ಸುದ್ದಿ

102 ವರ್ಷದ ಗಣಿತಜ್ಞ ಸಿಆರ್ ರಾವ್ ಅವರಿಗೆ ಅಂಕಿಅಂಶಗಳಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ

2023 ರ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಅಂಕಿಅಂಶಗಳ ಸಿಆರ್ ರಾವ್ ಅವರಿಗೆ ನೀಡಲಾಗಿದೆ, ಇದನ್ನು ಸಾಮಾನ್ಯವಾಗಿ ಅಂಕಿಅಂಶಗಳ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ.ಮೂಲತಃ ಕರ್ನಾಟಕದವರಾದ ಖ್ಯಾತ ಭಾರತೀಯ-ಅಮೆರಿಕನ್ ಸಂಖ್ಯಾಶಾಸ್ತ್ರಜ್ಞ (statistician) ಕಲ್ಯಾಂಪುಡಿ ರಾಧಾಕೃಷ್ಣ ರಾವ್ (C.R Rao) ಅವರಿಗೆ ಈ ವಾರದ ಆರಂಭದಲ್ಲಿ ಅಂಕಿಅಂಶಗಳ ನೊಬೆಲ್ ಪ್ರಶಸ್ತಿ ಎಂದು ಕರೆಯಲ್ಪಡುವ 2023 ರ ಅಂಕಿಅಂಶಗಳ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ರಾವ್, 1945 ರಲ್ಲಿ ಕಲ್ಕತ್ತಾ ಮ್ಯಾಥಮೆಟಿಕಲ್ ಸೊಸೈಟಿಯ ಬುಲೆಟಿನ್‌ನಲ್ಲಿ ಪ್ರಕಟವಾದ ತಮ್ಮ ಸಂಶೋಧನಾ ಪ್ರಬಂಧದಲ್ಲಿ, ಆಧುನಿಕ ಅಂಕಿಅಂಶಗಳ ಕ್ಷೇತ್ರಕ್ಕೆ […]

102 ವರ್ಷದ ಗಣಿತಜ್ಞ ಸಿಆರ್ ರಾವ್ ಅವರಿಗೆ ಅಂಕಿಅಂಶಗಳಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ Read More »

ದಾಖಲೆಯಿಲ್ಲದೆ ಸಾಗಿಸುತ್ತಿದ್ದ 9.56 ಕೆಜಿ ಅಕ್ರಮ ಚಿನ್ನ ಪೊಲೀಸರ ವಶ

ಶಿವಮೊಗ್ಗ : ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿದ್ದ 5.83 ಕೋಟಿ ಮೌಲ್ಯದ 9 ಕೆಜಿ 565 ಗ್ರಾಂ ಚಿನ್ನವನ್ನು ಗಾಂಧಿ ಬಜಾರಿನ‌ಲ್ಲಿ ವಶಕ್ಕೆ ಪಡೆದಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವ ಪೊಲೀಸರು ಶಿವಮೊಗ್ಗದಲ್ಲಿ ಭರ್ಜರಿ ಭೇಟೆಯಾಡಿದ್ದಾರೆ.ಶಿವಮೊಗ್ಗದ ಗಾಂಧಿ ಬಜಾರಿನ‌ ಎಲೆರೇವಣ್ಣನ ಕೇರಿಯಲ್ಲಿರುವ ಲಕ್ಷ್ಮಣ್ ಕುಮಾರ್ ಎಂಬುವರಿಗೆ ಸೇರಿದ ಸಿಲ್ವರ್ ಪ್ಯಾಲೇಸ್ ಎಂಬ ಹೆಸರಿನ ಚಿನ್ನದ ಅಂಗಡಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್

ದಾಖಲೆಯಿಲ್ಲದೆ ಸಾಗಿಸುತ್ತಿದ್ದ 9.56 ಕೆಜಿ ಅಕ್ರಮ ಚಿನ್ನ ಪೊಲೀಸರ ವಶ Read More »

ಪುಂಜಾಲಕಟ್ಟೆ : ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ. ವಶ

ಬೆಳ್ತಂಗಡಿ : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ. ಹಣವನ್ನು ಎ. 10 ರಂದು ರಾತ್ರಿ 10 ಗಂಟೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ KA-53C 2542 ವಾಹನದಲ್ಲಿ ಸಮರ್ಪಕ

