ಸುದ್ದಿ

ಸ್ಕೂಟಿಗೆ ಬಸ್‌ ಡಿಕ್ಕಿ : 8 ವರ್ಷದ ಬಾಲಕಿ ಸಾವು

ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ ಸ್ಕೂಟಿಯ ಹಿಂಬದಿಗೆ ಗುದ್ದಿದ ಬಸ್‌ ಉಡುಪಿ: ಎಕ್ಸ್‌ಪ್ರೆಸ್‌ ಬಸ್‌ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾಪು ಹೆದ್ದಾರಿಯಲ್ಲಿ ಸಂಭವಿಸಿದೆ. ಕಾಪು ಸಾಯಿ ಸರ್ವಿಸ್‌ ಸ್ಟೇಶನ್‌ ಬಳಿ ಈ ಅಪಘಾತ ಸಂಬವಿಸಿದ್ದು, ಬಸ್‌ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹಸವಾರೆಯಾಗಿ ಬಂದಿದ್ದ ಬಾಲಕಿ ಸಾತ್ವಿ ಶೆಟ್ಟಿ (8) ತೀವ್ರಗಾಯಗಳೊಂದಿಗೆ ಕೊನೆಯುಸಿರೆಳೆದಿದ್ದಾರೆ. ಕಾಪು ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದಂತೆ ಬಸ್‌ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ದುಬಾಯಿಯಲ್ಲಿ […]

ಸ್ಕೂಟಿಗೆ ಬಸ್‌ ಡಿಕ್ಕಿ : 8 ವರ್ಷದ ಬಾಲಕಿ ಸಾವು Read More »

ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ : ಮಾಲೀಕನ ಸಹಿತ ಇಬ್ಬರ ಸೆರೆ

ಕೊಡಗು: ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ತಂಗಿದ್ದ ವಿದೇಶಿ ಮಹಿಐಎಯ ಮೇಲೆ ಹೋಂ ಸ್ಟೇ ಮಾಲೀಕನೇ ಅತ್ಯಾಚಾರ ಎಸಗರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿರುವ

ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ : ಮಾಲೀಕನ ಸಹಿತ ಇಬ್ಬರ ಸೆರೆ Read More »

ವಾಹನ ಅಡ್ಡಗಟ್ಟಿ ಹಲ್ಲೆ, ಕೊಲೆ ಬೆದರಿಕೆ: ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

ಮಂಗಳೂರು: ಕಾರಿಗೆ ಸೈಡ್ ಕೊಡುವ ವಿಷಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ತಂಡವೊಂದಕ್ಕೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC – 2 ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗಳಾದ ಬಂಟ್ವಾಳದ ಕಾವಳಪಡೂರು ನಿವಾಸಿ ದಿನೇಶ್ ಶೆಟ್ಟಿ, ಅರ್ಕುಳದ ಧನರಾಜ್ ಪೂಜಾರಿ ಯಾನೆ ‌ವಳಚ್ಚಿಲ್ ಧನು, ನವೀನ್ ಎಡಪದವು, ಪ್ರಜ್ವಲ್ ಪೂಜಾರಿ ಕಾರ್‌ಸ್ಟ್ರೀಟ್, ವಸಂತ್ ಬಾಳ‌ ತಡಂಬೈಲ್ ಗೆ ನ್ಯಾಯಾಲಯವು 3 ವರ್ಷಗಳ ಕಠಿಣ ಶಿಕ್ಷೆ ಮತ್ತು 1.34 ಲಕ್ಷ ರೂ. ದಂಡ

ವಾಹನ ಅಡ್ಡಗಟ್ಟಿ ಹಲ್ಲೆ, ಕೊಲೆ ಬೆದರಿಕೆ: ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್ Read More »

ಪುತ್ತೂರು ಜಾತ್ರೆಯಲ್ಲಿ ಗಲಾಟೆ ಮಾಡಿದ ಇಬ್ಬರು ಪೊಲೀಸ್‌ ವಶಕ್ಕೆ

ಪುತ್ತೂರು : ಪೇಟೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಪುತ್ತೂರು ನರಿಮೊಗರು ನಿವಾಸಿ ಹರ್ಷ ಗೋಪಾಲ್ ಹಾಗೂ ಕಬಕ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಏಪ್ರಿಲ್ 20ರಂದು ರಾತ್ರಿ ವೇಳೆ ದೇವಸ್ಥಾನದ ಜಾತ್ರಾ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದೇವಸ್ಥಾನದ ಕಚೇರಿಯ ಬಳಿ ಜನರು ಗುಂಪು

