ಅಪರಾಧ

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ : ಎಸ್‌ಐಟಿ ತನಿಖೆ ವರದಿ

ಆದಾಯ ಕರ ಇಲಾಖೆ ರೈಡ್‌ ನಡೆದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿ.ಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಮಾನಸಿಕ ಖಿನ್ನತೆಯಿಂದ ಸಿ.ಜೆ ರಾಯ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ವಿಶೇಷ ತನಿಖಾ ತಂಡ ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳ ಒತ್ತಡಕ್ಕೆ ರಾಯ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿತ್ತು. ಎಸ್‌ಐಟಿ ತನಿಖೆಯ ವೇಳೆ ಹಲವು ವಿಚಾರಗಳು ಬೆಳಕಿಗೆ […]

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ : ಎಸ್‌ಐಟಿ ತನಿಖೆ ವರದಿ Read More »

ಕೇರಳದ ಹೋಟೆಲ್‌ ಮಾಲಕನ ಹತ್ಯೆ : ಬೆಳ್ತಂಗಡಿಯ ಯುವಕ ಸೆರೆ

ಕೂಪನ್‌ಗಾಗಿ ನಡೆದ ಜಗಳದಲ್ಲಿ ಹತ್ಯೆ ಬೆಳ್ತಂಗಡಿ: ತಾನು ಕೆಲಸ ಮಾಡುತ್ತಿದ್ದ ಕೇರಳದ ಹೋಟೆಲ್‌ನ ಮಾಲಕನನ್ನೇ ಏ.6ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಪೆರ್ದಾಡಿ ನಿವಾಸಿ ಉಮರಬ್ಬ ಎಂಬವರ ಪುತ್ರ ಇರ್ಷಾದ್ (32) ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಡಯಮಂಗಳ- ಕುರಿಯೋಡು ಸ್ವೈಸಿ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲೀಕ ಶಕೀ‌ರ್ ಹುಸೈನ್ ಎಂಬವರನ್ನು ಇರ್ಷಾದ್ ಕೊಲೆ ಮಾಡಿದ್ದಾನೆ. ಬಿರಿಯಾಣಿ ಪಾಕ ತಜ್ಞನಾಗಿದ್ದ ಬೆಳ್ತಂಗಡಿಯ ಇರ್ಷಾದ್ ತಾನು

ಕೇರಳದ ಹೋಟೆಲ್‌ ಮಾಲಕನ ಹತ್ಯೆ : ಬೆಳ್ತಂಗಡಿಯ ಯುವಕ ಸೆರೆ Read More »

ಫಲಿತಾಂಶ ದಿನವೇ ಪಿಯುಸಿ ವಿದ್ಯಾರ್ಥಿನಿ ನಿಗೂಢ ಸಾವು

ತಾಯಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಸಂಬಂಧಿಕರು ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ಬೆಂಗಳೂರಿನ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ ಸಂಬಂಧಿಕರು ವಿದ್ಯಾರ್ಥಿನಿಯ ತಾಯಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಳಾದ ಕಾರಣ

ಫಲಿತಾಂಶ ದಿನವೇ ಪಿಯುಸಿ ವಿದ್ಯಾರ್ಥಿನಿ ನಿಗೂಢ ಸಾವು Read More »

ಇಬ್ಬರು ಕ್ರಿಮಿನಲ್‌ಗಳ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ

ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಪಾತಕಿಗಳು ಮಂಗಳೂರು: ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಇಂಟರ್‌ಪೋಲ್ ಮೂಲಕ ಪೊಲೀಸ್ ಇಲಾಖೆ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ (38) ಮತ್ತು ಶಂಶುದ್ದೀನ್ (36) ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 2017ರಲ್ಲಿ ಕುಶಾಲನಗರದ ಸುಲೈಮಾನ್ ಯಾನೆ ಶಮೀರ್ ನಗರದ ಲೇಡಿಹಿಲ್ ಬಳಿ ಉರ್ವ ಠಾಣೆಯಲ್ಲಿ ಆಗ ಎಎಸ್ಸೈ ಆಗಿದ್ದ ಐತಪ್ಪ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ

ಇಬ್ಬರು ಕ್ರಿಮಿನಲ್‌ಗಳ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ Read More »

