ಸುದ್ದಿ

ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಪುತ್ತೂರು : ಪುತ್ತೂರಿನ ಹೈಸ್ಕೂಲ್ ನಲ್ಲಿ ವ್ಯಾಸಂಗ ಪಡೆಯುತ್ತಿದ್ದ ವಿದ್ಯಾರ್ಥಿನಿ ನೋವಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.  ವಿದ್ಯಾರ್ಥಿನಿ  ಗಂಭೀರವಾಗಿ ಅಸ್ವಸ್ಥಗೊಂಡಿದ್ದಾಳೆಂದು ತಿಳಿದು ಬಂದಿದೆ. ಶಾಲಾ ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಮನನೊಂದು ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದಾಗಿ ಸಂತ್ರಸ್ತೆಯ  ತಂದೆ ಆರೋಪಿಸಿದ್ದಾರೆ. ಮಗಳು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ ಸದ್ಯ ಪಡೀಲುನಲ್ಲಿದ್ದು ಪುತ್ತೂರು ನಗರದಲ್ಲಿರುವ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಓದುತ್ತಿರುವ […]

ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ Read More »

2025ರ ಸಾರ್ವತ್ರಿಕ ರಜೆಗಳ ಪಟ್ಟಿ

ಬೆಂಗಳೂರು: ಇನ್ನು ಕೆಲವೇ ತಾಸುಗಳಲ್ಲಿ 2024 ಮರೆಗೆ ಸರಿದು 2025ನೇ ವರ್ಷ ಶುರುವಾಗಲಿದೆ. ಪ್ರತಿ ವರ್ಷದಂತೆ 2025ರ ಸಾರ್ವತ್ರಿಕ ಮತ್ತು ಪರಿಮಿತ ರಜೆ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರ ಸರಕಾರಿ ರಜೆ ಇರುತ್ತದೆ. ಸಾರ್ವತ್ರಿಕ ರಜಾ ದಿನಗಳ ಪಟ್ಟಿ

2025ರ ಸಾರ್ವತ್ರಿಕ ರಜೆಗಳ ಪಟ್ಟಿ Read More »

2024ರ ಟಾಪ್ 26 ಮೆಗಾ ಸುದ್ದಿಗಳು

ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಒಂದಷ್ಟು ಸಂತಸದ ಕ್ಷಣಗಳನ್ನು… 2024ರ ವರ್ಷ ಇಂದು ರಾತ್ರಿ ಇತಿಹಾಸದ ಭಾಗವಾಗಿ ನೇಪಥ್ಯಕ್ಕೆ ಸರಿದು 2025ಕ್ಕೆ ದಾರಿ ಮಾಡಿಕೊಡುತ್ತಾ ಇದೆ. ಒಮ್ಮೆ ಹಿಂತಿರುಗಿ 2024ರ ಮಹತ್ವದ ಘಟನೆಗಳನ್ನು ಇಣುಕಿ ನೋಡುತ್ತಾ ಹೋದಾಗ ‘ಕಭಿ ಖುಷ್‌ ಕಭಿ ಗಮ್’ ಹಾಡು ನೆನಪಾಗುತ್ತದೆ. ಇಡೀ ವರ್ಷ ವಿವಾದಗಳು, ನೋವುಗಳು ಮತ್ತು ಒಂದಿಷ್ಟು ಸಂತಸಗಳು ಈ ವರ್ಷದಲ್ಲಿ ನಡೆದಿವೆ. ಅವುಗಳ ಒಂದು ಇಣುಕು ನೋಟ ಇಲ್ಲಿದೆ. 1) ದೋಮ್ಮರಾಜು ಗುಕೇಶ್ ಚೆಸ್ಸಿನಲ್ಲಿ

2024ರ ಟಾಪ್ 26 ಮೆಗಾ ಸುದ್ದಿಗಳು Read More »

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ

ಪುತ್ತೂರು : ಪುತ್ತೂರಿನ ಮುಖ್ಯರಸ್ತೆ ಬದಿಯಲ್ಲೇ ಇದ್ದಂತಹ ಪೈಪ್ ಒಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೈಪ್‍ ನಿಂದ ಕಾಲು ತೆಗೆಯಲು ಒದ್ದಾಡಿದ್ದ ಘಟನೆ ಸೋಮವಾರ ಸಂಜೆ ನಡೆಯಿತು. ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆಯಾಗಿದೆ. ಮುಖ್ಯ ರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದ್ದು, ಅಲ್ಲಿದ್ದ ಪೈಪ್ ಲೈನ್ ಕಳೆವು ದಿನಗಳಿಂದ ತುಂಡಾಗಿ ಅಲ್ಲೆ ಬಿದ್ದಿತ್ತು ಎನ್ನಲಾಗಿತ್ತು. ತುಂಡಾಗಿ ಬಿದ್ದಿರುವ ಪೈಪ್‍ ಲೈನ್‍ಗಳನ್ನು ಗಮನಿಸದ

ಪುತ್ತೂರು ಮುಖ್ಯ ರಸ್ತೆಯಲ್ಲಿ ತುಂಡಾಗಿ ಬಿದ್ದ ಪೈಪ್‍ ಲೈನ್‍ |ಪೈಪ್‍ಗೆ ಕಾಲು ಸಿಲುಕಿ ಮಹಿಳೆ ಒದ್ದಾಟ Read More »

ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿನಿಂದ ಪೊದೆಗೆ ಬಿದ್ದ ವಿದ್ಯಾರ್ಥಿ

