ಸುದ್ದಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತ ಜಯಘೋಷಗಳೊಂದಿಗೆ ಗುರುವಾರ ರಾತ್ರಿ ನಡೆಯಿತು. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶ್ರೀ ದೇವರು ರಥಬೀದಿಗೆ ಬಂದು, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾದರು. ಬಳಿಕ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದು ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ಬಾನೆತ್ತರದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಭಕ್ತರು ಹರ್ಷೋದ್ದಾರವಾದರು. […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು Read More »

ಜಾತಿ ಗಣತಿ ವರದಿ : ಸಂಪುಟ ಸಭೆಯಲ್ಲೂ ಬಗೆಹರಿಯಲಿಲ್ಲ ಗೊಂದಲ

ಒಕ್ಕಲಿಗ, ಲಿಂಗಾಯತ ಸಚಿವರಿಂದ ಭಾರಿ ವಿರೋಧ; ಜೋರು ಧ್ವನಿಯಲ್ಲಿ ವಾಗ್ವಾದ ಬೆಂಗಳೂರು : ಜಾತಿ ಗಣತಿ ವರದಿ ಸಂಬಂಧ ನಿನ್ನೆ ನಡೆದ ಮಹತ್ವದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವ ತೀರ್ಮಾನವನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ. ಸಚಿವರು ವರದಿ ಪರ ಮತ್ತು ವಿರೋಧವಾಗಿ ಜೋರು ದ್ವನಿಯಲ್ಲಿ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯಾವ ಸಮಜಾಯಿಸಿಗೂ ಬಗ್ಗಿಲ್ಲ ಎಂದು ತಿಳಿದುಬಂದಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಚಿವರು ವರದಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.ಕಳೆದೊಂದು ವಾರದಿಂದ ಕರ್ನಾಟಕದಾದ್ಯಂತ ದೊಡ್ಡ ಕೋಲಾಹಲ ಎಬ್ಬಿಸಿದ್ದ ಜಾತಿ ಗಣತಿ

ಜಾತಿ ಗಣತಿ ವರದಿ : ಸಂಪುಟ ಸಭೆಯಲ್ಲೂ ಬಗೆಹರಿಯಲಿಲ್ಲ ಗೊಂದಲ Read More »

ಭಟ್ಕಳ : ಮಾಂಸಕ್ಕಾಗಿ ಗಬ್ಬದ ಗೋವಿನ ವಧೆ

ಕರುವಿನ ಭ್ರೂಣವನ್ನು ಹೊಳೆ ದಂಡೆಯಲ್ಲಿ ಎಸೆದ ಕಟುಕರು ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆಗೈದು ಮಾಂಸ ಸಾಗಾಟ ಮಾಡಿ ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ನಡೆದಿದೆ.ಮಾಂಸಕ್ಕಾಗಿ ದನವನ್ನು ವಧೆ ಮಾಡಿ ಕರುವಿನ ಭ್ರೂಣ ಹಾಗೂ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ

ಭಟ್ಕಳ : ಮಾಂಸಕ್ಕಾಗಿ ಗಬ್ಬದ ಗೋವಿನ ವಧೆ Read More »

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಘಟನೆಗೆ ಆಕ್ರೋಶ

ಶಿವಮೊಗ್ಗ, ಬೀದರ್‌ನಲ್ಲಿ ನಡೆದ ಘಟನೆಗೆ ಕೆರಳಿದ ಬ್ರಾಹ್ಮಣ ಸಂಘಟನೆಗಳು ಬೆಂಗಳೂರು: ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ಸಮುದಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಸಂಭವಿಸಿದ್ದು, ಇದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಓರ್ವ ವಿದ್ಯಾರ್ಥಿ ಜನಿವಾರ ತೆಗೆಯುವುದಿಲ್ಲ ಎಂದು ಹೇಳಿದಾಗ ಅಧಿಕಾರಿಗಳು ಜನಿವಾರ ಕಿತ್ತು ತೆಗೆದು ಕಸದಬುಟ್ಟಿಗೆ ಎಸೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಜನಿವಾರ ಬಿಚ್ಚಿದ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಪರೀಕ್ಷಾ ಸಿಬ್ಬಂದಿ

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ ಘಟನೆಗೆ ಆಕ್ರೋಶ Read More »

