ಸುದ್ದಿ

ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ : ಮೇ 29ರಿಂದ ಶಾಲಾರಂಭ

ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳು ಬೆಂಗಳೂರು: 2026 – 27ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 29ರಿಂದ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ. ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್‌ 3 ರಿಂದ 21 ರವರೆಗೆ ದಸರಾ ರಜೆ ಹಾಗೂ 2027ರ ಏ.11ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ಶಾಲೆಗಳ ಮೊದಲ ಅವಧಿ ಮೇ […]

ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ : ಮೇ 29ರಿಂದ ಶಾಲಾರಂಭ Read More »

ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : ಮೂವರು ಸಜೀವ ದಹನ

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸಂಭವಿಸಿದ ದುರಂತ ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ. ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು

ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : ಮೂವರು ಸಜೀವ ದಹನ Read More »

ಮೆರವಣಿಗೆ ಮೇಲೆ ಹರಿದ ಕಾರು : ಬಾಲಕಿ ಸಾವು; 9 ಮಂದಿಗೆ ಗಾಯ

ಅಂಬೇಡ್ಕರ್‌ ಜಯಂತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಸಂಭವಿಸಿದ ದುರಂತ ಚಿಕ್ಕಮಗಳೂರು : ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಕಾರು ಹರಿದು ಬಾಲಕಿ ಮೃತಪಟ್ಟು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಈ ಘಟನೆಯು ಹಾಸನದ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ.

ಮೆರವಣಿಗೆ ಮೇಲೆ ಹರಿದ ಕಾರು : ಬಾಲಕಿ ಸಾವು; 9 ಮಂದಿಗೆ ಗಾಯ Read More »

ಬಾವಿಯಲ್ಲಿ ಬಾಲಕಿಯರಿಬ್ಬರ ಶವ ಪತ್ತೆ

ಕಲಬುರ್ಗಿ: ಜಿಲ್ಲೆಯ ಯಡ್ರಾಮಿಯ ಇಜೇರಿ ಗ್ರಾಮದಲ್ಲಿ ಇಬ್ಬರು ಬಾಲಕಿಯರ ಶವಗಳು ಬಾವಿಯಲ್ಲಿ ಪತ್ತೆಯಾಗಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ. ನಂದಿನಿ(16) ಮತ್ತು ಸಂಜನಾ(17) ಮೃತ ಬಾಲಕಿಯರು. ಈ ಇಬ್ಬರೂ ಚಿಕ್ಕಪ್ಪ – ದೊಡ್ಡಪ್ಪನ ಮಕ್ಕಳಾಗಿದ್ದಾರೆ. ಇಬ್ಬರ ಕೈಗಳನ್ನೂ ಕಟ್ಟಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿರುವುದಾಗಿದೆ. ಈ ಪ್ರಕರಣ ನಿಗೂಢತೆಯಿಂದ ಕೂಡಿದ್ದು ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜೇವರ್ಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಇನ್ನೇನಾದರೂ ಅನುಮಾನಾಸ್ಪದ

ಬಾವಿಯಲ್ಲಿ ಬಾಲಕಿಯರಿಬ್ಬರ ಶವ ಪತ್ತೆ Read More »

ಲವ್ ಜಿಹಾದಿ ಮುಸ್ತಫಾನಿಗೆ ‌ಮಟ್ಕಾ ಬುಕ್ಕಿಗಳ ಜೊತೆ ಸಂಪರ್ಕ?

ಕೊಪ್ಪಳ: ಮುಸ್ತಫಾ ಖಾದ್ರಿಯ ಲವ್ ಜಿಹಾದ್ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಮತ್ತೊಂದು ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ. ಆರೋಪಿ ಮುಸ್ತಫಾನಿಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳ ‌ಜೊತೆಗೆ ಸಂಪರ್ಕ ಇದ್ದು, ಅವರಿಂದ ಆರ್ಥಿಕ ನೆರವು ದೊರೆಯುತ್ತಿದ್ದ ಸಂದೇಹ ವ್ಯಕ್ತವಾಗಿದ್ದು, ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಪೊಲೀಸರಿಗೆ ದೂರು ನೀಡಿದೆ. ಕೊಪ್ಪಳದ ಕಂಪ್ಲಿ ಗ್ರಾಮದ ಮುಸ್ತಫಾ ಗೋವಾ ಮತ್ತು ಮುಂಬೈ ನಗರಗಳ ಮಟ್ಕಾ ಬುಕ್ಕಿಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದು, ಅವರು ನೀಡುವ ಹಣದಿಂದಲೇ ಐಷಾರಾಮಿ

