ಅಪರಾಧ

ಲವ್ ಜಿಹಾದ್: ಸಮೀರ್‌ಗೆ ಹಿಂದೂ ಮುಖಂಡರಿಂದ ಥಳಿತ

ಕೊಪ್ಪಳ: ಲವ್ ಜಿಹಾದ್ ಘಟನೆಯೊಂದು ಕೊಪ್ಪಳದಲ್ಲಿ ‌ನಡೆದುದ್ದು, ಮುಸ್ಲಿಂ ಯುವಕನನ್ನು ಹಿಡಿದು ಹಿಂದೂ ಪರ ಮುಖಂಡರು ಧರ್ಮದೇಟು ‌ನೀಡಿದ ಘಟನೆ ನಡೆದಿದೆ. ಹಿಂದೂ ಅಪ್ರಾಪ್ತ ಯುವತಿಯ ಜೊತೆಗೆ ಓಡಾಡುತ್ತಿದ್ದ ಮುಸ್ಲಿಂ ಯುವಕ ಸಮೀರ್‌ನಿಗೆ ಥಳಿಸಲಾಗಿದ್ದು, ಸದ್ಯ ಆತ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಸಮೀರ್ ಹಿಂದೂ ಯುವತಿಯ ಜೊತೆಗೆ ಸರಸ ಸಲ್ಲಾಪವಾಡಿದ ಆರೋಪವಿದ್ದು, ಆತನ ಮೊಬೈಲ್ ಪರಿಶೀಲನೆ ನಡೆಸಿದಲ್ಲಿ ಸಾಕ್ಷಿ ದೊರೆಯುತ್ತದೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಮುಖಂಡರು ಒತ್ತಾಯಿಸಿದ್ದಾರೆ. ಇನ್ನು ಸಮೀರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ […]

ಲವ್ ಜಿಹಾದ್: ಸಮೀರ್‌ಗೆ ಹಿಂದೂ ಮುಖಂಡರಿಂದ ಥಳಿತ Read More »

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶರೀಫ್ ಬಂಟ್ವಾಳ ಪೊಲೀಸರ ಬಲೆಗೆ

ಬಂಟ್ವಾಳ: ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ಬಂಟ್ವಾಳ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ಹಲವು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದುನಿಯಾ ಶರೀಫ್ ಅಲಿಯಾಸ್ ಮಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ. ಈತ ಬಂಟ್ವಾಳದ ಕರಿಯಂಗಳ ನಿವಾಸಿ. ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ‌ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈಗ ಆರೋಪಿ ಭಾರತಕ್ಕೆ ಹಿಂದಿರುಗಿದ್ದು, ಆತನ ಬರುವಿಕೆಯ ಮಾಹಿತಿ ಪಡೆದ ಪೊಲೀಸರು ಮುಂಬೈ ಸಹರಾ ಠಾಣಾ ಪೊಲೀಸರ ನೆರವಿನ ಜೊತೆಗೆ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶರೀಫ್ ಬಂಟ್ವಾಳ ಪೊಲೀಸರ ಬಲೆಗೆ Read More »

ಪತ್ನಿಗೆ ಚಾಕು ಚುಚ್ಚಲು ಬಂದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದ ಪತಿಯೊಬ್ಬನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ‌ನೀಡಿರುವ ಘಟನೆ ಮಾದನಾಯಕನಹಳ್ಳಿಯ ದಾಸನಪುರದಲ್ಲಿ ‌ನಡೆದಿದೆ. ಆರೋಪಿ ಪತಿಯನ್ನು ‌ಸಂಜಯ್ ಎಂದು ಗುರುತಿಸಲಾಗಿದೆ. ಸಂಜಯ್ ತನ್ನ ಪತ್ನಿಗೆ ಚಾಕು ಇರಿಯಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಹಾಗೆಯೇ ಸಂಜಯ್‌ಗೆ ಹಿಗ್ಗಾಮುಗ್ಗ ಬಾರಿಸಿದ್ದಾರೆ. ಸಂಜಯ್ ಎರಡನೇ ಮದುವೆಯಾಗಿದ್ದು, ವಿಪರೀತ ಕುಡಿತದ ಚಟ‌ ಹೊಂದಿದ್ದ. ಇದರಿಂದ ಬೇಸತ್ತ ಪತ್ನಿ ಆತನಿಂದ ಬೇರೆಯಾಗಿ ವಾಸಿಸುತ್ತಿದ್ದಳು. ಪತ್ನಿ ರಸ್ತೆಯಲ್ಲಿ ನಡೆದುಕೊಂಡು

