ಸುದ್ದಿ

ಸಾಹಿತ್ಯ–ಶಿಕ್ಷಣ–ಸಾಮಾಜಿಕ ಸೇವೆಯ ಸಮನ್ವಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ‘ಸುವರ್ಣ ಕನ್ನಡಿಗ’ ಪ್ರಶಸ್ತಿ

ಪುತ್ತೂರು: ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಸಮಾಜದ ವಿವಿಧ ಹಂತಗಳ ಮೇಲೆ ಸ್ಪಷ್ಟ ಹಾಗೂ ಸಕಾರಾತ್ಮಕ ಪ್ರಭಾವ ಬೀರಿರುವ ಬಹುಮುಖ ವ್ಯಕ್ತಿತ್ವದ ಚಿಂತನೆ ಕ್ರಿಯಾಶೀಲತೆ ಮತ್ತು ಮಾನವೀಯತೆಗಳ ಭಾವದ ಮೂಲಕ ಪುತ್ತೂರು ತಾಲೂಕಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತನ್ನದೇ ಆದ ವಿಶಿಷ್ಟ ಗುರುತನ್ನ ನಿರ್ಮಿಸಿರುವ ನಿರ್ಗತಿಕರ ಆಪತ್ಬಾಂಧವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು, 2026ನೇ ಸಾಲಿನ ಪ್ರತಿಷ್ಠಿತ ‘ಸುವರ್ಣ ಕನ್ನಡಿಗ’ ಪ್ರಶಸ್ತಿಗೆ […]

ಸಾಹಿತ್ಯ–ಶಿಕ್ಷಣ–ಸಾಮಾಜಿಕ ಸೇವೆಯ ಸಮನ್ವಯ ಸಾಧಕ ಪುತ್ತೂರು ಉಮೇಶ್ ನಾಯಕ್ ಅವರಿಗೆ ‘ಸುವರ್ಣ ಕನ್ನಡಿಗ’ ಪ್ರಶಸ್ತಿ Read More »

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು

ಬೀದರ್: ಆನ್‌ಲೈನ್ ಗೇಮ್ಸ್ ಹುಚ್ಚಿಗೆ ಹಣ ಕಳಕೊಂಡ ನೋವಿನಲ್ಲಿ ‌ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ. ಮೃತನನ್ನು ಅಂತಿಮ ವರ್ಷದ ವೈದ್ಯಕೀಯ ಪದವಿ ಓದುತ್ತಿದ್ದ ಅನಿಷ್ಕಾರ್ ‌ಚೌಹಾಣ್ ಎಂದು ಗುರುತಿಸಲಾಗಿದೆ. ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಸಲಗರ್ ಗ್ರಾಮದ ಯುವಕ ಈತ. ಆನ್‌ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕಾಲೇಜಿನ ವಸತಿ ಗೃಹದಲ್ಲೇ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ. ಅನಿಷ್ಕಾರ್ ತನ್ನ ಸ್ನೇಹಿತನಿಂದಲೂ ‌ಸುಮಾರು ಎಪ್ಪತ್ತು ಸಾವಿರ ರೂ.

ಆನ್‌ಲೈನ್ ಗೇಮಿಂಗ್ ಹುಚ್ಚು: ವೈದ್ಯಕೀಯ ವಿದ್ಯಾರ್ಥಿಯ ಹಣವೂ ಹೋಯ್ತು, ಜೀವವೂ ಹೋಯ್ತು Read More »

ಮಡಿಕೇರಿಯಲ್ಲಿ ‌ಕಾಣಿಸಿಕೊಂಡ ಹುಲಿ: ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ

ಮಡಿಕೇರಿ: ಇಬ್ನಿಳವಾಡಿಯಲ್ಲಿ ಹುಲಿ ಸಂಚಾರ ಕಂಡು ಬಂದಿದ್ದು,‌ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಮಡಿಕೇರಿಯ ಹೊರವಲಯದ ಎರಡು ಕಿ. ಮೀ. ದೂರದ ಪ್ರದೇಶದಲ್ಲಿ ಹುಲಿ ಚಲನವಲನ ಕಂಡುಬಂದಿರುವುದಾಗಿದೆ. ಪೊನ್ನಚೆಟ್ಟಿರ ಸಂದೀಪ್ ಎಂಬವರ ತೋಟದಲ್ಲಿ ಹುಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅರಣ್ಯ ಇಲಾಖೆಗೂ ಈ‌ ಕುರಿತು ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರದೇಶದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯನ್ನು ಹೋಲುವ ಪ್ರಾಣಿಯ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದು ಹುಲಿಯೋ, ಪೆರ್ಪಣವೋ ಎಂಬ ಗೊಂದಲವೂ

