ಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯ: ಪ್ರಗತಿ ಬಂಧು, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ‌ಮಾಣಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಾಣಿ ವಲಯ, ಜನಜಾಗೃತಿ ವೇದಿಕೆ ಮಾಣಿ ವಲಯ, ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕನಗರ ಅಳಕೆಮಜಲು ಇವರ ಸಹಭಾಗಿತ್ವದಲ್ಲಿ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಎಸ್. ಪ್ರಕಾಶ್ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ […]

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯ: ಪ್ರಗತಿ ಬಂಧು, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ Read More »

ಹರಿಯಾಣದಲ್ಲಿ ಸಿಕ್ಕಿದ್ದು ಬಾಂಬ್‌ ತಯಾರಿಸಲು ಬಳಸುವ 360 ಕೆ.ಜಿ. ಅಮೋನಿಯಂ ನೈಟ್ರೇಟ್‌

ಮಹಿಳಾ ಡಾಕ್ಟರ್‌, ಇಮಾಮ್‌ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು ನವದೆಹಲಿ: ಹರಿಯಾಣದ ಫರಿದಾಬಾದ್‌ನಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿರುವುದು ಆರ್‌ಡಿಎಕ್ಸ್‌ ಅಲ್ಲ ಬದಲಾಗಿ ಬಾಂಬ್‌ ತಯಾರಿಸಲು ಬಳಸುವ ಅಮೋನಿಯಂ ನೈಟ್ರೇಟ್‌ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ವರದಿಗಳಲ್ಲಿ ಆರ್‌ಡಿಎಕ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು. ಸ್ಫೋಟಕದ ಜೊತೆಗೆ ರೈಫಲ್ ಹಾಗೂ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚಿಗೆ ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ

ಹರಿಯಾಣದಲ್ಲಿ ಸಿಕ್ಕಿದ್ದು ಬಾಂಬ್‌ ತಯಾರಿಸಲು ಬಳಸುವ 360 ಕೆ.ಜಿ. ಅಮೋನಿಯಂ ನೈಟ್ರೇಟ್‌ Read More »

ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

ವೀರಮಂಗಲ: ಇಲ್ಲಿನ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕ ಮನಮೋಹನ ಗುತ್ತು ನೆರವೇರಿಸಿ ಪ್ರಾಥಮಿಕ ಶಿಕ್ಷಣ ನೀಡಿದ ವೀರಮಂಗಲ ಶಾಲೆಯು ನಮ್ಮ ಬದುಕಿನ ಭದ್ರ ಬುನಾದಿಯಾಗಿದೆ. ಅಂದಿನ ಸಿಹಿ ನೆನಪುಗಳು ಈ ಶಾಲೆಗೆ ಬರುವಾಗ ಮರುಕಳಿಸುತ್ತದೆ ಎಂದರು. ಮುಖ್ಯ ಅತಿಥಿ ನಿವೃತ್ತ ಮುಖ್ಯಗುರುಗಳಾದ ಮೋನಪ್ಪ ಗೌಡ ಇವರು ಶುಭಹಾರೈಸಿದರು . ಹಿರಿಯ ವಿದ್ಯಾರ್ಥಿ ಪ್ರಸ್ತುತ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ

ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ Read More »

ಡಾ.ರೇಣುಕಾಪ್ರಸಾದ್ ಕೆ.ವಿ. ಅವರಿಂದ ಬೆಳ್ಳಿ ರಥ ಸಮರ್ಪಣೆ

ಸುಬ್ರಹ್ಮಣ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ‘ಬಿ’ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಿದರು. ಭಕ್ತಿ ಸಂಭ್ರಮದ ಮಧ್ಯೆ ನ.10ರಂದು ಪೂ. 11ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಜತ ರಥ ಸಮರ್ಪಣೆ ಮಾಡಿದರು. ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರ ಕುಟುಂಬದವರು, ಪ್ರಮುಖರು ಸೇರಿ ಸಾವಿರಾರು ಮಂದಿ ದಿವ್ಯ ಮುಹೂರ್ತಕ್ಕೆ ಸಾಕ್ಷಿಗಳಾದರು. ಸೇವಾ ರೂಪದಲ್ಲಿ ಅವರು ಬೆಳ್ಳಿ