ಪುಂಜಾಲಕಟ್ಟೆ : ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ. ವಶ Read More »

ಶಾಸಕ ಅಂಗಾರ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ : 30 ವರ್ಷಗಳಿಂದ ಈಡೇರದ ಬೇಡಿಕೆ

ಸುಳ್ಯ : ಆರು ಬಾರಿ ಶಾಸಕರಾಗಿರುವ ಸಚಿವ ಎಸ್‌.ಅಂಗಾರ ಪ್ರತಿನಿಧಿಸುತ್ತಿರುವ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ಹೊಳೆ ದಾಟಲು ಸೇತುವೆ ಇಲ್ಲದ ಹಿನ್ನೆಲೆಯಲ್ಲಿ ಅರಮನೆಗಯ ಪ್ರದೇಶದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ಏ. 11 ರಂದು ನಿರ್ಧರಿಸಿದ್ದಾರೆ.ಅರಮನೆಗಯ ಅನ್ನುವ ಪ್ರದೇಶ ಅಂಗಾರ ಅವರ ಕ್ಷೇತ್ರವಾಗಿದ್ದು, ಈ ಊರಿನಲ್ಲೇ ನಡುವೆ ಹರಿಯುವ ಹೊಳೆಗೆ ಸೇತುವೆ ಇಲ್ಲ. ಅಲ್ಲೊಂದು ಸೇತುವೆ ಆಗಬೇಕೆಂದು ಪರಿಸರದ ನಿವಾಸಿಗಳು 30 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ. ಹೊಳೆ

ಶಾಸಕ ಅಂಗಾರ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ : 30 ವರ್ಷಗಳಿಂದ ಈಡೇರದ ಬೇಡಿಕೆ Read More »

ಶಾಸಕ, ಸಂಸದರ ಮಕ್ಕಳಿಗೆ ಟಿಕೆಟ್‌ ನೀಡಲು ಮೋದಿ ಅಸಮ್ಮತಿಯಿಂದ ಬಿಜೆಪಿ ಪಟ್ಟಿ ವಿಳಂಬ

ಮಗನ ವಿಚಾರದಲ್ಲಿ ಯಡಿಯೂರಪ್ಪಗೆ ಆತಂಕ ಬೆಂಗಳೂರು : ಹಾಲಿ ಶಾಸಕರು ಮತ್ತು ಸಂಸದರ ಮಕ್ಕಳಿಗೆ ಟಿಕೆಟ್ ನೀಡಲು ಪ್ರಧಾನಿ ನರೇಂದ್ರ ಮೋದಿ ಅಸಮ್ಮತಿ ವ್ಯಕ್ತಪಡಿಸಿರುವುದು ಬಿಜೆಪಿ ಟಿಕೆಟ್‌ ಘೋಷಣೆ ವಿಳಂಬವಾಗಲು ಕಾರಣ ಎಂಬ ಮಾಹಿತಿ ಬಿಜೆಪಿ ಪಾಳಯದಿಂದ ಹೊರಬಿದ್ದಿದೆ. ಭಾನುವಾರವೇ ಘೋಷಣೆಯಾಗಬೇಕಿದ್ದ ಮೊದಲ ಪಟ್ಟಿಯಲ್ಲಿ ಮೋದಿ ಹಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲು ರಾಜ್ಯ ನಾಯಕರು ಮತ್ತೆ ಚರ್ಚೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲು ಇನ್ನೂ ಒಂದು ಅಥವಾ

ಶಾಸಕ, ಸಂಸದರ ಮಕ್ಕಳಿಗೆ ಟಿಕೆಟ್‌ ನೀಡಲು ಮೋದಿ ಅಸಮ್ಮತಿಯಿಂದ ಬಿಜೆಪಿ ಪಟ್ಟಿ ವಿಳಂಬ Read More »

ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ

ಬೆಂಗಳೂರು : ಈ ವರ್ಷದ ಮೊದಲ ಸೂರ್ಯಗ್ರಹಣ ವೈಶಾಖ ಅಮವಾಸ್ಯೆ ದಿನವಾದ ಏ.20 ರಂದು ಸಂಭವಿಸಲಿದೆ. ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ ಹಿಂದೂ ಮಹಾಸಾಗರ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದಿದ್ದರೂ ಜ್ಯೋತಿಶ್ಶಾಸ್ತ್ರದ ಪ್ರಕಾರ ಅದರ ಪರಿಣಾಮ ಇದೆ.2023ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸಲಿದೆ. ಈ ಪೈಕಿ ಮೊದಲ ಗ್ರಹಣ ಏ.20ರದ್ದು. ಗ್ರಹಣ ಬೆಳಗ್ಗೆ 7.04ಕ್ಕೆ ಶುರುವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳುತ್ತದೆ. ಎರಡನೇ ಸೂರ್ಯಗ್ರಹಣ ಮುಂಬರುವ

ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ Read More »

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ

ಪ್ರಯೋಗ ಖಚಿತ-ಬಂಡಾಯ ತಪ್ಪಿಸಲು ತಂತ್ರಗಾರಿಕೆ ದೆಹಲಿ : ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಸೋಮವಾರವೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಮತ್ತು 170 ರಿಂದ 180 ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಇಂದು (ಸೋಮವಾರ) ರಾತ್ರಿಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.ಆದರೆ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಗೆ ಮರಳುವುದು

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ Read More »

ಈ ಸಲವೂ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

ಸ್ಕೈಮೆಟ್‌ ವರದಿಯಲ್ಲಿದೆ ಕಳವಳಕಾರಿ ಅಂಶ ದೆಹಲಿ : ಕಳೆದ ಋತುವಿನಲ್ಲಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮವಾಗಿ ಈ ಬೇಸಿಗೆಯಲ್ಲಿ ಈಗಾಗಲೇ ನದಿ, ಕೆರೆ ತೊರೆಗಳೆಲ್ಲ ಬತ್ತಿ ಹೋಗಿ ನೀರಿಗೆ ಹಾಹಾಕಾರ ಎದ್ದಿದೆ. ಪರಿಸ್ಥಿತಿ ಹೀಗಿರುವಾಗ ಹವಾಮಾನ ಮುನ್ಸೂಚನೆ ನೀಡುವ ಸ್ಕ್ಯಮೇಟ್‌ ಸಂಸ್ಥೆ ಮುಂದಿನ ಮಳೆಗಾಲದಲ್ಲೂ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂಬ ವರದಿಯನ್ನು ನೀಡಿ ಜನರನ್ನು ಆತಂಕಕ್ಕೆ ತಳ್ಳಿದೆ. ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.ಮುಂಬರುವ ಮಾನ್ಸೂನ್‌ನಲ್ಲಿ

ಈ ಸಲವೂ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ Read More »

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ

ಬೆಂಗಳೂರು ಪೊಲೀಸರ ಕಾರ್ಯಾಚರಣೆ ಬೆಂಗಳೂರು : ಬೆಂಗಳೂರು ಪೊಲೀಸರು ಇಂದು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 8.50 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.ದಕ್ಷಿಣ ವಿಭಾಗದ ವಿವಿ ಪುರಂ ಹಾಗೂ ಜಯನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 5 ಮಂದಿ ನೈಜೀರಿಯಾ ಪ್ರಜೆಗಳು ಸೆರೆಯಾಗಿದ್ದಾರೆ.7.32 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಎಂಡಿಎಂಎ, 1 ಕೆಜಿ 150 ಗ್ರಾಂ ಬ್ರೌನ್‍ಶುಗರ್, 310 ಗ್ರಾಂ ಕೊಕೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವೀಸಾ ಅವಧಿ 3 ವರ್ಷಗಳ ಹಿಂದೆಯೇ

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ Read More »

ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ

ಉಪ್ಪಿನಂಗಡಿ : ಸಮೀಪದ ಪೆರ್ನೆಯಲ್ಲಿ 2013 ಎಪ್ರಿಲ್‌ 9ರಂದು ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆಗೆ 10 ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಪೆರ್ನೆ ತಿರುವಿನಲ್ಲಿ ಮಗುಚಿ ಬಿದ್ದಿದ್ದು, ಅನಿಲ ಸೋರಿಕೆ ಆರಂಭವಾಗಿ ಅಗ್ನಿ ಸ್ಪರ್ಶವಾಗಿತ್ತು. ಧಗಧಗಿಸಲಾರಂಭಿಸಿದ ಬೆಂಕಿಯ

ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ Read More »

error: Content is protected !!
Scroll to Top