ಲವ್ ಜಿಹಾದಿ ಮುಸ್ತಫಾನಿಗೆ ‌ಮಟ್ಕಾ ಬುಕ್ಕಿಗಳ ಜೊತೆ ಸಂಪರ್ಕ? Read More »

ಅಕ್ರಮ ಸ್ಪೋಟಕಗಳ ವಶ: ಆರೋಪಿ ಪೊಲೀಸ್ ವಶಕ್ಕೆ

ವಿಟ್ಲ: ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಸುಡುಮದ್ದು ತಯಾರಿಸಲು ಅಕ್ರಮವಾಗಿ ಸ್ಪೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಂಬಳಬೆಟ್ಟು ಸಮೀಪದ ಅಮೈ ನಿವಾಸಿ ಜಗದೀಶ ಪೂಜಾರಿ ಎಂದು ಗುರುತಿಸಲಾಗಿದೆ. ಜಗದೀಶ್ ತಮ್ಮ ಮನೆಯಲ್ಲಿ ಸ್ಪೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ತಪಾಸಣೆಯಲ್ಲಿ ಸುಮಾರು 1.9 KG ಗಳಷ್ಟು ಅನುಮಾನಾಸ್ಪದ ‌ಸ್ಪೋಟಕಗಳು ಪತ್ತೆಯಾಗಿವೆ. ಜನವಸತಿ ಪ್ರದೇಶದಲ್ಲಿ ಯಾವುದೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ

ಅಕ್ರಮ ಸ್ಪೋಟಕಗಳ ವಶ: ಆರೋಪಿ ಪೊಲೀಸ್ ವಶಕ್ಕೆ Read More »

ಆರಿಫ್ ಹತ್ಯೆ: ಮತ್ತೆ ಮೂವರು ಆರೋಪಿಗಳ ಬಂಧನ

ಮಂಗಳೂರು: ನಗರವನ್ನೇ ಹೆಚ್ಚು ಬೀಳಿಸಿದ್ದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅರ್ಷದ್, ಪು ಚರ್ಚೆ ನಿಸಾಕ್, ಜುನೈದ್‌ನನ್ನು ಬಂಧಿಸಲಾಗಿದೆ. ಹತ್ಯೆಗೆ ಸಂಚು ಮಾಡಿದ ಮತ್ತು ದಾಳಿಗೆ ಸಹಾಯ ಮಾಡಿದ ಆರೋಪದಲ್ಲಿ ಈ ಬಂಧನ ನಡೆದಿದೆ. ತನಿಖಾ ವೇಳೆ ಈ ಕೊಲೆಗೆ ರೂಪಿಸಲಾಗಿದ್ದ ಮಾರಕ ಯೋಜನೆಗಳ ಬಗೆಗೂ ಬಯಲಾಗಿದೆ. ಆರೋಪಿ ಅರ್ಷದ್ ಕೊಲೆಯ ಪ್ರಮುಖ ಸೂತ್ರಧಾರಿ ಆಗಿದ್ದು, ಈತ ಹಂತಕರಿಗೆ ಮಾರಕಾಸ್ತ್ರಗಳನ್ನು ಒದಗಿಸಿದ್ದ. ಜೊತೆಗೆ ಪೊಲೀಸರ ಕಾರ್ಯಾಚರಣೆಯ ಬಗೆಗೂ

ಆರಿಫ್ ಹತ್ಯೆ: ಮತ್ತೆ ಮೂವರು ಆರೋಪಿಗಳ ಬಂಧನ Read More »

