ಸುದ್ದಿ

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಮತಾಂತರವಾಗಿದ್ದ ಕಿಲಾಡಿ ಮಂಗಳೂರು: ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಕೊಲೆ ಪ್ರಕರಣವೊಂದರ ಆರೋಪಿ, ಕುಖ್ಯಾತ ರೌಡಿಶೀಟರ್‌ನ ಸಹಚರನನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿ ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಬಳ್ಳಾರಿ ಮೂಲದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶ್ಯಾಮ ಪುರದ ಬೇಕರಿ ಸಮೀಪ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೂಫೀಯಾನ್ ಕಳೆದ ಹಲವು ವರ್ಷಗಳಿಂದ ಕಲಬುರಗಿ, ಬಳ್ಳಾರಿ, ಮುಂಬೈ ಮತ್ತು […]

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ Read More »

ಟಿ20 ವಿಶ್ವಕಪ್‌ : ಭಾರತ-ನ್ಯೂಜಿಲೆಂಡ್‌ ಫೈನಲ್‌ ಕಾದಾಟಕ್ಕೆ ಶುರುವಾಗಿದೆ ಕ್ಷಣಗಣನೆ

ಯಾರೇ ಗೆದ್ದರೂ ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ಇತಿಹಾಸ ರಚನೆ ಅಹದಾಬಾದ್‌: ಟಿ20 ವಿಶ್ವಕಪ್‌ನ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಅಂತಿಮ ಪಂದ್ಯ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಲು ಕಾತರವಾಗಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲವಾದ್ದರಿಂದ ಈ ಪಂದ್ಯ

ಟಿ20 ವಿಶ್ವಕಪ್‌ : ಭಾರತ-ನ್ಯೂಜಿಲೆಂಡ್‌ ಫೈನಲ್‌ ಕಾದಾಟಕ್ಕೆ ಶುರುವಾಗಿದೆ ಕ್ಷಣಗಣನೆ Read More »

ಗುಡ್ಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ

ಯಲ್ಲಾಪುರ: ಜೇನುಕಲ್ಲು ಗುಡ್ಡದ ಮೇಲಿಂದ ಹಾರಿ ಧಾರವಾಡದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ(23) ಎಂದು ಗುರುತಿಸಲಾಗಿದೆ. ಶ್ರೀನಿಧಿ ಅವರು ತಾವು ಸ್ಕೂಟಿಯಲ್ಲಿ ಗೋಕರ್ಣಕ್ಕೆ ಹೋಗುವುದಾಗಿ ಹೇಳಿ ಬಂದಿದ್ದರು. ಈ ಸಂಬಂಧ ಮೃತರ ತಂದೆ ಕೃಷ್ಣ ಕಡಕೋಳ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ಮಗ ಯಾವುದೋ ವಿಚಾರವನ್ನು ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ನಮಗೆ ಯಾವ ಸಂಶಯ ಸಹ ಇಲ್ಲ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ

ಗುಡ್ಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ Read More »

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಆರೋಪಿಗಳು ಅಂದರ್

ಬೆಂಗಳೂರು: ಕಾಲು ತಾಗಿತು ಎಂಬ ವಿಷಯಕ್ಕೆ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವನಹಳ್ಳಿಯಲ್ಲಿ ‌ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಶಿಕುಮಾರ್ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಮಂಜುನಾಥ ಮತ್ತು ಭಾಗ್ಯರಾಜ್ ಎಂದು ಗುರುತಿಸಲಾಗಿದೆ. ಶಿವನಹಳ್ಳಿಯ ಹೊಟೇಲ್ ಒಂದರಲ್ಲಿ ಶಶಿಕುಮಾರ್ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮಂಜುನಾಥನ ಕಾಲನ್ನು ಶಶಿಕುಮಾರ್ ತುಳಿದಿದ್ದಾರೆ. ಈ ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭವಾಗಿದೆ. ಇದೇ ಸಮಯದಲ್ಲಿ ಮಂಜುನಾಥ ತನ್ನ ಸಹೋದರ ಭಾಗ್ಯರಾಜ್‌ನನ್ನು ‌ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಜಗಳ ತಾರಕಕ್ಕೇರಿ ಭಾಗ್ಯ ರಾಜ್ ಶಶಿಕುಮಾರ್