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ

ಪೊಲೀಸರಿಂದ ಸರ್ಪಗಾವಲು; ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಮುಸ್ಲಿಮರ ಬೃಹತ್‌ ಪ್ರತಿಭಟನೆ ನಡೆಯಲಿದೆ. ಕರ್ನಾಟಕದಲ್ಲೇ ಅತಿದೊಡ್ಡ ಪ್ರತಿಭಟನೆಗೆ ಉಲೇಮಾ ಸಮನ್ವಯ ಸಮಿತಿ ಕರೆ ನೀಡಿದೆ. ನಗರದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಝಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಉಲೇಮಾಗಳು ಭಾಗವಹಿಸಲಿದ್ದಾರೆ. ದಕ್ಷಿಣ

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ Read More »

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ

ಸಹಾಯ ಕೇಳಿದವಳ ಮೇಲೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ ರಿಕ್ಷಾ ಚಾಲಕ ಮತ್ತವನ ಸ್ನೇಹಿತರು ಉಳ್ಳಾಲ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಯುವತಿಯೊಬ್ಬಳ ಮೇಲೆ ರಿಕ್ಷಾ ಚಾಲಕ ಹಾಗೂ ಅವನ ಇಬ್ಬರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ಬುಧವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣೆ ಸಮೀಪ ಈ ಘಟನೆ ನಡೆದಿದ್ದು, ಮಧ್ಯಾರಾತ್ರಿ 1.30 ಸುಮಾರಿಗೆ 112ಕ್ಕೆ ಕರೆ ಮಾಡಿ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ Read More »

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು  9ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.18 ಶುಕ್ರವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ Read More »

ಮರದ ಗೆಲ್ಲು ಬಿದ್ದು ಗಾಯ

ಪುತ್ತೂರು: ಚಲಿಸುತ್ತಿರುವಾಗ ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರನಿಗೆ ಗಾಯಗಳಾಗಿರುವ ಘಟನೆ ಸಾಲ್ಮರ ಜಂಕ್ಷನ್ ಬಳಿ ನಡೆದಿದೆ. ಮಾವಿನ ಮರದ ಗೆಲ್ಲು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ತನ್ನೀರ್ ತಾರಿಗುಡ್ಡೆ ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಮರದ ಗೆಲ್ಲು ಬಿದ್ದು ಗಾಯ Read More »

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ  ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನಿಪುನ್ ಪರೀಕ್ಷೆಗೆ ಅಗತ್ಯವಾಗಿ ಏಪ್ರಿಲ್ 8 ರಂದು ಪಂಜದಲ್ಲಿರುವ ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿಗೆ ಭೇಟಿ ಮಾಡಲಾಯಿತು.  ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿ  ಮಾಲೀಕರಾದ ಮಧು ಎಂಬವರು ಫ್ಯಾಕ್ಟರಿಯಲ್ಲಿ ತಯಾರಾಗುವ ಸಿಮೆಂಟ್ ಹಂಚುಗಳು, ಕಬ್ಬಿಣದ ವಿವಿಧ ಬಗೆಯ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಒಟ್ಟು 11 ವಿದ್ಯಾರ್ಥಿಗಳು ಕೈಗಾರಿಕಾ ಭೇಟಿಯಲ್ಲಿ ಭಾಗಿಯಾಗಿದ್ದು ರೇಂಜರ್ ಲೀಡರ್ ಅಶ್ವಿನಿ ಎಸ್ ಎನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಕಳೆದ ಎಂಟು ದಿನಗಳಿಂದ ವೈಭವದಿಂದ ನಡೆಯುತ್ತಿದ್ದು, ಇಂದು ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು, ಬಳಿಕ ಶ್ರೀ ದೇವರು ರಥಬೀದಿಗೆ ಬರುವರು. ಆನಂತರ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾಗುವರು. ಈ ಹೊತ್ತಿನಲ್ಲಿ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆದ ಬಳಿಕ ಸಾವಿರಾರು ಭಕ್ತಾದಿಗಳ ಕೈಗಳ ಜಯಘೋಷಗಳೊಂದಿಗೆ ಬ್ರಹ್ಮರಥವನ್ನು ಎಳೆಯುತ್ತಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಇಂದು ರಾತ್ರಿ ವಿಜ್ರಂಭಣೆಯಿಂದ ನೆರವೇರಲಿದೆ ಬ್ರಹ್ಮರಥೋತ್ಸವ Read More »

error: Content is protected !!
Scroll to Top