ಸುದ್ದಿ

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ

ರಾತ್ರಿ ಕಾರು ತಡೆದು ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ ಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಎನ್ನಲಾದ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. […]

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ Read More »

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು

ಕಚೇರಿಯಲ್ಲಿ ರಾಸಲೀಲೆಯಾಡಿದ ವಿಡಿಯೋ ವೈರಲ್‌ ಆದ ಬಳಿಕ ಅಮಾನತುಗೊಂಡಿದ್ದ ಉನ್ನತ ಅಧಿಕಾರಿ ಬೆಂಗಳೂರು: ಮಹಿಳೆಯರೊಂದಿಗೆ ಕಚೇರಿಯಲ್ಲೇ ರಾಸಲೀಲೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತಿನಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ. ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು Read More »

ತಮಿಳುನಾಡಲ್ಲಿ ಡಿಎಂಕೆ ಬೆನ್ನಿಗಿರಿದ ಕಾಂಗ್ರೆಸ್‌

ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ ಘೋಷಣೆ, ಇಂಡಿ ಮೈತ್ರಿಕೂಟದಲ್ಲಿ ಬಿರುಕು ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ತಿರುವು ಕಂಡುಬಂದಿದ್ದು, ಡಿಎಂಕೆ ನೇತೃತ್ವದ ಮೈತ್ರಿಗೆ ಭಾರಿ ಶಾಕ್ ಉಂಟಾಗಿದೆ. ಕಾಂಗ್ರೆಸ್ ತನ್ನ ಹಳೆಯ ಮೈತ್ರಿಯನ್ನು ಬಿಟ್ಟು ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಡೆ ಮುಖ ಮಾಡಿದ್ದು, ಹೊಸ ಮೈತ್ರಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ. ಪಕ್ಷದ ಹಿರಿಯ ನಾಯಕ ಕೆ. ಸಿ. ವೇಣಗೋಪಾಲ್‌ ನಿನ್ನೆ ಟಿವಿಕೆಗೆ ಬೆಂಬಲ ನೀಡುವುದಾಗಿ ಹೇಳಿದ ಬೆನ್ನಲ್ಲೇ ಡಿಎಂಕೆ ನಾಯಕರು ಕೆಂಡಾಮಂಡಲವಾಗಿದ್ದಾರೆ. ಬೆನ್ನಿಗಿರಿಯುವುರಲ್ಲಿ

ತಮಿಳುನಾಡಲ್ಲಿ ಡಿಎಂಕೆ ಬೆನ್ನಿಗಿರಿದ ಕಾಂಗ್ರೆಸ್‌ Read More »

ಪಶ್ಚಿಮ ಬಂಗಾಳ : ಟಿಎಂಸಿ ಟಿಕೆಟ್‌ಗೆ 70ಕ್ಕೂ ಅಧಿಕ ಅಭ್ಯರ್ಥಿಗಳಿಂದ ತಲಾ ಐದು ಕೋಟಿ ರೂ. ವಸೂಲಿ

ಪಕ್ಷದ ಸೋಲಿನ ಬೆನ್ನಲ್ಲೇ ರಾಜೀನಾಮೆ ನೀಡಿದ ಮಾಜಿ ಸಚಿವನಿಂದ ಗಂಭೀರ ಆರೋಪ ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಟಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ತಲಾ 5 ಕೋ. ರೂ. ವಸೂಲು ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ರಾಜ್ಯ ಸಚಿವರಾಗಿದ್ದ ಮನೋಜ್ ತಿವಾರಿ ಪಕ್ಷದ

ಪಶ್ಚಿಮ ಬಂಗಾಳ : ಟಿಎಂಸಿ ಟಿಕೆಟ್‌ಗೆ 70ಕ್ಕೂ ಅಧಿಕ ಅಭ್ಯರ್ಥಿಗಳಿಂದ ತಲಾ ಐದು ಕೋಟಿ ರೂ. ವಸೂಲಿ Read More »