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಆರೋಪಿಗಳು ಅಂದರ್ Read More »

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌

ನೇತ್ರಾವತಿ ನದಿ ತೀರದಲ್ಲಿ ಕಂಡುಬಂದಿದ್ದ ರಾಶಿ ರಾಶಿ ಆಧಾರ್‌ ಕಾರ್ಡ್‌ ಬಂಟ್ವಾಳ : ಎರಡು ದಿನಗಳ ಹಿಂದೆ ಫರಂಗಿಪೇಟೆ ಸಮೀಪ ನೇತ್ರಾವತಿ ನದಿ ದಡದಲ್ಲಿ ಆಧಾರ್‌ ಕಾರ್ಡ್‌ ರಾಶಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಫರಂಗಿಪೇಟೆ ಅಂಚೆ ಇಲಾಖೆ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಮಾ.3ರಂದು ಸಮಯ ಸಂಜೆ ಸ್ಥಳೀಯ ನಿವಾಸಿಗಳ 2013ರಿಂದ 2023ರವರೇಗಿನ ಅಂದಾಜು 500 ಮೂಲ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್

ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ : ಅಂಚೆ ಇಲಾಖೆ ವಿರುದ್ಧ ಕೇಸ್‌ Read More »

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ

ಬಾಗಲಕೋಟೆ: ತನ್ನ ಮಗನ ಕೈಯಿಂದ ಮುಸ್ಲಿಂ ತಂದೆಯೊಬ್ಬ ಸೆಕ್ಟರ್ 44 ಮಸೀದಿಯ ಗೋಡೆಯ ಮೇಲೆಯೇ ‘ಜೈ ಶ್ರೀರಾಮ್’ ಎಂದು ಬರೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶಿವಾಜಿ ಮೆರವಣಿಗೆಯ ಸಮಯದಲ್ಲಿ ನಡೆದ ಕಲ್ಲು ತೂರಾಟ ಘಟನೆಯ ಕಾವು ಕಡಿಮೆಯಾಗುವ ಮೊದಲೇ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದ್ದು, ನಗರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಸತ್ಯ. ಮಗನ ಕೈಯಿಂದ ಗೋಡೆ ಮೇಲೆ ಬರೆಯಿಸಿ ಬಳಿಕ ಅಲ್ಲಿಂದ ಆಟೋ ಹತ್ತಿ ತೆರಳಿದ್ದಾರೆ. ಈ

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಭಟ್ಕಳ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ವೈಯಕ್ತಿಕ ಕಾರಣಗಳ ಬೇಸರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಗದ್ದೆಯಲ್ಲಿ ನಡೆದಿದೆ. ಮೃತನನ್ನು ‌ಕೌಶಿಕ್ ಸುಬ್ರಾಯ ನಾಯ್ಕ ಎಂದು ಗುರುತಿಸಲಾಗಿದೆ. ಕೌಶಿಕ್ ಓದಿನಲ್ಲಿ ಪ್ರತಿಭಾವಂತನಾಗಿದ್ದು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ. ಆದರೆ ಶುಕ್ರವಾರ ಭೌತಶಾಸ್ತ್ರ ಪರೀಕ್ಷೆ ಬರೆಯಬೇಕಾಗಿದ್ದ ಹುಡುಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೈಯಕ್ತಿಕ ಕಾರಣಗಳಿಂದ ಬೇಸತ್ತು ಆತ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಕೊಚ್ಚಿಯಲ್ಲಿ ಲಂಗರು ಹಾಕಿದ ಇರಾನ್‌ನ ಸಮರ ನೌಕೆ

