ಅಪರಾಧ

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್

ಜಾತಿ ನಿಂದನೆ ಕೇಸಿನಲ್ಲಿ ಬಂಧನಕ್ಕೆ ವಾರಂಟ್‌ ಜಾರಿ ಬೆಂಗಳೂರು : ಜಾತಿನಿಂದನೆ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಟೌನ್ ಠಾಣೆ ಪ್ರಕರಣ ದಾಖಲಾಗಿದ್ದು, ಇದೀಗ ಈ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್​ಗೆ ಕೋರ್ಟ್ ಬಂಧನದ ವಾರಂಟ್ ಜಾರಿ ಮಾಡಿದೆ. ಜಾತಿ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ. […]

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್ Read More »

ಶೃಂಗೇರಿ ಶಾಸಕ ಜೀವರಾಜ್‌ ವಿರುದ್ಧ ಕಾಂಗ್ರೆಸ್‌ ದೂರು

ಅಂಚೆ ಮತಪತ್ರದಲ್ಲಿ ಅಕ್ರಮ ಎಸಗಿದ ಕುರಿತು ಮೂವರ ವಿರುದ್ಧ ಕೇಸ್‌ ದಾಖಲು ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿ.ಎನ್ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಿಕ್ಕಮಗಳೂರು ನಗರ ಠಾಣೆಗೆ ಅಂಚೆ ಮತ ಎಣಿಕೆ ಟೇಬಲ್‌ನ ಎಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ದೂರು ನೀಡಿದ್ದಾರೆ. ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಟ್ರಾಂಗ್ ರೂಂ ಸೀಲ್

ಶೃಂಗೇರಿ ಶಾಸಕ ಜೀವರಾಜ್‌ ವಿರುದ್ಧ ಕಾಂಗ್ರೆಸ್‌ ದೂರು Read More »

ಡ್ರಗ್ಸ್‌ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ : ಆರೋಪಿ ಸೆರೆ

ವಿಟ್ಲ : ಮಾದಕ ದ್ರವ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸಿದ ಮತ್ತು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಉಪನಿರೀಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯುವಕನೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಕೊಳ್ನಾಡು ನಿವಾಸಿ ಮೊಹಮ್ಮದ್ ಅಸ್ಬೀರ್ (26) ಎಂದು ಗುರುತಿಸಲಾಗಿದೆ. ಮೇ 3ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಉಪನಿರೀಕ್ಷಕ ಬಿ.ಎಸ್. ನಾಯಕ್ ಮತ್ತು ಅವರ ಸಿಬ್ಬಂದಿ ವಿಟ್ಲ ಚತುಷ್ಪಥ ರಸ್ತೆಯ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿರದ ಕಾರಣ

ಡ್ರಗ್ಸ್‌ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ : ಆರೋಪಿ ಸೆರೆ Read More »

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ

ಮಂಗಳೂರು: ಸುರತ್ಕಲ್‌ ಸಮೀಪ ಕುಳಾಯಿ ಹೊಸಬೆಟ್ಟುವಿನಲ್ಲಿ 2014ರಲ್ಲಿ ನಡೆದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 2014ರ ಫೆಬ್ರವರಿ 8ರಂದು ಸಂಜೆ 4ರಿಂದ ರಾತ್ರಿ 8ರ ನಡುವೆ ಕುಳಾಯಿ ಹೊಸಬೆಟ್ಟು ಕೋರ್ದಬ್ಬು ಕಲದ ಬಳಿ ವಾಸವಾಗಿದ್ದ ಸುಮತಿ ಪ್ರಭು ಅವರನ್ನು ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿ, ಅವರ ಮೈಮೇಲಿದ್ದ ಸುಮಾರು 3.80 ಲಕ್ಷ ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಆಭರಣಗಳನ್ನು ದರೋಡೆ

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ Read More »

