ಸುದ್ದಿ

RSS ಪುತ್ತೂರು ಜಿಲ್ಲಾ ಸಂಘಚಾಲಕ್ ಕೊಡ್ಮಣ್ ಕಾಂತಪ್ಪ ಶೆಟ್ಟಿ ನಿಧನ

ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ, ಧಾರ್ಮಿಕ, ಸಹಕಾರಿ ನೇತಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮೇ 22ರಂದು ಮಧ್ಯಾಹ್ನ  ನಿಧನರಾದರು. ಕೆಲ ಸಮಯಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದರು. ಅವರು ಪತ್ನಿ, ತಮ್ಮ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲ್, ಆರ್ ಎಸ್ ಎಸ್ […]

RSS ಪುತ್ತೂರು ಜಿಲ್ಲಾ ಸಂಘಚಾಲಕ್ ಕೊಡ್ಮಣ್ ಕಾಂತಪ್ಪ ಶೆಟ್ಟಿ ನಿಧನ Read More »

ನಾಳೆಯಿಂದ 2,000 ರೂ. ನೋಟು ಬದಲಾವಣೆ

ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಬ್ಯಾಂಕ್‌ಗಳಲ್ಲಿ ಮಂಗಳವಾರದಿಂದ ಶುರುವಾಗಲಿದೆ. ಅದಕ್ಕಾಗಿ ಯಾವುದೇ ಫಾರಂಗಳನ್ನು ಭರ್ತಿ ಮಾಡುವುದು ಅಥವಾ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲವೆಂದು ಎಸ್‌ಬಿಐ ಸ್ಪಷ್ಟಪಡಿಸಿದೆ. 2 ಸಾವಿರ ರೂ. ನೋಟು ವಿನಿಮಯ ಮಾಡಲು ಕೋರಿಕೆ ರಸೀತಿ (ರಿಕ್ವಿಸಿಷನ್‌ ಸ್ಲಿಪ್‌), ಗುರುತಿನ ಚೀಟಿ ನೀಡಬೇಕು, ಫಾರಂ ಭರ್ತಿ ಮಾಡಿಕೊಡಬೇಕು ಎಂದು ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ನೋಟು ವಿನಿಮಯ ಕೌಂಟರ್‌ಗಳಲ್ಲಿ ಒಂದು ಬಾರಿಗೆ ಒಬ್ಬರಿಂದ 20 ಸಾವಿರ ರೂ.ವರೆಗೆ

ನಾಳೆಯಿಂದ 2,000 ರೂ. ನೋಟು ಬದಲಾವಣೆ Read More »

ನೂತನ ಅಡ್ವೊಕೇಟ್‌ ಜನರಲ್ ಆಗಿ ಶಶಿಕಿರಣ್ ಶೆಟ್ಟಿ ನೇಮಕ

ಬೆಂಗಳೂರು : ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಅಡ್ವೊಕೇಟ್‌ ಜನರಲ್‌ ಸ್ಥಾನಕ್ಕೆ‌ ಪ್ರಭುಲಿಂಗ ನಾವದಗಿ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಶಶಿಕಿರಣ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬೀಳಬೇಕಿದ್ದು, ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರ ಪುತ್ರನೂ ಆಗಿರುವ ಶಶಿಕಿರಣ್ ಶೆಟ್ಟಿ ಅವರು ಶಾಸಕರ ಅನರ್ಹತೆ ಸೇರಿ ಹಲವು ಮಹತ್ವದ ಪ್ರಕರಣಗಳನ್ನು ನಿರ್ವಹಿಸಿದ್ದರು.

ನೂತನ ಅಡ್ವೊಕೇಟ್‌ ಜನರಲ್ ಆಗಿ ಶಶಿಕಿರಣ್ ಶೆಟ್ಟಿ ನೇಮಕ Read More »

ಜೂನ್ 1ಕ್ಕೇ ಶುರುವಾಗಲಿದೆ ಮಳೆಗಾಲ

ಹೊಸದಿಲ್ಲಿ : ಈ ವರ್ಷ ಮುಂಗಾರು ವಿಳಂಬವಾಗುತ್ತದೆ ಎಂಬ ಮುನ್ಸೂಚನೆಯಿಂದ ಕಂಗಾಲಾಗಿದ್ದ ರೈತಾಪಿ ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ಸಾಲಿನಲ್ಲೂ ಮುಂಗಾರು ವಾಡಿಕೆಯಂತೆ ಜೂನ್ 1ರಂದಲೇ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೊಸ ಮಾಹಿತಿ ಬಿಡುಗಡೆಗೊಳಿಸಿದೆ. ಕೆಲ ದಿನಗಳ ಹಿಂದೆ ಮುಂಗಾರು ಕರ್ನಾಟಕ ಪ್ರವೇಶ ಸುಮಾರು ಒಂದು ವಾರದಷ್ಟು ವಿಳಂಬವಾಗಬಹುದು ಎಂಬ ಮುನ್ಸೂಚನೆ ನೀಡಿದಾಗ ಬಿರು ಬೇಸಿಗೆಯಿಂದಾಗಿ ಜಲಮೂಲಗಳೆಲ್ಲ ಬತ್ತಿ ನೀರಿಗೆ ಹಾಹಾಕಾರ ಮಾಡುತ್ತಿದ್ದ ಜನರಿಗೆ ಚಿಂತೆಯಾಗಿತ್ತು. ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ

ಜೂನ್ 1ಕ್ಕೇ ಶುರುವಾಗಲಿದೆ ಮಳೆಗಾಲ Read More »

