ಪುತ್ತೂರು

ಸಾಹಿತ್ಯ–ಶಿಕ್ಷಣ–ಸಾಮಾಜಿಕ ಸೇವೆಯ ಸಮನ್ವಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ‘ಸುವರ್ಣ ಕನ್ನಡಿಗ’ ಪ್ರಶಸ್ತಿ

ಪುತ್ತೂರು: ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಸಮಾಜದ ವಿವಿಧ ಹಂತಗಳ ಮೇಲೆ ಸ್ಪಷ್ಟ ಹಾಗೂ ಸಕಾರಾತ್ಮಕ ಪ್ರಭಾವ ಬೀರಿರುವ ಬಹುಮುಖ ವ್ಯಕ್ತಿತ್ವದ ಚಿಂತನೆ ಕ್ರಿಯಾಶೀಲತೆ ಮತ್ತು ಮಾನವೀಯತೆಗಳ ಭಾವದ ಮೂಲಕ ಪುತ್ತೂರು ತಾಲೂಕಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತನ್ನದೇ ಆದ ವಿಶಿಷ್ಟ ಗುರುತನ್ನ ನಿರ್ಮಿಸಿರುವ ನಿರ್ಗತಿಕರ ಆಪತ್ಬಾಂಧವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು, 2026ನೇ ಸಾಲಿನ ಪ್ರತಿಷ್ಠಿತ ‘ಸುವರ್ಣ ಕನ್ನಡಿಗ’ ಪ್ರಶಸ್ತಿಗೆ […]

ಸಾಹಿತ್ಯ–ಶಿಕ್ಷಣ–ಸಾಮಾಜಿಕ ಸೇವೆಯ ಸಮನ್ವಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ‘ಸುವರ್ಣ ಕನ್ನಡಿಗ’ ಪ್ರಶಸ್ತಿ Read More »

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ 3 ಮತ್ತು 4 ನೇ ಆರೋಪಿಗಳಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಾದ ಮಂಜುನಾಥ ಶೆಣೈ ಮತ್ತು ಕೇಶವ್ ಪರವಾಗಿ ವಾದ ಮಂಡನೆ ಮಾಡಿರುವ ವಕೀಲ ನರಸಿಂಹ ಪ್ರಸಾದ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಧೀಶೆ ಸರಿತಾ ಡಿ. ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದಾಗಿದೆ.

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು Read More »

ಮಾ.25-28:ನೈತಾಡಿ ಬಂಗೇರ ಕುಟುಂಬದ ಸಾವಿರದ ಒಂದು ದೈವಗಳ ತರವಾಡು ಮನೆಯಲ್ಲಿ ನೇಮೋತ್ಸವ

ಪುತ್ತೂರು: ಸುಮಾರು 56 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ನೈತಾಡಿ ಬಂಗೇರ ಕುಟುಂಬಸ್ಥರ ಸಾವಿರದ ಒಂದು ದೈವಗಳ ತರವಾಡು ಮನೆಯಲ್ಲಿ ದೈವಗಳ‌ ನೇಮೋತ್ಸವ ಕಾರ್ಯಕ್ರಮ ಮಾ.25 ರಿಂದ 28ರ ವರೆಗೆ ಜರಗಲಿದೆ. ಮಾ. 25 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪು ಶುದ್ಧ, ಉಳ್ಳಾಕುಲು ದೈವದ ಭಂಡಾರ ತೆಗೆಯುವುದು, ಜಾಗದ ಕಲ್ಲುರ್ಟಿ ನೇಮ, ಮಾ. 26 ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ರಕ್ತೇಶ್ವರಿ, ಪಿಲಿಚಾಮುಂಡಿ ಧರ್ಮದೈವ ವರ್ಣರ ಪಂಜುರ್ಲಿ, ಜಾವತೆ ದೈವಗಳ

ಮಾ.25-28:ನೈತಾಡಿ ಬಂಗೇರ ಕುಟುಂಬದ ಸಾವಿರದ ಒಂದು ದೈವಗಳ ತರವಾಡು ಮನೆಯಲ್ಲಿ ನೇಮೋತ್ಸವ Read More »