ಮಡಿಕೇರಿಯಲ್ಲಿ ‌ಕಾಣಿಸಿಕೊಂಡ ಹುಲಿ: ಸಾರ್ವಜನಿಕರಲ್ಲಿ ಮನೆಮಾಡಿದ ಆತಂಕ Read More »

ಹರ್ಮುಜ್ ದಾಟಿ ಭಾರತದತ್ತ ಬರುತ್ತಿವೆ ಎಲ್‌ಪಿ‌ಜಿ ಹೊತ್ತ ಎರಡು ಹಡಗುಗಳು

ನವದೆಹಲಿ: 92,600 ಮೆಟ್ರಿಕ್ ಟನ್ ಎಲ್‌ಪಿ‌ಜಿ ಹೊತ್ತ ಎರಡು ಹಡಗುಗಳು ಹರ್ಮುಜ್ ಜಲಸಂಧಿ ದಾಟಿ ಭಾರತದತ್ತ ಬರುತ್ತಿದ್ದು, ಇನ್ನೆರಡು ದಿನದಲ್ಲಿ ನವಮಂಗಳೂರು ಬಂದರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಯುನೈಟೆಟ್ ಅರಬ್ ಎಮಿರೇಟ್ಸ್‌ನ (ಯುಎಇ) ರುವೈಸ್‌ನಿಂದ 45 ಸಾವಿರ ಮೆಟ್ರಿಕ್‌ ಎಲ್‌ಪಿಜಿ ಹೊತ್ತ ಫೈನ್‌ಗ್ಯಾಸ್ ಹಡಗು ಇದೇ 27 ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ ಎಂದು ಬಂದರುಗಳು, ಹಡಗು ಸಾಗಾಣೆ ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾಹಿತಿ

ಹರ್ಮುಜ್ ದಾಟಿ ಭಾರತದತ್ತ ಬರುತ್ತಿವೆ ಎಲ್‌ಪಿ‌ಜಿ ಹೊತ್ತ ಎರಡು ಹಡಗುಗಳು Read More »

ಮಗಳ ಜೊತೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ: ದೂರು ದಾಖಲು

ಶಿರ್ವ: ಗಂಡನ ಜೊತೆಗೆ ಊಟದ ವಿಷಯದಲ್ಲಿ ಜಗಳವಾಗಿದ್ದು, ಹೆಂಡತಿ ತನ್ನ ಅಪ್ರಾಪ್ತ ಪುತ್ರಿಯನ್ನು ಕರೆದುಕೊಂಡು ನಾಪತ್ತೆಯಾಗಿರುವ ಘಟನೆ ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ನಡೆದಿದೆ. ರೇಣುಕಾ ಗಂಗಾಧರ್ ಪೂಜೇರ್ (28) ಮತ್ತು ಪ್ರತೀಕ್ಷಾ ಗಂಗಾಧರ್ ಪೂಜೇರ್(11) ಎಂಬವರೇ ನಾಪತ್ತೆಯಾದವರು. ಗಂಡ ಮತ್ತು ಹೆಂಡತಿಯ ನಡುವೆ ಮಾ. 20 ರಂದು ಊಟದ ವಿಷಯದಲ್ಲಿ ಗಲಾಟೆ ನಡೆದಿತ್ತು. ಬಳಿಕ ಕೆಲಸದ ಕಾರಣಕ್ಕೆ ಅಂಗಡಿಗೆ ಹೋಗುವುದಾಗಿ ಹೇಳಿ ಗಂಡ ಮನೆಯಿಂದ ತೆರಳಿದ್ದಾರೆ. ಕೆಲಸ ಮುಗಿಸಿ ಗಂಡ ರಾತ್ರಿ ವೇಳೆ ಮನೆಗೆ ಬಂದಿದ್ದು, ಆಗ

ಮಗಳ ಜೊತೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ: ದೂರು ದಾಖಲು Read More »

ಲಸಿಕೆ ಭಯ: ರೇಬಿಸ್‌ಗೆ ಬಲಿಯಾಯ್ತ ಮುಗ್ಧ ಮಗುವಿನ ಜೀವ

ಮುಂಬೈ: ಚುಚ್ಚುಮದ್ದಿನ ಭಯಕ್ಕೆ ರೇಬಿಸ್ ಲಸಿಕೆಯನ್ನು ಪಡೆಯದೇ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಂಬೈ‌ನಲ್ಲಿ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಕಶಿಷ್ ಸಹಾನಿ ಎಂಬ ಬಾಲಕಿಯೇ ‌ಮೃತ ದುರ್ದೈವಿ. ಕಶಿಷ್ ಸುಮಾರು ಆರು ತಿಂಗಳ ಹಿಂದೆ ತನ್ನ ತಾತನ ಜೊತೆ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಆಕೆಯನ್ನು ಪರಚಿತ್ತು. ತಕ್ಷಣವೇ ಮನೆಯವರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಇಂಜೆಕ್ಷನ್ ಭಯ ಹೊಂದಿದ್ದ ಅವಳು ಲಸಿಕೆ ಪಡೆಯದಿರಲು ಹಠ ಮಾಡಿದ್ದಳು. ಗಾಯ ಚಿಕ್ಕದಾಗಿದ್ದು,