ಪಂಜಾಬಿನಲ್ಲಿ ಬೆನ್ನುಬೆನ್ನಿಗೆ ಎರಡು ಸ್ಫೋಟ : ವಿಧ್ವಂಸಕ ಕೃತ್ಯದ ಶಂಕೆ

ಬಿಎಸ್‌ಎಫ್‌ ಹೆಡ್‌ಕ್ವಾರ್ಟರ್ಸ್‌, ಸೇನಾ ನೆಲೆಯ ಬಳಿ ಸ್ಫೋಟ ಜಲಂಧರ್ : ಪಂಜಾಬಿನ ಜಲಂಧರ್‌ನಲ್ಲಿರುವ ಬಿಎಸ್‌ಎಫ್ ಪ್ರಧಾನ ಕಚೇರಿ ಸಮೀಪ ಬಿಎಸ್‌ಎಫ್ ಚೌಕ್ ಪ್ರದೇಶದಲ್ಲಿ ಮತ್ತು ಅಮೃತಸರದಲ್ಲಿ ಸೇನಾ ನೆಲೆಯ ಸಮೀಪ ಬೆನ್ನುಬೆನ್ನಿಗೆ ಎರಡು ಸ್ಫೋಟಗಳು ನಿನ್ನೆ ರಾತ್ರಿ ಸಂಭವಿಸಿದ್ದು, ವಿಧ್ವಂಸಕ ಕೃತ್ಯವೆಂದು ಅನುಮಾನಿಸಲಾಗಿದೆ. ಜಲಂಧರ್‌ನಲ್ಲಿ ಸ್ಕೂಟರ್‌ ಒಂದರಲ್ಲಿ ಸಂಭವಿಸಿದ ಸ್ಫೋಟ ಇಡೀ ನಗರವನ್ನು ಭೀತಿಗೀಡುಮಾಡಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ. ಸ್ಫೋಟದ ತೀವ್ರತೆಗೆ ಗಾಬರಿಗೊಂಡ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡುತ್ತಿರುವುದು

ಪಂಜಾಬಿನಲ್ಲಿ ಬೆನ್ನುಬೆನ್ನಿಗೆ ಎರಡು ಸ್ಫೋಟ : ವಿಧ್ವಂಸಕ ಕೃತ್ಯದ ಶಂಕೆ Read More »

ಮೇ 10ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ

ಆರ್ಟ್‌ ಅಫ್‌ ಲಿವಿಂಗ್‌ ಧ್ಯಾನ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ರವಿಶಂಕರ್‌ ಗುರೂಜಿ 70ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರವಿಶಂಕರ್‌ ಗುರೂಜಿ ಜನ್ಮದಿನ ನಿಮಿತ್ತ ನಿರ್ಮಿಸಲಾಗಿರುವ ಧ್ಯಾನ ಮಂದಿರವನ್ನು ಈ ಸಂದರ್ಭದಲ್ಲಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ಸುಮಾರ 4 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್‌ ಧ್ಯಾನಮಂದಿರವಾಗಿದ್ದು, ಅನೆಕ ಸೌಲಭ್ಯಗಳನ್ನು ಒಳಗೊಂಡಿದೆ. ಕಂಬ ರಹಿತ ಮುಖ್ಯ

ಮೇ 10ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ Read More »

ಸವಣೂರಿನಲ್ಲಿ ಭೀಕರ ಅಪಘಾತ : ಯುವಕರಿಬ್ಬರು ಸಾವು

ಸ್ಕೂಟಿಗೆ ನೀರಿನ ಟ್ಯಾಂಕರ್‌ ಡಿಕ್ಕಿಯಾಗಿ ಸಂಭವಿಸಿದ ಅಪಘಾತ ಕಡಬ: ಸ್ಕೂಟಿಗೆ ಟಾಂಕರ್‌ ಡಿಕ್ಕಿಯಾಗಿ ಸ್ಕೂಟಿ ಸವಾರಿ ಮಾಡುತ್ತಿದ್ದ ಯುವಕರಿಬ್ಬರು ಮೃತಪಟ್ಟ ಭೀಕರ ಅಪಘಾತ ಮಂಗಳವಾರ ಸಂಜೆ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಸವಣೂರು ಸಮೀಪ ಚಾಪಳ್ಳ ತಿರುವಿನಲ್ಲಿ ಸಂಭವಿಸಿದೆ. ಬಂಟ್ವಾಳದ ಕಲ್ಲಡ್ಕ ಸಮೀಪದ ಗೋಳ್ತಮಜಲಿನ ಯಜ್ಞೇಶ್‌ (20) ಮತ್ತು ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಜಗನ್‌ (21) ಮೃತಪಟ್ಟಿರುವ ದುರ್ದೈವಿಗಳು. ಯುವಕರಿಬ್ಬರು ಸ್ಕೂಟಿಯಲ್ಲಿ ಆಲಂಕಾರಿನ ದೇವಸ್ಥಾನಕ್ಕೆ ಹೋಗಿ ವಾಪಸು ಬರುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಯಜ್ಞೇಶ್‌ ಡೆಲಿವರಿ ಬಾಯ್‌