ಪುತ್ತೂರು ಜಾತ್ರೆಯಲ್ಲಿ ಗಲಾಟೆ ಮಾಡಿದ ಇಬ್ಬರು ಪೊಲೀಸ್‌ ವಶಕ್ಕೆ Read More »

ವಿಜೃಂಭಣೆಯಿಂದ ನಡೆದ ಪುತ್ತೂರು ಜಾತ್ರೆ: ಪಂಜಿಗುಡ್ಡೆ ಈಶ್ವರ ಭಟ್‌ಗೆ ಡಾ. ಪ್ರಸಾದ್ ಭಂಡಾರಿ ಪತ್ರ

ಪುತ್ತೂರು: ಈ ಬಾರಿ ನಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿದೆ.‌ ಈ ಬಗ್ಗೆ ಪುತ್ತೂರಿನ ಪ್ರಸಿದ್ಧ ಡಾಕ್ಟರ್ ಪ್ರಸಾದ್ ಭಂಡಾರಿ ಅವರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಈ ಬಾರಿಯ ಜಾತ್ರೆ ಸೂಪರ್. ಬಹಳ ವಿಜೃಂಭಣೆಯಿಂದ ನಡೆದಿದೆ. ಇಷ್ಟು ಗ್ರಾಂಡ್ ಆಗಿ ಎಂದೂ ಜಾತ್ರೆ ನಡೆದಿಲ್ಲ. ಎಲ್ಲರಿಗೂ ಕಾಫಿ, ತಿಂಡಿ, ಊಟ, ಅದೂ ತಿನ್ನುವಷ್ಟು. ಯಾವಾಗಲೂ ನೀವೇ ಆಡಳಿತ ನಡೆಸಿದಲ್ಲಿ ಒಳ್ಳೆಯದು. ದೇವರು

ವಿಜೃಂಭಣೆಯಿಂದ ನಡೆದ ಪುತ್ತೂರು ಜಾತ್ರೆ: ಪಂಜಿಗುಡ್ಡೆ ಈಶ್ವರ ಭಟ್‌ಗೆ ಡಾ. ಪ್ರಸಾದ್ ಭಂಡಾರಿ ಪತ್ರ Read More »

ಮಂಗಳೂರು: ಮುಂಜಾನೆ ಸುರಿದ ಭಾರಿ ಗಾಳಿ-ಮಳೆಯಿಂದ ವ್ಯಾಪಕ ಹಾನಿ

ಕೊಂಬೆ ಬಿದ್ದು ವಾಹನಗಳು ಜಖಂ, ಗೋಡೆ ಕುಸಿದು ಕಾರುಗಳು ನಜ್ಜುಗುಜ್ಜು ಮಂಗಳೂರು : ಬುಧವಾರ ಮುಂಜಾನೆ ಸುಮಾರು 3.30ರ ವೇಳೆಗೆ ಮಂಗಳೂರು ನಗರಾದ್ಯಂತ ಗುಡುಗು ಸಿಡಿಲಿನ ಜೊತೆಗೆ ಭಾರಿ ಮಳೆಯಾಗಿ ಸುಡುತ್ತಿರುವ ಇಳೆಗೆ ತಂಪೆರೆದಿದೆ. ಆದರೆ ಈ ಅಕಾಲಿಕ ಮಳೆಯಿಂದ ವಿವಿಧೆಡೆ ಹಲವು ಹಾನಿಗಳು ಸಂಭವಿಸಿವೆ. ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದ ನಗರದ ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಎರಡು ಮನೆಗಳು ಹಾಗೂ ಮೂರು

ಮಂಗಳೂರು: ಮುಂಜಾನೆ ಸುರಿದ ಭಾರಿ ಗಾಳಿ-ಮಳೆಯಿಂದ ವ್ಯಾಪಕ ಹಾನಿ Read More »

ಪಹಲ್ಗಾಮ್‌ ಉಗ್ರ ದಾಳಿಗೆ ಒಂದು ವರ್ಷ : ಬಲಿಯಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ

ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸಂದೇಶ ನವದೆಹಲಿ : ಪಹಲ್ಗಾಮ್‌ ಭಯೋತ್ಪಾದಕ ದಾಳಿಯಾಗಿ ಇಂದಿಗೆ (ಏ.22) ಒಂದು ವರ್ಷ ಪೂರ್ಣಗೊಂಡಿದೆ. ಹಿಂದೂ ಪ್ರವಾಸಿಗರನ್ನೇ ಹುಡುಕಿ ಹತ್ಯೆ ಮಾಡಿದ ಈ ಭಯೋತ್ಪಾದಕ ಕೃತ್ಯ ದೇಶದ ಜನಮಾನಸದಲ್ಲಿ ಎಂದಿಗೂ ಆರದ ಗಾಯವನ್ನು ಉಳಿಸಿದೆ. ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಕಣ್ಣೀರು ಇನ್ನೂ ಹಸಿಯಾಗಿಯೇ ಉಳಿದಿದೆ. ನಮ್ಮ ನೆಲಕ್ಕೆ ನುಗ್ಗಿ ನಮ್ಮವರನ್ನೇ ಗುಂಡಿಕ್ಕಿ ಕೊಂದ ಉಗ್ರರ ಅಟ್ಟಹಾಸ. ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಕೈಗೊಂಡ ದಿಟ್ಟ ಕ್ರಮ.

ಪಹಲ್ಗಾಮ್‌ ಉಗ್ರ ದಾಳಿಗೆ ಒಂದು ವರ್ಷ : ಬಲಿಯಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ Read More »

ಮದುವೆ ಪ್ರಪೋಸ್‌ ನೆಪದಲ್ಲಿ ಪ್ರಿಯತಮನನ್ನು ಜೀವಂತ ದಹಿಸಿದ ಯುವತಿ

ವೆಸ್ಟರ್ನ್ ಸ್ಟೈಲ್‌ನಲ್ಲಿ ನಿನಗೆ ಪ್ರಪೋಸ್ ಮಾಡುವುದಾಗಿ ನಂಬಿಸಿ ಭೀಕರ ಕೃತ್ಯ ಬೆಂಗಳೂರು : ‘ವೆಸ್ಟರ್ನ್ ಸ್ಟೈಲ್’ನಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ನಂಬಿಸಿ, ಪ್ರಿಯಕರನ ಕೈ-ಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಸುರಿದು ಪ್ರೇಯಸಿಯೇ ಜೀವಂತ ದಹಿಸಿರುವ ಪ್ರಕರಣ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ. ಮೃತ ಕಿರಣ್ ಮತ್ತು ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದಿದ್ದನ್ನು ನೋಡಿ ಕಿರಣ್ ಆಕೆಯ ಮನೆಗೆ ಬಂದಿದ್ದನು. ಈ

ಮದುವೆ ಪ್ರಪೋಸ್‌ ನೆಪದಲ್ಲಿ ಪ್ರಿಯತಮನನ್ನು ಜೀವಂತ ದಹಿಸಿದ ಯುವತಿ Read More »

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ

ಬಿಜೆಪಿ ನಾಯಕರಿಂದ ಕಟು ಟೀಕೆ ; ಸೋಷಿಯಲ್‌ ಮೀಡಿಯಾದಲ್ಲಿ ತಿರುಗೇಟು ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಖರ್ಗೆ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ತಾನು ಭಯೋತ್ಪಾದಕ ಎಂದು ಕರೆದಿಲ್ಲ, ಮೋದಿ ವಿಪಕ್ಷಗಳನ್ನು ಭಯಪಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂಬುದಾಗಿ ಖರ್ಗೆ ಬಳಿಕ ತೇಪೆ ಹಾಕಲು ಯತ್ನಿಸಿದರೂ ಅವರ ವಿರುದ್ಧ ಆಕ್ರೋಶ ಕಡಿಮೆಯಾಗಿಲ್ಲ.

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ Read More »

ಚಾರ್ಮಾಡಿ ಘಾಟ್‌ನಲ್ಲಿ ಪಿಕಪ್‌ ಪಲ್ಟಿ : ಹಲವರಿಗೆ ಗಾಯ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಆಂಧ್ರಪ್ರದೇಶ ಮತ್ತು ಬಳ್ಳಾರಿ ಮೂಲದ ಪ್ರಯಾಣಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. SKSSF ಕಕ್ಕಿಂಜೆ ಅಂಬುಲೆನ್ಸ್, ಚಾರ್ಮಾಡಿ ಹಸನಬ್ಬ ಅವರ ತಂಡ ಹಾಗೂ ರಾಜ್ಯೋತ್ಸವ

ಚಾರ್ಮಾಡಿ ಘಾಟ್‌ನಲ್ಲಿ ಪಿಕಪ್‌ ಪಲ್ಟಿ : ಹಲವರಿಗೆ ಗಾಯ Read More »

error: Content is protected !!
Scroll to Top