ಸಿಎಂ, ಡಿಸಿಎಂ ಪ್ರಮಾಣ ವಚನ ಇಂದು | ಸಂಪುಟಕ್ಕೆ ಸೇರುವ 8 ಸಚಿವರು ಯಾರು? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​​ ಜತೆಗೆ ಮೊದಲ ಹಂತದಲ್ಲಿ 8 ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿನ್ನೆ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಒಯ್ದ ಪಟ್ಟಿಯಲ್ಲಿ 8 ಮಂದಿಯ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ. ಎಂ.ಬಿ. ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್​

ಸಿಎಂ, ಡಿಸಿಎಂ ಪ್ರಮಾಣ ವಚನ ಇಂದು | ಸಂಪುಟಕ್ಕೆ ಸೇರುವ 8 ಸಚಿವರು ಯಾರು? ಇಲ್ಲಿದೆ ನೋಡಿ ಮಾಹಿತಿ Read More »

ಹೀಗೆ ಬದಲಾಯಿಸಿಕೊಳ್ಳಿ 2,000 ರೂ. ನೋಟು

ಬೆಂಗಳೂರು: 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್‌ ಬ್ಯಾನ್‌ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್‌ ಬ್ಯಾನ್‌ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆಪ್ಷಟಂಬರ್‌ 30ರ ತನಕ ಸಮಯ ಇದೆ ಎಂದು

ಹೀಗೆ ಬದಲಾಯಿಸಿಕೊಳ್ಳಿ 2,000 ರೂ. ನೋಟು Read More »

ರಾಮಕುಂಜದಲ್ಲಿ ಮಲೇರಿಯಾ, ಡೆಂಗ್ಯು ದಿನಾಚರಣೆ | ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ

 ರಾಮಕುಂಜ: ಮುತ್ತೂಟ್ ಫೈನಾನ್ಸ್, ಕಸ್ವಿ ಹಸಿರು ದಿಬ್ಬಣ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪುತ್ತೂರು ತಾಲೂಕು ಆರೋಗ್ಯಕೇಂದ್ರದ ಆಶ್ರಯದಲ್ಲಿ ಮಲೇರಿಯಾ, ಡೆಂಗ್ಯು ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ಶುಕ್ರವಾರ  ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು. ಸುಳ್ಯ ನೂತನ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುತ್ತೂಟ್ ಫೈನಾನ್ಸ್ ಹಲವು ಸಾಮಾಜಿಕ ಕೆಲಸ ಮಾಡುತ್ತಿದೆ. ಕತ್ತಲೆಯಿಂದ ಬೆಳಕಿನೆಡೆ ಬರಬೇಕೆಂಬ ದೃಷ್ಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ

ರಾಮಕುಂಜದಲ್ಲಿ ಮಲೇರಿಯಾ, ಡೆಂಗ್ಯು ದಿನಾಚರಣೆ | ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ Read More »

ಇಂದು ಮಲೇರಿಯಾ, ಡೆಂಗ್ಯೂ ಡೇ | ತಾಲೂಕಿನ ಆಶಾ ಕಾರ್ಯಕರ್ತರಿಗೆ ಟಾರ್ಚ್ ಲೈಟ್ ವಿತರಣೆ

ಪುತ್ತೂರು: ಮಲೇರಿಯಾ, ಡೆಂಗ್ಯೂ ಡೇ ಹಾಗೂ ತಾಲೂಕಿನ ಆಶಾ ಕಾರ್ಯಕರ್ತರಿಗೆ ಟಾರ್ಚ್ ಲೈಟ್ ವಿತರಣೆ ಸಮಾರಂಭ ಮೇ 19ರಂದು ಮಧ್ಯಾಹ್ನ 2.30ಕ್ಕೆ ಪುತ್ತೂರು ತಾಲೂಕು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ. ಮುತ್ತೂಟ್ ಫೈನಾನ್ಸ್, ಕಶ್ವಿ ಹಸಿರು ದಿಬ್ಬಣ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಕಾರ್ಯಕ್ರಮ ಆಯೋಜಿಸಿದೆ. ಎಸ್.ಆರ್.ಕೆ. ಲ್ಯಾಡರ್ಸಿನ ಕೇಶವ್ ಅಮೈ ಕಾರ್ಯಕ್ರಮ ಉದ್ಘಾಟಿಸುವರು. ಡಿ.ಸಿ.ಆರ್.ಆರ್. ರತ್ನಾಕರ್ ರೈ, ಮಂಗಳೂರು ಮುತ್ತೂಟ್ ಫೈನಾನ್ಸ್ ರೀಜನಿನ ರೀಜನಲ್ ಮ್ಯಾನೇಜರ್ ಉದಯ್ ಶ್ಯಾಮ್ ಖಂಡಿಗೆ,

ಇಂದು ಮಲೇರಿಯಾ, ಡೆಂಗ್ಯೂ ಡೇ | ತಾಲೂಕಿನ ಆಶಾ ಕಾರ್ಯಕರ್ತರಿಗೆ ಟಾರ್ಚ್ ಲೈಟ್ ವಿತರಣೆ Read More »

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ!

ಸುಳ್ಯ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ನವೀನ್ ರೈ ಮೇನಾಲ ಅವರ ಮೃತದೇಹ ಸುಳ್ಯದ ಹೊಳೆಯಲ್ಲಿ ಪತ್ತೆಯಾಗಿದೆ. ಪಯಸ್ವಿನಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪಂಪ್ ರಿಪೇರಿಗೆ ತೆರಳಿದ್ದ ಅವರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಯ್ತು ಬಿಜೆಪಿ ಮುಖಂಡನ ಶವ! Read More »

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್ Read More »

error: Content is protected !!
Scroll to Top