ಸುದ್ದಿ

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ

ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ದೈವಸ್ಥಾನ ವಿಟ್ಲ: ಕನ್ಯಾನದ ಸಮೀಪ ಕುಟ್ಟಿತಡ್ಕದಲ್ಲಿರುವ ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ಕ್ಷೇತ್ರದ ವಾರ್ಷಿಕ ಕೆಂಡಸೇವೆ ಮೇ 2ರಂದು ಜರುಗಲಿದೆ. ಬೆಳಗ್ಗೆ 6ಕ್ಕೆ ಮೆಲೇರಿ ರಚನೆ, ಸಂಜೆ 6ಕ್ಕೆ ದೀಪ ಪ್ರಜ್ವಲನೆ, 7ಕ್ಕೆ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7.30ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಮೆಲೇರಿಗೆ ಅಗ್ನಿಸ್ಪರ್ಶ, 10ಕ್ಕೆ ಅನ್ನ ಸಂತರ್ಪಣೆ, ರಾತ್ರಿ 12ರಿಂದ ಕುಳಿಚ್ಚಾಟಂ ದರ್ಶನ, ಮೇ 3ರಂದು ಮುಂಜಾನೆ 4ಕ್ಕೆ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಬೆಳಗ್ಗೆ 5ಕ್ಕೆ […]

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ Read More »

ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಬೆಳ್ತಂಗಡಿ : ಎರಡು ದಿನಗಳ ಹಿಂದೆ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾರೆಂಕಿ ನಿವಾಸಿ ಕೃಷ್ಣ (55) ಮೃತ ವ್ಯಕ್ತಿ. ಏ.20ರಂದು ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಮಾರಿಗುಡಿ ರಾಮನಗರ ಕ್ರಾಸ್ ಬಳಿಯಲ್ಲಿ ಸೈಪುದ್ದೀನ್ ಎಂಬಾತ ಮಡಂತ್ಯಾರುವಿನಿಂದ ಬಳ್ಳಮಂಜ ಕಡೆಗೆ ಬೈಕನ್ನು ಚಲಾಯಿಸಿಕೊಂಡು ಬಂದು ಬಳ್ಳಮಂಜ ಕಡೆಯಿಂದ ಮಡಂತ್ಯಾರು ಕಡೆಗೆ ಹೋಗುತ್ತಿದ್ದ

ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಹಾರ್ಮುಜ್‌ನಲ್ಲಿ ಮತ್ತೆ ಮೂರು ಹಡಗುಗಳ ಮೇಲೆ ಇರಾನ್‌ ದಾಳಿ

ಗನ್‌ಬೋಟ್‌ನಲ್ಲಿ ಬಂದು ಹಡಗುಗಳ ಮೇಲೆ ಗುಂಡಿನ ಸುರಿಮಳೆಗೈದ ಇರಾನ್‌ ಸೇನೆ ಟೆಹ್ರಾನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾತ್ಕಾಲಿಕ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಿರುವಂತೆಯೇ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ ಸೇನೆ ಮತ್ತೆ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹಾರ್ಮುಜ್‌ ಜಾಗತಿಕ ಸಂಘರ್ಷದ ಕೇಂದ್ರವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಹಡಗುಗಳ ಮೇಲೆ ನಡೆದ ದಾಳಿ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾದ ಅತ್ಯಂತ ನಿರ್ಣಾಯಕ

ಹಾರ್ಮುಜ್‌ನಲ್ಲಿ ಮತ್ತೆ ಮೂರು ಹಡಗುಗಳ ಮೇಲೆ ಇರಾನ್‌ ದಾಳಿ Read More »

ಬೆಳ್ತಂಗಡಿ : ಮಗನಿಂದಲೇ ತಂದೆಯ ಕೊಲೆ ಯತ್ನ

ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಮಗನೇ ತಂದೆಯ ಮೇಲೆಯೇ ಮಚ್ಚಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಭರತ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದವರು ಉಜಿರೆ ಗ್ರಾಮದ ಮಣಿಕೆ ನಿವಾಸಿ, ಗಾರೆ ಕೆಲಸ ಮಾಡುವ ನಾರಾಯಣ (52) ಎಂದು ಗುರುತಿಸಲಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರದ ಮಿಲ್‌ನಲ್ಲಿ ಕೆಲಸ ಮಾಡುವ ಭರತ್ ಮತ್ತು ಆತನ ತಂದೆ ನಾರಾಯಣ ಇಬ್ಬರೂ ಮದ್ಯ ಸೇವಿಸಿದ್ದರು.