ಕೊಚ್ಚಿ ಬಂದರಿನಲ್ಲಿ ಕೆಲವು ದಿನಗಳಿಂದ ನಿಂತಿರುವ ಯುದ್ಧನೌಕೆ ನವದೆಹಲಿ: ಇರಾನಿನ ಯುದ್ಧ ನೌಕೆಯನ್ನು ಅಮೆರಿಕ ಮುಳುಗಿಸಿದ ಬೆನ್ನಲ್ಲೇ ಭಾರತ ಇರಾನಿನ ಇನ್ನೊಂದು ಹಡಗನ್ನು ಕೊಚ್ಚಿಯಲ್ಲಿ ತುರ್ತಾಗಿ ನಿಲ್ಲಿಸಲು ಅನುಮತಿ ನೀಡಿದ ವಿಚಾರ ಬೆಳಕಿಗೆ ಬಂದಿದೆ. ಇರಾನ್ ಯುದ್ಧನೌಕೆ IRIS ದೇನಾವನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸುವ ಕೆಲವು ದಿನಗಳ ಮೊದಲು IRIS Lavan ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತು. ಇರಾನಿನ ವಿನಂತಿಯನ್ನು ಸ್ವೀಕರಿಸಿದ ಭಾರತ ಕೊಚ್ಚಿಯಲ್ಲಿ ನಿಲ್ಲಿಸಲು ಅನುಮತಿ ನೀಡಿದೆ. ಹಡಗಿನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದರಿಂದ

ಕೊಚ್ಚಿಯಲ್ಲಿ ಲಂಗರು ಹಾಕಿದ ಇರಾನ್‌ನ ಸಮರ ನೌಕೆ Read More »

ಸೈಕಲ್‌ನಿಂದ ಬಿದ್ದು ಬಾಲಕ ಸಾವು

ವಿಟ್ಲ: ಬಾಲಕ ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ವಿಟ್ಲ ಸಮೀಪ ಕೊಳ್ನಾಡು ಎಂಬಲ್ಲಿ ಸಂಭವಿಸಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಸ್ಮ ಎಂಬವರ ಪುತ್ರ ಆಸಿಫ್‌ (12) ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಬಾಲಕ. ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುವ ವೇಳೆ ರಸ್ತೆಯ ತಿರುವಿನಲ್ಲಿ ಸೈಕಲ್‌ ನಿಯಂತ್ರಣ ತಪ್ಪಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಆಸೀಪ್‌ನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯರು

ಸೈಕಲ್‌ನಿಂದ ಬಿದ್ದು ಬಾಲಕ ಸಾವು Read More »

ವಿಟ್ಲದ ನೂಜಿಯಲ್ಲಿ ಮತ್ತೊಂದು ಭಾರಿ ಸ್ಫೋಟ

ದಾಸ್ತಾನು ಇಟ್ಟ ಪಟಾಕಿ ಬಿಸಿಲಿಗೆ ಸ್ಫೋಟಿಸಿ ಆತಂಕ ವಿಟ್ಲ: ವಿಟ್ಲ ಸಮೀಪದ ಕಂಬಳಬೆಟ್ಟು ನೂಜಿ ಎಂಬಲ್ಲಿ ಮ್ತೊಮ್ಮೆ ಭಾರಿ ಸ್ಫೋಟ ಸಂಭವಿಸಿದೆ. ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸಿಡಿದು ಭಾರಿ ಸ್ಫೋಟಗೊಂಡ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ವರ್ಷ ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಡ್ಕ ಪರಿಸರದ ಕೋರೆಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟ ಗೊಂಡ ಘಟನೆ ನಡೆದಿತ್ತು. ಈ ಘಟನೆಯಿಂದ ಆಸುಪಾಸಿನ ಮನೆಗಳಿಗೆ, ಮರ ಗಿಡಗಳಿಗೆ ಹಾನಿಯಾಗಿತ್ತು. ಇದೀಗ ಮತ್ತೆ ಅದೇ ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನ

ವಿಟ್ಲದ ನೂಜಿಯಲ್ಲಿ ಮತ್ತೊಂದು ಭಾರಿ ಸ್ಫೋಟ Read More »

error: Content is protected !!
Scroll to Top