ಊಟ ಮಾಡಿ ಮಲಗಿದ್ದ ಯುವತಿ ಬೆಳಗಾಗುವಾಗ ನಾಪತ್ತೆ

ಮಂಗಳೂರು : ನರಿಂಗಾನ ಗ್ರಾಮದ 19 ವರ್ಷದ ಯುವತಿಯೊಬ್ಬಳು ತನ್ನ ಮನೆಯಿಂದ ಮೇ 4ರ ಬೆಳಗಿನ ಜಾವದಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಕಾಣೆಯಾದ ಹುಡುಗಿಯನ್ನು ಇಬ್ರಾಹಿಂ ಎಂ ಅವರ ಮಗಳು ರಾಭಿಯತುಲ್ ಅಧಭಿಯ ಎಂದು ಗುರುತಿಸಲಾಗಿದೆ. ಆಕೆಯ ತಂದೆ ನೀಡಿದ ದೂರಿನ ಪ್ರಕಾರ, ಮೇ 3ರಂದು ರಾತ್ರಿ 10 ಗಂಟೆ ಸುಮಾರಿಗೆ ಊಟ ಮಾಡಿದ ನಂತರ ಮಲಗಲು ಹೋಗಿದ್ದಳು. ಸೋಮವಾರ ಬೆಳಗಿನ

ಊಟ ಮಾಡಿ ಮಲಗಿದ್ದ ಯುವತಿ ಬೆಳಗಾಗುವಾಗ ನಾಪತ್ತೆ Read More »

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ: ಅಶ್ರಫ್‌ನಿಗೆ ಧರ್ಮದೇಟು ‌ನೀಡಿದ ಎರಡನೇ ಪತ್ನಿಯ ತಾಯಿ

ಪುತ್ತೂರು: ಮೊದಲು ಮದುವೆಯಾಗಿರುವ ‌ಸಂಗತಿಯನ್ನು ರಹಸ್ಯವಾಗಿಟ್ಟು, ಎರಡನೇ ಮದುವೆ ಮಾಡಿಕೊಂಡ ವ್ಯಕ್ತಿಗೆ ಆತನ ಎರಡನೇ ಪತ್ನಿಯ ಕಡೆಯವರು ಮನೆಯೊಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕೆಮ್ಮಿಂಜೆಯ ಬೆಳ್ಳಗುಡ್ಡೆ ನಿವಾಸಿ ಮಹಮ್ಮದ್ ಅಶ್ರಫ್ (35) ಎಂದು ಗುರುತಿಸಲಾಗಿದೆ. ಆರೋಪಿ ಅಶ್ರಫ್‌ಗೆ ಖತೀಜಮ್ಮ ಜೊತೆಗೆ ಮೊದಲೇ ಮದುವೆ ನಡೆದಿದ್ದರೂ, ಅದನ್ನು ರಹಸ್ಯವಾಗಿಟ್ಟು ಮೂಡಬಿದ್ರೆಯ ಐಸಮ್ಮ ಎಂಬವರ ಪುತ್ರಿ ರುಬಿಯಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಚಾರ ತಿಳಿದ ಖತೀಜಮ್ಮ ಅಶ್ರಫ್ ವಿರುದ್ಧ ಪುತ್ತೂರು ಮಹಿಳಾ ಪೊಲೀಸರಿಗೆ ದೂರು

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ: ಅಶ್ರಫ್‌ನಿಗೆ ಧರ್ಮದೇಟು ‌ನೀಡಿದ ಎರಡನೇ ಪತ್ನಿಯ ತಾಯಿ Read More »

ನಡುರಸ್ತೆಯಲ್ಲಿ ನಿಂತು ಪೊಲೀಸರನ್ನು ನಿಂದಿಸಿದ ಮಹಿಳೆ ವಿರುದ್ಧ ದೂರು

ಟ್ರಾಫಿಕ್‌ ನಿಯಂತ್ರಿಸುತ್ತಿದ್ದ ಪೊಲೀಸರ ಜೊತೆ ಕಿರಿಕ್‌ ಮಾಡಿದ ಮಹಿಳೆ ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಎಂಬ ಮಹಿಳೆ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ರಜಾ ದಿನವಾಗಿದ್ದರಿಂದ ಕಟೀಲು ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಗೆಯಂಗಡಿ ಜಂಕ್ಷನ್‌ನಲ್ಲಿ ದೊಡ್ಡ ವಾಹನಗಳನ್ನು ಕಿನ್ನಿಗೋಳಿಯತ್ತ ತಿರುಗಿಸಲಾಗುತ್ತಿತ್ತು ಮತ್ತು ಸಣ್ಣ ವಾಹನಗಳನ್ನು ಮಾತ್ರ ದೇವಸ್ಥಾನದ ಕಡೆಗೆ ಬಿಡಲಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ

ನಡುರಸ್ತೆಯಲ್ಲಿ ನಿಂತು ಪೊಲೀಸರನ್ನು ನಿಂದಿಸಿದ ಮಹಿಳೆ ವಿರುದ್ಧ ದೂರು Read More »

ಬಂಟ್ವಾಳ : ವಾಹನ ಸಹಿತ 42 ಲ.ರೂ. ಡ್ರಗ್ಸ್‌ ವಶ; ಇಬ್ಬರ ಬಂಧನ

ಬಂಟ್ವಾಳ: ಎಂ.ಡಿ.ಎಂ.ಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಅವರಿಂದ 42,30,000 ರೂ. ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡಿದ್ದಾರೆ. ಮೇ 2ರಂದು ಸಂಜೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ ಅವರಿಗೆ ಎಂ.ಡಿ.ಎಂ.ಎ ಸಾಗಾಟದ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ತಪಾಸಣೆ ನಡೆಸಿದರು. ಈ ವೇಳೆ KA-20-Z-9585 ಸಂಖ್ಯೆಯ ಬೊಲೆರೋ ವಾಹನವನ್ನು ತಡೆದು ಪರಿಶೀಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ವಿಚಾರಣೆಗೊಳಪಡಿಸಲಾಯಿತು. ಅವರು

ಬಂಟ್ವಾಳ : ವಾಹನ ಸಹಿತ 42 ಲ.ರೂ. ಡ್ರಗ್ಸ್‌ ವಶ; ಇಬ್ಬರ ಬಂಧನ Read More »

ಬಂಟ್ವಾಳ : 2.38 ಲಕ್ಷ ರೂ. ನಕಲಿ ನೋಟು ವಶ, ಇಬ್ಬರ ಬಂಧನ

ಬಂಟ್ವಾಳ: 2.38 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಮೊಹಮ್ಮದ್ ಸಮೀರ್ (28) ಮತ್ತು ಮೊಹಮ್ಮದ್ ಇರ್ಫಾನ್ (26) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ನಕಲಿ ನೋಟುಗಳ ಚಲಾವಣೆಯ ಬಗ್ಗೆ ದೊರೆತ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆಯ ನಂತರ ಬಂಧಿಸಲಾಗಿದೆ. ಹೆಚ್ಚಿನ ಮೌಲ್ಯದ ನಕಲಿ ನೋಟುಗಳನ್ನು ಹೊಂದಿದ್ದ ಆರೋಪಿಗಳು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೂರು

ಬಂಟ್ವಾಳ : 2.38 ಲಕ್ಷ ರೂ. ನಕಲಿ ನೋಟು ವಶ, ಇಬ್ಬರ ಬಂಧನ Read More »

ದುಬೈಯಿಂದ ಗಂಡ ಪಾರ್ಸಲ್‌ ಕಳುಹಿಸಿದ ಕಥೆ ನಂಬಿ 6.84 ಲ.ರೂ. ಕಳೆದುಕೊಂಡ ಮಹಿಳೆ

ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಂಗಳೂರು : ದುಬೈನಿಂದ ಪತಿ ಕಳುಹಿಸಿದ ಪಾರ್ಸೆಲ್ ಪಡೆಯಲು ಹಣ ನೀಡಬೇಕು ಎಂಬ ವಂಚಕರ ಮಾತು ನಂಬಿದ ಮಹಿಳೆಯೊಬ್ಬರು ಬರೋಬ್ಬರಿ 6,84,500 ರೂ. ವಂಚಕರಿಗೆ ನೀಡಿ ಮೋಸ ಹೋಗಿದ್ದಾರೆ. ಈ ಬಗ್ಗೆ ಹಣ ಕಳಕೊಂಡ ಮಹಿಳೆ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಮಂಗಳೂರಿನಲ್ಲಿ ವಾಸವಾಗಿದ್ದು ಪತಿ ದುಬೈನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಂದ ತನಗೆ ಬೇಕಾಗುವ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸುತ್ತಿದ್ದರು. ಏ.21ರಂದು ಸಂಜೆ ತಾನು

ದುಬೈಯಿಂದ ಗಂಡ ಪಾರ್ಸಲ್‌ ಕಳುಹಿಸಿದ ಕಥೆ ನಂಬಿ 6.84 ಲ.ರೂ. ಕಳೆದುಕೊಂಡ ಮಹಿಳೆ Read More »

error: Content is protected !!
Scroll to Top