ಲಸಿಕೆ ಭಯ: ರೇಬಿಸ್‌ಗೆ ಬಲಿಯಾಯ್ತ ಮುಗ್ಧ ಮಗುವಿನ ಜೀವ Read More »

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು

ಸುಳ್ಯ: ನಿಯಂತ್ರಣ ತಪ್ಪಿ ಬೈಕೊಂದು ‌ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸವಾರ ಮೃತಪಟ್ಟ ಘಟನೆ ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ. ಮೆಸ್ಕಾಂ ಗುತ್ತಿಗೆ ನೌಕರ ಲೋಕನಾಥ್ ಎಂಬವರೇ ‌ಮೃತ ದುರ್ದೈವಿ. ಸುಳ್ಯದಿಂದ ತಮ್ಮ ಮನೆಯತ್ತ ಮರಳುತ್ತಿದ್ದ ‌ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾದರೂ, ಗಾಯದ ತೀವ್ರತೆ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಬೈಕ್ ವಿದ್ಯುತ್ ಕಂಬಕ್ಕೆ ಬಡಿದು ಯುವಕ ಸಾವು Read More »

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 17 ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೇರಳಕಟ್ಟೆಯ ನಾಟೇಕಲ್ ನಿವಾಸಿ ರಿಯಾಜ್ ಎಂದು ಗುರುತಿಸಲಾಗಿದೆ. ಈತ ಬರ್ಕೆ ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ 15/2009ರಡಿ, ಕಾಪಿರೈಟ್ ಕಾಯ್ದೆಯ ಕಲಂ 52(ಎ) ಮತ್ತು 63ರ ಪ್ರಕಾರ ದಾಖಲಾಗಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಪ್ರಕರಣ ದಾಖಲಾದ ನಂತರದಿಂದಲೇ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಸುಮಾರು 17 ವರ್ಷಗಳಿಂದ ಪರಾರಿಯಾಗಿರುವ ಆರೋಪಿತನನ್ನು ಬರ್ಕೆ ಪೊಲೀಸ್‌ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾರ್ಚ್

17 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ Read More »

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ 3 ಮತ್ತು 4 ನೇ ಆರೋಪಿಗಳಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳಾದ ಮಂಜುನಾಥ ಶೆಣೈ ಮತ್ತು ಕೇಶವ್ ಪರವಾಗಿ ವಾದ ಮಂಡನೆ ಮಾಡಿರುವ ವಕೀಲ ನರಸಿಂಹ ಪ್ರಸಾದ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಧೀಶೆ ಸರಿತಾ ಡಿ. ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದಾಗಿದೆ.

ಕಲ್ಲೇಗ ಅಕ್ಷಯ್ ಕೊಲೆ ಆರೋಪಿಗಳಲ್ಲಿ ಇಬ್ಬರಿಗೆ ‌ಷರತ್ತುಬದ್ಧ ಜಾಮೀನು Read More »

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ

ಕಾರ್ಕಳ: ವಿದ್ಯಾಭಾರತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಿ ವಿದ್ಯಾ ಭಾರತಿ ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸಿ ಯಶಸ್ವಿಯಾಗಿ ಮಾಡಿದ್ದೀರಿ. ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳಿಗೆ, ಅವರ ವಿದ್ವತ್ತಿಗೆ ನಾವು ಪ್ರೇರಣೆಯನ್ನು ಪ್ರೋತ್ಸಾಹವನ್ನು ನೀಡಿ ಸಮಾಜದ, ದೇಶದ ಸಂಸ್ಕೃತಿಯ ಅರಿವನ್ನು ಮೂಡಿಸಿ ದೇಶಕ್ಕೆ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ನಮ್ಮ ವಿದ್ಯಾ ಭಾರತಿಯ ಕಲ್ಪನೆ. ಈ ಸೇವಾ ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಿರುವುದು ತುಂಬಾ ಸಂತೋಷವಾಗಿದೆ. ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಅವರು ಮಾತನಾಡಿದರು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ Read More »

error: Content is protected !!
Scroll to Top