ಪಾಳು ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

ಸುಳ್ಯ: ತಾಲೂಕಿನ ಪೆರಾಜೆ ‌ಗ್ರಾಮದಲ್ಲಿ ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಒಂಟಿ ಸಲಗವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸತತ ಎಂಟು ಗಂಟೆಗಳ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿದ ಘಟನೆ ನಡೆದಿದೆ. ಕಲ್ಲಚರ್ಪ ರಾಮ ನಾಯ್ಕ ಎಂಬವರ ತೋಟದಲ್ಲಿ ಎ. 12 ರ ರಾತ್ರಿ ಸಮಯದಲ್ಲಿ ಆನೆಯೊಂದು ನಿರಂತರವಾಗಿ ಘೀಳಿಡುವ ಸದ್ದು ಕೇಳಿ ಬಂದಿತ್ತು. ಸ್ಥಳೀಯರು ತೋಟದಲ್ಲಿ ಹುಡುಕಾಡಿದಾಗ ಸುಮಾರು 30 ಅಡಿ ಆಳದ ಪಾಳು ಬಾವಿಯಲ್ಲಿ ಕಾಡಾನೆಯೊಂದು ಬಿದ್ದಿರುವುದು ಗೊತ್ತಾಗಿದೆ. ಈ ಮಾಹಿತಿಯನ್ನು ಸ್ಥಳೀಯರು ತಕ್ಷಣವೇ ಅರಣ್ಯ

ಪಾಳು ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ Read More »

ಈ ವರ್ಷ ಅವಧಿಗಿಂತ ಮುಂಚೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ಇಂದು ಅಥವಾ ನಾಳೆ ಪ್ರಕಟವಾಗುವ ಸಾಧ್ಯತೆ ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಬಹುತೇಕ ಏಪ್ರಿಲ್ 14 ಅಥವಾ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಈ ವರ್ಷದ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿಬಿಎಸ್ಇ ಈ ಬಾರಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶವನ್ನು ಈ ಬಾರಿ ಏಪ್ರಿಲ್

ಈ ವರ್ಷ ಅವಧಿಗಿಂತ ಮುಂಚೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ Read More »

7 ವರ್ಷದ ಬಳಿಕ ಇರಾನ್‌ ತೈಲ ಹೊತ್ತ ಹಡಗುಗಳು ಭಾರತಕ್ಕೆ ಆಗಮನ

ಯುದ್ಧದ ನಡುವೆಯೇ ಭಾರತಕ್ಕೆ ತೈಲ ನೀಡಿದ ಇರಾನ್‌ ಮುಂಬೈ: ತೈಲ ಸಂಸ್ಕರಣಾಗಾರರಿಗೆ ಕಳೆದ ತಿಂಗಳು ಅಮೆರಿಕ (America) ನೀಡಿದ್ದ ತಾತ್ಕಾಲಿಕ ವಿನಾಯಿತಿ ಬಳಸಿಕೊಂಡು ಭಾರತ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾತೈಲ ಖರೀದಿ ಮಾಡಿದೆ. ಇರಾನಿನ ಕಚ್ಚಾತೈಲ ತುಂಬಿದ 2 ಬೃಹತ್‌ ಟ್ಯಾಂಕರ್‌ಗಳು ಭಾರತದ ಬಂದರುಗಳನ್ನು ತಲುಪಿವೆ ಎಂದು ಎಲ್‌ಎಸ್‌ಇಜಿ ಹಡಗು ಟ್ರ್ಯಾಕಿಂಗ್‌ ದತ್ತಾಂಶ ತೋರಿಸಿದೆ ಎಂದು ವರದಿಯಾಗಿದೆ. ಹಡಗು ಟ್ರ್ಯಾಕಿಂಗ್‌ ದತ್ತಾಂಶದ ಪ್ರಕಾರ ಇರಾನ್‌ನ ಧ್ವಜ ಹೊತ್ತ ʻFelicityʼ ಹಡಗು ಪಶ್ಚಿಮ ಭಾರತದ

7 ವರ್ಷದ ಬಳಿಕ ಇರಾನ್‌ ತೈಲ ಹೊತ್ತ ಹಡಗುಗಳು ಭಾರತಕ್ಕೆ ಆಗಮನ Read More »

error: Content is protected !!
Scroll to Top