ಸವಣೂರಿನಲ್ಲಿ ಭೀಕರ ಅಪಘಾತ : ಯುವಕರಿಬ್ಬರು ಸಾವು Read More »

ಸಚಿವ ಜಮೀರ್‌ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಆಭರಣ ಕದ್ದ ಇಬ್ಬರ ಬಂಧನ

ತಾಯಿಯ ಸಂಬಂಧಿಕನಿಂದಲೇ ಕಳ್ಳತನ ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳರನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಸಚಿವ ಜಮೀರ್ ಮನೆಯಿಂದ ಕಳೆದ ಮೂರು ವರ್ಷದಲ್ಲಿ ಹಂತ ಹಂತವಾಗಿ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಎಗರಿಸಿದ್ದರು. ಜಮೀರ್ ಆರೋಗ್ಯ ವಿಚಾರಿಸುವ ಸಲುವಾಗಿ ಪದೇಪದೆ ಮನೆಗೆ ಬರುತ್ತಿದ್ದ ಅಮೀರ್ 2023ರಿಂದ ನಿರಂತರವಾಗಿ 1 ಕೆಜಿ 200 ಗ್ರಾಂ ಚಿನ್ನಾಭರಣ ಎಗರಿಸಿದ್ದಾನೆ. ಬಂಧಿತ

ಸಚಿವ ಜಮೀರ್‌ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಆಭರಣ ಕದ್ದ ಇಬ್ಬರ ಬಂಧನ Read More »

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್

ಜಾತಿ ನಿಂದನೆ ಕೇಸಿನಲ್ಲಿ ಬಂಧನಕ್ಕೆ ವಾರಂಟ್‌ ಜಾರಿ ಬೆಂಗಳೂರು : ಜಾತಿನಿಂದನೆ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಟೌನ್ ಠಾಣೆ ಪ್ರಕರಣ ದಾಖಲಾಗಿದ್ದು, ಇದೀಗ ಈ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್​ಗೆ ಕೋರ್ಟ್ ಬಂಧನದ ವಾರಂಟ್ ಜಾರಿ ಮಾಡಿದೆ. ಜಾತಿ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ.

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್ Read More »

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜೀಪು ಚಾಲಕನ ಮೇಲೆ ವಾಮಾಚಾರ: ದೂರು ದಾಖಲು

ಚಿಕ್ಕಮಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ‌ಮನೆಯ ಮುಂದೆ ವಾಮಾಚಾರ ನಡೆಸಿರುವ ಘಟನೆ ಬಾಳೇಹೊನ್ನೂರಿನಲ್ಲಿ ನಡೆದಿದೆ. ಎಸಿಎಫ್ ಮೋಹನ್ ಮತ್ತು ಜೀಪು ಚಾಲಕನನ್ನು ಗುರಿಯಾಗಿಸಿ ಈ ವಾಮಾಚಾರ ನಡೆಸಲಾಗಿದೆ. ಅನಾಮಧೇಯ ವ್ಯಕ್ತಿಗಳು ಮೋಹನ್ ಅವರ ಮನೆಯ ಗೇಟಿನ‌ ಮುಂದೆ ವಾಮಾಚಾರ ನಡೆಸಿರುವುದಾಗಿದೆ. ಮೋಹನ್ ಮತ್ತು ಚಾಲಕನ ಫೋಟೋ‌ಗಳನ್ನು ಮಣ್ಣಿನ ಮಡಿಕೆಯ ಒಳಗೆ ಇರಿಸಿ, ಅದಕ್ಕೆ ಅರಿಸಿನ ಕುಂಕುಮ ಹಾಕಿ ಬಳಿಕ ಅದನ್ನು ಒಡೆದು ಹಾಕಲಾಗಿದೆ. ಮೋಹನ್ ಅವರಿಗೆ ಇಂದು ಬೆಳಗ್ಗೆ ಈ ದೃಶ್ಯ ಕಂಡಿದ್ದು, ಅವರ ಮನೆಯವರನ್ನು ಆತಂಕಕ್ಕೆ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜೀಪು ಚಾಲಕನ ಮೇಲೆ ವಾಮಾಚಾರ: ದೂರು ದಾಖಲು Read More »

error: Content is protected !!
Scroll to Top