ದರ್ಬೆಯಲ್ಲಿ ರಿಕ್ಷಾ – ದ್ವಿಚಕ್ರ ವಾಹನದ ನಡುವೆ ಅಪಘಾತ

ಪುತ್ತೂರು: ದರ್ಬೆಯ ಹರ್ಷ ಮಳಿಗೆಯ ಸಮೀಪ ಇಂದು ಮಧ್ಯಾಹ್ನ ಅಟೋ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಸವಾರ ಗಾಯಗೊಂಡಿದ್ದಾರೆ. ಸ್ಕೂಟಿ ಸವಾರ ಒಳ ರಸ್ತೆಯಿಂದ ಮುಖ್ಯರಸ್ತೆಗೆ ‌ಸಂಪರ್ಕಿಸುತ್ತಿದ್ದು, ಆಟೋ ರಿಕ್ಷಾ ದರ್ಬೆಯಿಂದ ಪುತ್ತೂರಿಗೆ ‌ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಸ್ಕೂಟಿ ರಸ್ತೆಗೆ ಬಿದ್ದು ಸವಾರ ಮತ್ತು ಹಿಂಬದಿ ಸವಾರೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಇವರಿಗೆ ತರಚು ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಯ ‌ಬಳಿಕ ರಿಕ್ಷಾ ಚಾಲಕ ಮತ್ತು ಸ್ಕೂಟಿಯಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.

ದರ್ಬೆಯಲ್ಲಿ ರಿಕ್ಷಾ – ದ್ವಿಚಕ್ರ ವಾಹನದ ನಡುವೆ ಅಪಘಾತ Read More »

ಅಕ್ಷಯ ಕಾಲೇಜಿನಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್’ ಕೆರಿಯರ್ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಕಾಯು ಸಂಘಟನೆಯ ವತಿಯಿಂದ ‘ದಿ ನೆಕ್ಸ್ಟ್ ಚಾಪ್ಟರ್’ ಎಂಬ ಕೆರಿಯರ್ ಆಧಾರಿತ ಕಾರ್ಯಕ್ರಮ ನಡೆಯಿತು. ಅಕ್ಷಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಕ್ಷಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಮತ್ತು ವೃತ್ತಿ ಮಾರ್ಗಗಳ ಬಗ್ಗೆ ಜ್ಞಾನಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ, ಜಾಗತಿಕ ಒಡನಾಟ ಮತ್ತು ಅನುಕೂಲತೆಯ ಬೆಳೆಯುತ್ತಿರುವ ಮಹತ್ವವನ್ನು ಕಾರ್ಯಾಗಾರಾಧಲ್ಲಿ ಹೇಳಲಾಯಿತು. ಸಾಂಪ್ರದಾಯಿಕ

ಅಕ್ಷಯ ಕಾಲೇಜಿನಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್’ ಕೆರಿಯರ್ ಮಾರ್ಗದರ್ಶನ ಕಾರ್ಯಕ್ರಮ Read More »

ಮಾದಕ ದ್ರವ್ಯ ಸೇವಿಸಿದ ಯುವಕನಿಂದ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ: ಬಂಧನ

ಉಪ್ಪಿನಂಗಡಿ: ಮಾದಕ ದ್ರವ್ಯ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಕಾಸರಗೋಡು ನಿವಾಸಿ ಯೂಸುಫ್ ಸಿ. ಇ. ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯ ಕರ್ವೇಲು ಎಂಬಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿದೆ. ಪರೀಕ್ಷಾ ವರದಿಯಲ್ಲಿ ಯುವಕ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ.

ಮಾದಕ ದ್ರವ್ಯ ಸೇವಿಸಿದ ಯುವಕನಿಂದ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ: ಬಂಧನ Read More »