ಬೆಳ್ತಂಗಡಿ : ಮಗನಿಂದಲೇ ತಂದೆಯ ಕೊಲೆ ಯತ್ನ Read More »

ತಣ್ಣೀರುಬಾವಿ ದರೋಡೆ ಕೃತ್ಯದ ಅರೋಪಿ ಸೆರೆ

ಹುಟ್ಟುಹಬ್ಬ ಆಚರಿಸಲು ಬಂದವರನ್ನು ಬೆದರಿಸಿ ದರೋಡೆ ಮಾಡಿದ್ದ ರೌಡಿಶೀಟರ್‌ ಮಂಗಳೂರು: ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣದ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿಶೀಟ್ ತೆರೆಯಲಾಗಿದೆ. ಏಪ್ರಿಲ್

ತಣ್ಣೀರುಬಾವಿ ದರೋಡೆ ಕೃತ್ಯದ ಅರೋಪಿ ಸೆರೆ Read More »

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಮತದಾನಕ್ಕಾಗಿ ಅಭೂತಪೂರ್ವ ಬಂದೋಬಸ್ತು ನವದೆಹಲಿ: ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮತ್ತು ಎಐಎಡಿಎಂಕೆ – ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ತಮಿಳು ಸೂಪರ್ ಸ್ಟಾರ್

ಇಂದು ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ Read More »

ಪ್ರೀತಿಸಿ ಮಗು ಕರುಣಿಸಿದ ಪ್ರಕರಣ : ಮದುವೆಯಾಗುವುದೇ ಉತ್ತಮ ಎಂದ ಹೈಕೋರ್ಟ್‌

ಯುವತಿಗೆ ಮಾಸಿಕ ಹತ್ತು ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದಿರಾ ಎಂದು ಕೇಳಿದ ಕೋರ್ಟ್‌ ಬೆಂಗಳೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದೆ. ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ. ಯುವತಿಗೆ ಮಾಸಿಕ

ಪ್ರೀತಿಸಿ ಮಗು ಕರುಣಿಸಿದ ಪ್ರಕರಣ : ಮದುವೆಯಾಗುವುದೇ ಉತ್ತಮ ಎಂದ ಹೈಕೋರ್ಟ್‌ Read More »

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

ವೆಬ್‌ಸೈಟ್‌, ಡಿಜಿಲಾಕರ್‌ನಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯ ಬೆಂಗಳೂರು : ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಾರಿ ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರ ಶೈಕ್ಷಣಿಕ ಬದುಕಿನ ಮೊದಲ ಮಹತ್ವದ ತಿರುವು ಇಂದು ನಿರ್ಧಾರವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ Read More »

ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಟೆಕ್ಕಿ

ಹೈದರಾಬಾದ್: ಡ್ರಗ್ಸ್‌ ‌ಕಾರಣದಿಂದ ಕೆಲಸ ಕಳೆದುಕೊಂಡಿದ್ದ ಟೆಕ್ಕಿಯೊಬ್ಬ ಮನೆಯಲ್ಲೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ನಾಚರಾಂ ನಿವಾಸಿ ಸಿ. ಎಚ್. ಶಶಿಧರ್ ಎಂದು ಗುರುತಿಸಲಾಗಿದೆ. ಆತನನ್ನು ಮಾದಕ ವಸ್ತು ನಿಷೇಧ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂದಿತು ಮನೆಯಿಂದ ಪೊಲೀಸರು 17 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗಿಡಗಳಿಂದ ಸುಮಾರು 10 ಕೆ.ಜಿ. ಡ್ರಗ್ಸ್ ದೊರೆಯಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಕೆಲವು ಗಿಡಗಳು ಮೂರು ಮೀ. ಗಳಷ್ಟು ಉದ್ದ ಬೆಳೆದಿದ್ದರೆ ಇನ್ನು ಕೆಲವು

ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಟೆಕ್ಕಿ Read More »

ನೈಟಿ ಹಾಕಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಗಂಡ ಈಗ ಪೊಲೀಸರ ಅತಿಥಿ

ಬೆಳಗಾವಿ: ಸೀರೆ ಉಡಬೇಕು, ನೈಟಿ ಹಾಕಬಾರದು ಎಂದು ಗಂಡ ಹೇಳಿದ ಮೇಲೆಯೂ ವಿಪರೀತ ಸೆಖೆ ಎಂದು ನೈಟಿ ಹಾಕಿದ ಪತ್ನಿಯ ಮೇಲೆ ಕೋಪಗೊಂಡು, ಆಕೆ ಹಾಕಿದ್ದ ನೈಟಿಗೆ ಪತಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಆಕೆಯ ದೇಹ 80% ಸುಟ್ಟು ಹೋದ ಘಟನೆ ಖಾನಾಪೂರದ ನಂದಗಡದಲ್ಲಿ ನಡೆದಿದೆ. ಆರೋಪಿ ಪತಿಯನ್ನು ಕೃಷ್ಣಾಜಿ ಎಂದು ಗುರುತಿಸಲಾಗಿದೆ. ಆತನ ಕ್ರೌರ್ಯಕ್ಕೆ ಬಲಿಯಾದ ಮಹಿಳೆ ಮಂಜುಳಾ. ಇವರಿಬ್ಬರೂ ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮಂಜುಳಾ ನೈಟಿ ಹಾಕುವುದು ಕೃಷ್ಣಾಜಿಗೆ ಸಮ್ಮತವಿರಲಿಲ್ಲ. ಸೀರೆಯನ್ನೇ

ನೈಟಿ ಹಾಕಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಗಂಡ ಈಗ ಪೊಲೀಸರ ಅತಿಥಿ Read More »

error: Content is protected !!
Scroll to Top