ಪತ್ನಿಗೆ ಚಾಕು ಚುಚ್ಚಲು ಬಂದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು Read More »

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಹಿರಿಯಡ್ಕ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ‌ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಪಕ್ಕಾಲು ಹೆಬ್ಬಾರು ಸೇತುವೆ ಬಳಿಯಲ್ಲಿ ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುರ್ಕಾಲುವಿನ ‌ಸುಹಾಸ್(21) ಮತ್ತು ಕಾಪು ಭರತ್ ನಗರದ ಲವ ಶೆಟ್ಟಿ(64) ಎಂದು ಗುರುತಿಸಲಾಗಿದೆ. ಆರೋಪಿಗಳು ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಪೆರ್ಡೂರು ಕಡೆಯಿಂದ ಹಿರಿಯಡ್ಕದತ್ತ ನಾಲ್ಕು ದನಗಳನ್ನು ಪಾಪಿಗಳು ಬೊಲೆರೋ ಗೂಡ್ಸ್ ‌ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದರು. ಈ ವಾಹನ ಪಕ್ಕಾಲು ‌ಹೆಬ್ಬಾರು ಸೇತುವೆ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಆರೋಪಿಗಳಿಬ್ಬರನ್ನು

ಅಕ್ರಮವಾಗಿ 4 ಜಾನುವಾರುಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ Read More »

ಕಡಬ: ಪೆಟ್ರೋಲು ಸುರಿದು ಹತ್ಯೆಗೆ ಯತ್ನ

ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತಿಗೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಐತ್ತೂರು ನಿವಾಸಿ ಬೇಬಿ ಕೆ.ಎಸ್. ಎಂಬವರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ತನ್ನ ಮನೆಯ ಸಮೀಪ ಬೋರ್‌ವೆಲ್‌ನಲ್ಲಿ ನೀರು ಸಿಕ್ಕಿದ್ದರಿಂದ ಅಸೂಯೆಗೊಂಡ ಗಂಡನ ಸಹೋದರ ಕುಸುಮಾಧರ(37) ಎಂಬಾತ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ್ದು, ಈ ವೇಳೆ ತಾನು ಬೊಬ್ಬೆ ಹಾಕಿದಾಗ ಪೆಟ್ರೋಲ್ ಕ್ಯಾನ್ ಮತ್ತು

ಕಡಬ: ಪೆಟ್ರೋಲು ಸುರಿದು ಹತ್ಯೆಗೆ ಯತ್ನ Read More »

ರೈಲಿನಲ್ಲಿ ಸೀಟು ಜಗಳ : ರೈಲ್ವೆ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತದಿಂದ ಗಂಭೀರ ಗಾಯ

ಸೀಟಿಗಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪ್ರಯಾಣಿಕನಿಗೆ ಇರಿದ ದುಷ್ಕರ್ಮಿಗಳು ಬೆಂಗಳೂರು : ರೈಲಿನಲ್ಲಿ ಸೀಟಿನ ವಿಚಾರದಲ್ಲಿ ಜಗಳವಾಗಿ ಚಾಕುವಿನಿಂದ ಇರಿದಿದ್ದು, ಓರ್ವ ಪ್ರಯಾಣಿಕ ಹಾಗೂ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ರೈಲ್ವೆ ನಿಲ್ದಾಣದ ಸ್ವಲ್ಪ ದೂರದಲ್ಲಿ ಬುಧವಾರ ನಡೆದಿದೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಮೂವರು ಪ್ರಯಾಣಿಕರನ್ನು ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿರುವ ತುಮಕೂರು ಮೂಲದ ಶಿವಕುಮಾ‌ರ್ ಹಾಗೂ ರೈಲ್ವೆ ಸಿಬ್ಬಂದಿ ಕುಮಾರ್

ರೈಲಿನಲ್ಲಿ ಸೀಟು ಜಗಳ : ರೈಲ್ವೆ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತದಿಂದ ಗಂಭೀರ ಗಾಯ Read More »

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ

ರಾತ್ರಿ ಕಾರು ತಡೆದು ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ ಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಎನ್ನಲಾದ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಶ್ಚಿಮ ಬಂಗಾಳ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ Read More »