ಚಂದ್ರದ್ರೋಣ ಬೆಟ್ಟದಲ್ಲಿ ಬಾಲಕಿ ನಾಪತ್ತೆ ಪ್ರಕರಣ : ನಾಲ್ಕು ದಿನವಾದರೂ ಸಿಗದ ಸುಳಿವು

ಕಿಡ್ನಾಪ್‌ ಆಗಿರುವ ಕುರಿತು ಆತಂಕ ವ್ಯಕ್ತಪಡಿಸಿದ ತಾಯಿ ಚಿಕ್ಕಮಗಳೂರು: ರಾಜ್ಯದ ಅತ್ಯಂತ ಎತ್ತರದ ಪ್ರದೇಶವಾಗಿರುವ ದತ್ತಪೀಠದ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾ ಬೆಟ್ಟದ ಬಳಿ ಕೇರಳದ ಬಾಲಕಿ ಶ್ರೀನಂದಾ (15) ನಾಪತ್ತೆಯಾದ ಪ್ರಕರಣ ಇನನೂ ನಿಗೂಢವಾಗಿಯೇ ಉಳಿದಿದ್ದು, ಬಾಲಕಿಯ ತಾಯಿ ರೋಹಿಣಿ ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಬಾಲಕಿಯ ಹುಡುಕಾಟಕ್ಕಾಗಿ ನೂರಾರು ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಕೊಂಡು 300 ಅಡಿ

ಚಂದ್ರದ್ರೋಣ ಬೆಟ್ಟದಲ್ಲಿ ಬಾಲಕಿ ನಾಪತ್ತೆ ಪ್ರಕರಣ : ನಾಲ್ಕು ದಿನವಾದರೂ ಸಿಗದ ಸುಳಿವು Read More »

ಆರಿಫ್ ಕೊಲೆ ಪ್ರಕರಣದ ಮಹತ್ವದ ಸುಳಿವುಗಳು ಪೊಲೀಸರಿಗೆ ಲಭ್ಯ: 7 ಮಂದಿ ಸೆರೆ

ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಆರಿಫ್ ಕೊಲೆ ಪ್ರಕರಣವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು, ಕೃತ್ಯಕ್ಕೆ ‌ಸಂಬಂಧಿಸಿದ ಹಾಗೆ ಪ್ರಮುಖ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾ. 27 ರಂದು ಆರಿಫ್ ಕೊಲೆ ನಡೆದಿದ್ದು ಆರೋಪಿಗಳಾದ ರಿಫತ್, ಜುಟ್ಟು ಅಶ್ಪಾಕ್, ಖಲೀಲ್, ಶಾಖಿರ್, ಇರ್ಫಾನ್, ರಿಜ್ವಾನ್‌ನನ್ನು ಬಂಧಿಸಲಾಗಿದೆ. ಇವರುಗಳು ಆರಿಫ್ ಬೈಕ್ ಅನ್ನು ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿ ಬಳಿಕ ಢಿಕ್ಕಿ ಹೊಡೆದು ಕೆಳಕ್ಕೆ ಉರುಳಿಸಿದ್ದಾರೆ. ಆ ಬಳಿಕ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಯಾವುದೇ

ಆರಿಫ್ ಕೊಲೆ ಪ್ರಕರಣದ ಮಹತ್ವದ ಸುಳಿವುಗಳು ಪೊಲೀಸರಿಗೆ ಲಭ್ಯ: 7 ಮಂದಿ ಸೆರೆ Read More »

ಸುಳ್ಯ: ರಸ್ತೆ ಬದಿ ತ್ಯಾಜ್ಯ ಎಸೆದವರ ವಿರುದ್ಧ ಕೇಸ್‌

ಬೆಂಗಮಲೆಯಲ್ಲಿ ರಸ್ತೆಯುದ್ಧಕ್ಕೂ ತ್ಯಾಜ್ಯ ರಾಶಿ ಮಂಗಳೂರು : ಸುಳ್ಯ ತಾಲೂಕಿನ ಐವರ್ನಾಡು ಗ್ರಾಪಂ ವ್ಯಾಪ್ತಿಯ ಬೆಳ್ಳಾರೆ-ಸುಳ್ಯ ರಸ್ತೆಯ ಬೆಂಗಮಲೆ ಎಂಬಲ್ಲಿ ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಅಂಗಡಿ ಮಾಲಕರ ಮೇಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಕಂಡು ಬಂದಿದೆ. ತೆರೆದು ಪರಿಶೀಲಿಸಿದಾಗ ಎಲ್ಲ ಮೂರೂ ತ್ಯಾಜ್ಯದ ಚೀಲಗಳಲ್ಲಿ ಸುಳ್ಯ ಗಾಂಧಿನಗರದ ಅಯೋಧ್ಯಾ ಮೆನ್ಸ್‌ಡ್ರೆಸ್ ಸ್ಪೋರ್ಟ್ಸ್‌ ಜೆರ್ಸಿ ಶಾಪ್ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡುಬಂದಿದೆ. ಚೀಲಗಳಲ್ಲಿ