KSRTC ಬಸ್ಸಿನಲ್ಲಿ ಕೀ ಗೊಂಚಲು ಬಿದ್ದು ಸಿಕ್ಕಿದೆ: ಕಳಕೊಂಡವರು ಸಂಪರ್ಕಿಸಲು ಸೂಚನೆ

ಪುತ್ತೂರು: ಇಂದು (23 ಮಾರ್ಚ್ 2026, ಸೋಮವಾರ) ಬೆಳಗ್ಗೆ ಉಪ್ಪಿನಂಗಡಿ ಮಾರ್ಗವಾಗಿ ಹಾಸನದಿಂದ ‌ಪುತ್ತೂರಿಗೆ ಬಂದ F-0102 ಕೆಎಸ್‌ಆರ್‌ಟಿ‌ಸಿ ಬಸ್ಸಿನಲ್ಲಿ ಚಾಲಕನಿಗೆ ಕೀ ಗೊಂಚಲೊಂದು ಬಿದ್ದು ಸಿಕ್ಕಿರುತ್ತದೆ. ಹಾಸನದಿಂದ 8.30 ಕ್ಕೆ ಹೊರಟು ಪುತ್ತೂರಿಗೆ 12 ಗಂಟೆಗೆ ಬಂದು ತಲುಪಿದ ಬಸ್ಸಿನಲ್ಲಿ ಕೀ ಬಂಚ್ ‌ಸಿಕ್ಕಿರುವುದಾಗಿದೆ. ಅದನ್ನು ಕೆಎಸ್‌ಆರ್‌ಟಿ‌ಸಿ ಪುತ್ತೂರು ಘಟಕದ ಇಂಧನ ಶಾಖೆಯಲ್ಲಿ ನೀಡಲಾಗಿತ್ತು, ಕಳಕೊಂಡವರು ಸಂಪರ್ಕಿಸಬಹುದಾಗಿದೆ.

KSRTC ಬಸ್ಸಿನಲ್ಲಿ ಕೀ ಗೊಂಚಲು ಬಿದ್ದು ಸಿಕ್ಕಿದೆ: ಕಳಕೊಂಡವರು ಸಂಪರ್ಕಿಸಲು ಸೂಚನೆ Read More »

ಪುತ್ತೂರು : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಪುತ್ತೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.169/2018ರ ಕಲಂ 323, 504, 506, 406, 424 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳದ ಮಲಪ್ಪುರಂ ನಿವಾಸಿ ನಿಖಿಲ್ ಕೆ (36) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜನಾರ್ದನ ಕೆ.ಎಂ ಹಾಗೂ ಸಿಬ್ಬಂದಿ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿಲುವೈಪುರದಲ್ಲಿ

ಪುತ್ತೂರು : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಅಸೌಖ್ಯದಿಂದ ಮಹಿಳೆ ಮೃತ್ಯು

ಕಾಣಿಯೂರು: ಅಸೌಖ್ಯದಿಂದ ಕಾಣಿಯೂರು ಗ್ರಾಮದ ಕೆನ್ನಾರುವಿನ ರಂಜಿತಾ(33) ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮೃತರು ಪತಿ ರಾಘವೇಂದ್ರ, ಪುತ್ರರಾದ ದಿಶಾಂತ್, ಸುಮಂತ್, ಅತ್ತೆ ಪುಷ್ಪಾವತಿ ಅವರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಮೃತ್ಯು Read More »

ಅರ್ಪಣಾಭಾವದ ಜೀವಂತ ಪ್ರತಿರೂಪ ಕಾವು ಗಣಪಯ್ಯರಿಗೆ ಗೌರವಾರ್ಪಣೆ

ಕಾವು: ರಾಷ್ಟ್ರಸೇವೆಯ ಪವಿತ್ರ ಪಥದಲ್ಲಿ ತನ್ನ ಬದುಕಿನ ಬಹುಪಾಲನ್ನು ನಿಶ್ಶಬ್ದವಾಗಿ ಸಮರ್ಪಿಸಿಕೊಂಡ ಹಿರಿಯ ಶಾಖಾ ಪ್ರಮುಖ ಗಣಪಯ್ಯ ಕಾವು ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಗಣಪಯ್ಯರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಶಾಲು ಹೊದಿಸಿ, ಹಾರ ಹಾಕಿ, ಗೌರವಧನ ಹಾಗೂ ಫಲವಸ್ತುಗಳನ್ನು ನೀಡಿ ಅವರನ್ನು ಸನ್ಮಾನಿಸ, ಮಾತನಾಡಿದ ಅವರು, ನಿತ್ಯ ಶಾಖೆಯ ಮೂಲಕ ರಾಷ್ಟ್ರಚಿಂತನೆಯನ್ನು ತಲೆಮಾರುಗಳಿಗೆ ಪಸರಿಸಿದ ಗಣಪಯ್ಯರಂತಹ ತ್ಯಾಗಮೂರ್ತಿಗಳು ಸಂಘದ ನಿಜವಾದ ಶಕ್ತಿಯಾಗಿದ್ದಾರೆ. ಅವರ

ಅರ್ಪಣಾಭಾವದ ಜೀವಂತ ಪ್ರತಿರೂಪ ಕಾವು ಗಣಪಯ್ಯರಿಗೆ ಗೌರವಾರ್ಪಣೆ Read More »

error: Content is protected !!
Scroll to Top