ಡಾ.ರೇಣುಕಾಪ್ರಸಾದ್ ಕೆ.ವಿ. ಅವರಿಂದ ಬೆಳ್ಳಿ ರಥ ಸಮರ್ಪಣೆ Read More »

ಹರಿಯಾಣದ ಆಸ್ಪತ್ರೆಯಿಂದ 360 ಆರ್‌ಡಿಎಕ್ಸ್‌ ಸ್ಫೋಟಕ ವಶ

ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಇಬ್ಬರು ಡಾಕ್ಟರ್‌ಗಳು ಸೆರೆ ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಪರಿಯಾಣದ ಫರಿದಾಬಾದ್‌ನ ಆಸ್ಪತ್ರೆಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 360 ಕಿ.ಗ್ರಾಂ ಆರ್‌ಡಿಎಕ್ಸ್‌ ಸ್ಫೋಟಕ ಮತ್ತು ಒಂದು ಎ.ಕೆ. 47 ರೈಫಲ್‌ ವಶಪಡಿಸಿಕೊಂಡು ಇಬ್ಬರು ಡಾಕ್ಟರ್‌ಗಳನ್ನು ಬಂಧಿಸಿದ್ದಾರೆ. ದೇಶದಲ್ಲಿ ಇನ್ನೊಂದು ಬೃಹತ್‌ ವಿಧ್ವಂಸಕ ಕೃತ್ಯವನ್ನು ಈ ಮೂಲಕ ಪೊಲೀಸರು ವಿಫಲಗೊಳಿಸಿದ್ದಾರೆ. ಫರಿದಾಬಾದ್‌ನ ಅಲ್‌ ಫಲಾಹ ಆಸ್ಪತ್ರೆಯಿಂದ ಈ ಬೃಹತ್‌ ಪ್ರಮಾಣದ ಅಪಾಯಕಾರಿ ಸ್ಫೋಟಕವನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೆರೆಯಾದ ಡಾಕ್ಟರ್‌ ನೀಡಿದ

ಹರಿಯಾಣದ ಆಸ್ಪತ್ರೆಯಿಂದ 360 ಆರ್‌ಡಿಎಕ್ಸ್‌ ಸ್ಫೋಟಕ ವಶ Read More »

ಬೆಳ್ಳಾರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ, ಉಚಿತ ಕಣ್ಣಿನ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಇದರ ಆಶ್ರಯದಲ್ಲಿ ಆರ್. ಪಿ. ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ನೇತೃತ್ವದಲ್ಲಿ ಜ್ಞಾನ ದೀಪ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ( ರಿ ) ಬೆಳ್ಳಾರೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೃಷಿಪತ್ತಿನ ಸಭಾಂಗಣ ಬೆಳ್ಳಾರೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಪವಿತ್ರ ಯಂ. ಬೆಳ್ಳಿಪ್ಪಾಡಿ ಪ್ರಾರ್ಥನೆ ಮೂಲಕ ಚಂದ್ರ ಬಿ. ಕಾವು ಶ್ರೀ

ಬೆಳ್ಳಾರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ, ಉಚಿತ ಕಣ್ಣಿನ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ Read More »

ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿಯ ಇನ್ನೊಂದು ವಿಡಿಯೋ ಬಹಿರಂಗ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಆರೋಪ ಬೆಂಗಳೂರು : ಐಸಿಸ್‌ ಉಗ್ರ ಶಕೀಲ್‌, ವಿಕೃತಕಾಮಿ ಉಮೇಶ್ ರೆಡ್ಡಿಗೆ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಕೈದಿಗಳ ಮೋಜು ಮಸ್ತಿಯ ಮತ್ತೊಂದು ವಿಡಿಯೋ ಹೊರಬಂದಿದೆ. ಕೈದಿಗಳು ಮದ್ಯ ಸೇವಿಸಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಡಿಯೋಗಳು ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆ ಜೈಲಿನದ್ದಾ ಎಂಬ ಆಯಾಮದಲ್ಲಿ

ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿಯ ಇನ್ನೊಂದು ವಿಡಿಯೋ ಬಹಿರಂಗ Read More »

ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ : ಮೂವರು ಬಾಲಕರು, ಶಾಲೆಯ ವಿರುದ್ಧ ಕೇಸ್‌

13ರ ಹರೆಯದ ಬಾಲಕನ ಮೇಲೆ ಸಹಪಾಠಿಗಳಿಂದ ಬರ್ಬರ ಹಲ್ಲೆ ಮೈಸೂರು : ಮೈಸೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಮೇಲೆ ನಡೆದ ರ‍್ಯಾಗಿಂಗ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮತ್ತು ರ‍್ಯಾಗಿಂಗ್ ನಡೆಸಿದ ಬಾಲಕರು ಮತ್ತು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್‌ದಾಖಲಿಸಿಕೊಂಡಿದೆ. ವಿದ್ಯಾರ್ಥಿಯೊಬ್ಬನ ಮೇಲೆ ಕೆಲವು ಹುಡುಗರು ಸೇರಿಕೊಂಡು ಬರ್ಬರವಾಗಿ ರ್‍ಯಾಗಿಂಗ್ ಮಾಡಿದ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೊಳಗಾದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಮೈಸೂರಿನ

ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ : ಮೂವರು ಬಾಲಕರು, ಶಾಲೆಯ ವಿರುದ್ಧ ಕೇಸ್‌ Read More »

Dr. UPSಗೆ ಅರೆಭಾಷೆ ಫೆಲೋಶಿಪ್

ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ Dr. UPS ಎಂದು ಖ್ಯಾತಿ ಪಡೆದಿರುವ, ವೈದ್ಯರಾಗಿ, ಸಾಮಾಜಿಕ ಹೋರಾಟಗಾರರಾಗಿ, ಪತ್ರಕರ್ತರಾಗಿ ಹೆಸರು ಮಾಡಿರುವ ಡಾ. ಯು.ಪಿ. ಶಿವಾನಂದ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಕಳಕಳಿಯ ವೈದ್ಯ1980ರ ದಶಕದಲ್ಲಿ ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಮ್ ಮೂಲಕ ವೈದ್ಯಕೀಯ ಸೇವೆ ಆರಂಭಿಸಿದ್ದ ಶಿವಾನಂದರು ಸುಳ್ಯ ತಾಲೂಕಿನ ಹಳ್ಳಿಗಳಿಗೆ ತಮ್ಮ ಜೀಪ್ ಮೂಲಕ ತೆರಳಿ ಮನೆಬಾಗಿಲಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದರು.

Dr. UPSಗೆ ಅರೆಭಾಷೆ ಫೆಲೋಶಿಪ್ Read More »

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ

ಗರಿಷ್ಠ ಭದ್ರತೆ ಇರುವ ನಿರ್ಬಂಧಿತ ಪ್ರದೇಶದಲ್ಲಿ ನಮಾಜು ಮಾಡಲು ಅನುಮತಿ ಕೊಟ್ಟದ್ದು ಯಾರು ಎಂದು ಪ್ರಶ್ನೆ ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಾಮೂಹಿಕ ನಮಾಜ್ ನಡೆಯುತ್ತಿದ್ದರೂ ಸಿಬ್ಬಂದಿ ನೋಡುತ್ತಾ ಮೌನವಾಗಿದ್ದರು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ Read More »

error: Content is protected !!
Scroll to Top