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು

ಕಚೇರಿಯಲ್ಲಿ ರಾಸಲೀಲೆಯಾಡಿದ ವಿಡಿಯೋ ವೈರಲ್‌ ಆದ ಬಳಿಕ ಅಮಾನತುಗೊಂಡಿದ್ದ ಉನ್ನತ ಅಧಿಕಾರಿ ಬೆಂಗಳೂರು: ಮಹಿಳೆಯರೊಂದಿಗೆ ಕಚೇರಿಯಲ್ಲೇ ರಾಸಲೀಲೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತಿನಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ. ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್‌ ಅಮಾನತು ರದ್ದು Read More »

ಪಂಜಾಬಿನಲ್ಲಿ ಬೆನ್ನುಬೆನ್ನಿಗೆ ಎರಡು ಸ್ಫೋಟ : ವಿಧ್ವಂಸಕ ಕೃತ್ಯದ ಶಂಕೆ

ಬಿಎಸ್‌ಎಫ್‌ ಹೆಡ್‌ಕ್ವಾರ್ಟರ್ಸ್‌, ಸೇನಾ ನೆಲೆಯ ಬಳಿ ಸ್ಫೋಟ ಜಲಂಧರ್ : ಪಂಜಾಬಿನ ಜಲಂಧರ್‌ನಲ್ಲಿರುವ ಬಿಎಸ್‌ಎಫ್ ಪ್ರಧಾನ ಕಚೇರಿ ಸಮೀಪ ಬಿಎಸ್‌ಎಫ್ ಚೌಕ್ ಪ್ರದೇಶದಲ್ಲಿ ಮತ್ತು ಅಮೃತಸರದಲ್ಲಿ ಸೇನಾ ನೆಲೆಯ ಸಮೀಪ ಬೆನ್ನುಬೆನ್ನಿಗೆ ಎರಡು ಸ್ಫೋಟಗಳು ನಿನ್ನೆ ರಾತ್ರಿ ಸಂಭವಿಸಿದ್ದು, ವಿಧ್ವಂಸಕ ಕೃತ್ಯವೆಂದು ಅನುಮಾನಿಸಲಾಗಿದೆ. ಜಲಂಧರ್‌ನಲ್ಲಿ ಸ್ಕೂಟರ್‌ ಒಂದರಲ್ಲಿ ಸಂಭವಿಸಿದ ಸ್ಫೋಟ ಇಡೀ ನಗರವನ್ನು ಭೀತಿಗೀಡುಮಾಡಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ. ಸ್ಫೋಟದ ತೀವ್ರತೆಗೆ ಗಾಬರಿಗೊಂಡ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡುತ್ತಿರುವುದು

ಪಂಜಾಬಿನಲ್ಲಿ ಬೆನ್ನುಬೆನ್ನಿಗೆ ಎರಡು ಸ್ಫೋಟ : ವಿಧ್ವಂಸಕ ಕೃತ್ಯದ ಶಂಕೆ Read More »

ಸಚಿವ ಜಮೀರ್‌ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಆಭರಣ ಕದ್ದ ಇಬ್ಬರ ಬಂಧನ

ತಾಯಿಯ ಸಂಬಂಧಿಕನಿಂದಲೇ ಕಳ್ಳತನ ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳರನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಸಚಿವ ಜಮೀರ್ ಮನೆಯಿಂದ ಕಳೆದ ಮೂರು ವರ್ಷದಲ್ಲಿ ಹಂತ ಹಂತವಾಗಿ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಎಗರಿಸಿದ್ದರು. ಜಮೀರ್ ಆರೋಗ್ಯ ವಿಚಾರಿಸುವ ಸಲುವಾಗಿ ಪದೇಪದೆ ಮನೆಗೆ ಬರುತ್ತಿದ್ದ ಅಮೀರ್ 2023ರಿಂದ ನಿರಂತರವಾಗಿ 1 ಕೆಜಿ 200 ಗ್ರಾಂ ಚಿನ್ನಾಭರಣ ಎಗರಿಸಿದ್ದಾನೆ. ಬಂಧಿತ

ಸಚಿವ ಜಮೀರ್‌ ಮನೆಯಿಂದ ಕೋಟಿಗಟ್ಟಲೆ ಮೌಲ್ಯದ ಆಭರಣ ಕದ್ದ ಇಬ್ಬರ ಬಂಧನ Read More »

error: Content is protected !!
Scroll to Top