ.ರೂ.

ಬಂಟ್ವಾಳ : ಬಸ್ಸಿನಿಂದ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದಿದ್ದ ಆರೋಪಿ ಸೆರೆ Read More »

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ

ಉಪ್ಪಿನಂಗಡಿ: ವೇಗವಾಗಿ ಬಂದ ಕಾರು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಆಟೋ ಚಾಲಕರಾದ ಅವರ ತಂದೆ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ಆಟೋ ಚಾಲಕ ಕಲಂದರ್ ಶಾಫಿ ಮತ್ತು ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5) ಮತ್ತು ಸಝ್ಮಾ (4) ಎಂದು ಗುರುತಿಸಲಾಗಿದೆ. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಮತ್ತು ಮಹಮ್ಮದ್ ಜಾಝೀರ್

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ Read More »

ಸಹಪಾಠಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ ವಿದ್ಯಾರ್ಥಿ ಸೆರೆ

ಸಹಪಾಠಿಗಳು, ವಾರ್ಡನ್‌ ಮೇಲೆ ಹಲ್ಲೆ ಮಾಡಿದ್ದ 9ನೇ ತರಗತಿ ವಿದ್ಯಾರ್ಥಿ ಬಳ್ಳಾರಿ: ಜಿಲ್ಲೆಯ ಗೋನಾಳ ಪ್ರದೇಶದ ವಸತಿ ಶಾಲೆಯಲ್ಲಿ ಸಹಪಾಠಿ ವಿದ್ಯಾರ್ಥಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು ಹಾಸ್ಟೆಲ್‌ ವಾರ್ಡನ್‌ ಮತ್ತು ಇತರ ಏಳು ವಿದ್ಯಾರ್ಥಿಗಲ ಮೇಲೆ ಹಲ್ಲೆ ಮಾಡಿ ಓಡಿಹೋಗಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈ ಅಪ್ರಾಪ್ತ ವಯಸ್ಸಿನವನನ್ನು ಬಳ್ಳಾರಿ ನಗರದ ಶ್ರೀರಾಮಪುರ ಕಾಲೊನಿಯ ರೂಪನಗುಡಿಯಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ

ಸಹಪಾಠಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ ವಿದ್ಯಾರ್ಥಿ ಸೆರೆ Read More »

ಕುತೂಹಲಕ್ಕೆ ಕಾರಣವಾದ ಡಿಕೆಶಿ ಔತಣಕೂಟ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷವಾದ ಹಿನ್ನೆಲೆಯಲ್ಲಿ ಡಿನ್ನರ್‌ ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಶಾಸಕರಿಗಾಗಿ ಏರ್ಪಡಿಸಿರುವ ಔತಣಕೂಟ ನಾನಾ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಡಿ.ಕೆ ಶಿವಕುಮಾರ್ 6 ವರ್ಷ ಪೂರೈಸಿದ್ದು, ಈ ಸಂಭ್ರಮಾಚರಣೆಗಾಗಿ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದ್ದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಈಗಲೂ ಶೀತಲ ಸಮರ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಔತಣಕೂಟಕ್ಕೆ ಮಹತ್ವ ಬಂದಿದೆ. ಇಂದಿನ ಔತಣಕೂಟದಲ್ಲಿ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ

ಕುತೂಹಲಕ್ಕೆ ಕಾರಣವಾದ ಡಿಕೆಶಿ ಔತಣಕೂಟ Read More »

ವೈದ್ಯರ ಮುಷ್ಕರ : ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯ ಸಾಧ್ಯತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಲಿರುವ ವೈದ್ಯರು ಬೆಂಗಳೂರು : ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ವೈದ್ಯರು ಮುಷ್ಕರ ಹೂಡಲು ಮುಂದಾಗಿರುವುದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾರ್ಚ್ 11ರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಇದರಿಂದಾಗಿ ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜ್ವರ, ಕೆಮ್ಮು, ಚರ್ಮ ಸಂಬಂಧಿತ ಸಮಸ್ಯೆಗಳು, ಸ್ಕ್ಯಾನಿಂಗ್ ಅಥವಾ ರಕ್ತ

ವೈದ್ಯರ ಮುಷ್ಕರ : ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯ ಸಾಧ್ಯತೆ Read More »

error: Content is protected !!
Scroll to Top