ಸುಳ್ಯ: ರಸ್ತೆ ಬದಿ ತ್ಯಾಜ್ಯ ಎಸೆದವರ ವಿರುದ್ಧ ಕೇಸ್‌ Read More »

ವಿದ್ಯಾರ್ಥಿಗಳ ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಐವರು ಸೆರೆ

ಬಾಡಿಗೆ ರೂಮ್‌ನಲ್ಲಿದ್ದುಕೊಂಡು ಡ್ರಗ್ಸ್‌ ದಂಧೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮಂಗಳೂರು: ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಇವರಿಂದ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರೊಬ್ಬರು ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಸಿಕ್ಕಿದೆ ಎಂದು ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಇವರಿಗೆ

ವಿದ್ಯಾರ್ಥಿಗಳ ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಐವರು ಸೆರೆ Read More »

ರೌಡಿಶೀಟರ್‌ ಆರಿಫ್‌ ಕೊಲೆ ಪ್ರಕರಣ : 7 ಆರೋಪಿಗಳ ಬಂಧನ

ಮಾ.27ರಂದು ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಕೊಲೆಯಾಗಿದ್ದ ಆರಿಫ್‌ ಮಂಗಳೂರು: ಕಿನ್ಯ ಅಜ್ಜಿನಡ್ಕ ನಿವಾಸಿ ರೌಡಿಶೀಟರ್ ಆರಿಫ್ ಕೊಲೆ ಪ್ರಕರಣದ ಏಳು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಜ್ವಾನ್ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂದು ಗುರುತಿಸಲಾಗಿದೆ. ಮಾರ್ಚ್ 27ರ ನಸುಕಿನ ಹೊತ್ತು ಆರಿಫ್ ತನ್ನ ಬೈಕ್‌ನಲ್ಲಿ ಬಂದರ್ ಮೀನು ಮಾರುಕಟ್ಟೆಯ ಕಡೆಗೆ ಪ್ರಯಾಣಿಸುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ತಲುಪುತ್ತಿದ್ದಂತೆ ಹಿಂಬಾಲಿಸಿಕೊಂಡು ಬಂದ ಇನ್ನೊವಾ

ರೌಡಿಶೀಟರ್‌ ಆರಿಫ್‌ ಕೊಲೆ ಪ್ರಕರಣ : 7 ಆರೋಪಿಗಳ ಬಂಧನ Read More »

ಪತಿಯನ್ನು ‌ಚಾಕು ಇರಿದು ಕೊಂದ ಪತ್ನಿ

ಬೆಂಗಳೂರು: ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ‌ಕೊಲೆಗೈದ ಘಟನೆ ಅನ್ನಪೂರ್ಣೇಶ್ವರಿ ನಗರದ ಮಲ್ಲತಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತೌಹಿಬ್ ಪಾಷ ಎಂದು ಗುರುತಿಸಲಾಗಿದೆ. ತೌಹಿಬ್ ಪತ್ನಿ ಸೋಹಾನಾ ಕೊಲೆಗೈದ ಆರೋಪಿ. ಕೌಟುಂಬಿಕ ಕಲಹದ ಕಾರಣಕ್ಕೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪತ್ನಿ, ಆಕೆಯ ತಂದೆ ಮತ್ತು ತಾಯಿ ಸೇರಿ ಈ ಹತ್ಯೆ ಮಾಡಿದ್ದಾರೆ ಎಂದು ಕೊಲೆಯಾದ ತೌಹಿಬ್‌ನ ಮನೆಯವರು ಆರೋಪಿಸಿದ್ದಾರೆ. ಆರೋಪಿ ಸೋಹಾನಾ ಮತ್ತು ಆಕೆಯ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪತಿಯನ್ನು ‌ಚಾಕು ಇರಿದು ಕೊಂದ ಪತ್ನಿ Read More »

error: Content is protected !!
Scroll to Top