ಮೂಡುಬಿದ್ರೆ : ಬಸ್ಸು ಚಲಿಸುತ್ತಿದ್ದಂತೆ ಕಾಲೇಜು ವಿದಯಾರ್ಥಿಯೋರ್ವ ನಿಯಂತ್ರಣ ತಪ್ಪಿ ಬಲ್ಲೆಗೆ ಬಿದ್ದ ಘಟನೆ ಡಿ.30 ರಂದು ಮೂಡುಬಿದ್ರೆ ಸಮೀಪ ತೊಡಾರಿನ ಖಾಸಗಿ ಕಾಲೇಜು ಬಳಿ ನಡೆದಿದೆ. ಚಲಿಸುತ್ತಿದ್ದ ಖಾಸಗಿ ಬಸ್‌ನ ಬಾಗಿಲಲ್ಲಿ ನಿಂತಿದ್ದ ವೇಳೆ ಕಾಲೇಜು  ನಿಯಂತ್ರಣ ತಪ್ಪಿ ಬಸ್ಸಿಂದ ಬಲ್ಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ.  ಅದೃಷ್ಟವಶಾತ್ ಬಸ್ಸಿಂದ ಬಿದ್ದ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರ್ಕಾಳ-ಮೂಡುಬಿದರೆ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತೋಡಾರಿನ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಬರುತ್ತಿರುವ ವೇಳೆ ತನ್ನ ನಿಲ್ದಾಣ ಬರುವ ಮನ್ನವೇ ಇಳಿಯುವ

ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿನಿಂದ ಪೊದೆಗೆ ಬಿದ್ದ ವಿದ್ಯಾರ್ಥಿ Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಪಂಜ: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಡಿ.29 ರಂದು ರಾತ್ರಿ ಪಂಜದ ಕೃಷ್ಣನಗರದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿ ಜೀವನ್ ಎಂದು ಗುರುತಿಸಲಾಗಿದೆ. ಪಂಜ ಕಡೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಜೀವನ್ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾಣಿಸಲಾಗಿದೆ. ಕಾರಿನಲ್ಲಿದ್ದ ದೇವಣ್ಣ ಎಂಬವರು ಅಪಾಯದಿಂದ ಪಾರಾಗಿದ್ದಾರೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ Read More »

ಬಿಜೆಪಿಯವರು ಎಷ್ಟೇ ಚೀರಾಡಿದರು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್‌ ಖರ್ಗೆ

ಗುತ್ತಿಗೆದಾರ ಸಚಿನ್‌ ಪಂಚಾಳ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಇಲ್ಲ ಎಂದು ವಾದ ಬೆಂಗಳೂರು: ಬಿಜೆಪಿಯವರು ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಚಿನ್‌ ಪಂಚಾಳ್‌ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರಿಗೆ

ಬಿಜೆಪಿಯವರು ಎಷ್ಟೇ ಚೀರಾಡಿದರು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್‌ ಖರ್ಗೆ Read More »

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು

ಸೋತು ಸುಣ್ಣವಾದ ಟೀಂ ಇಂಡಿಯಾ ಹೋರಾಟ 155 ರನ್‌ಗಳಿಗೆ ಮುಕ್ತಾಯ ಮೆಲ್ಬೋರ್ನ್​: ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಯಾಮ್​ ಕೊನ್​ಸ್ಟಾಸ್ (60), ಉಸ್ಮಾನ್ ಖ್ವಾಜಾ (57), ಮಾರ್ನಸ್

ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು Read More »

ರಂಗಭೂಮಿ ಕಲಾವಿದ ವಿಠಲ ಪೂಜಾರಿ ಅತಿಕಾರಬೈಲು ಆತ್ಮಹತ್ಯೆಗೆ ಶರಣು

ವಿಟ್ಲ : ನಾಟಕ ಕಲಾವಿದರಾದ  ವಿಠಲ ಪೂಜಾರಿ (49) ಅತಿಕಾರಬೈಲು ಮನೆಯ ಹಟ್ಟಿಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಯುವಕೇಸರಿ ಅತಿಕಾರಬೈಲು ಅಧ್ಯಕ್ಷರಾಗಿ, ನಾಟಕ ಕಲಾವಿದರು ಮತ್ತು ಬಿಲ್ಲವ ಸಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಚಂದಳಿಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದ ವಿಠಲ ಪೂಜಾರಿ ಅತಿಕಾರಬೈಲು ಆತ್ಮಹತ್ಯೆಗೆ ಶರಣು Read More »

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ

ಮಧ್ಯಪ್ರದೇಶದ : ಮುಸ್ಲಿಂ ವ್ಯಕ್ತಿಯೋರ್ವ ಪ್ರದೀಪ್ ಸೋಲಂಕಿ ಎಂದು ಹಿಂದೂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಮಾತ್ರವಲ್ಲದೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಮೊಕ್ಸಿನ್ ಎಂಬ ಮುಸ್ಲಿಂ ಯುವಕ ತನ್ನ ಹೆಸರನ್ನು ಪ್ರದೀಪ್ ಎಂದು ಬದಲಾಯಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದಾನೆ. ಈತ  ಪ್ರದೀಪ್ ಸೋಲಂಕಿ ಎಂದು ಹೇಳಿಕೊಂಡು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಆರೋಪಿ ಮೂರು ವರ್ಷಗಳಿಂದ ಆಕೆಗೆ ಲೈಂಗಿಕವಾಗಿ ಶೋಷಿಸುತ್ತಿದ್ದ. ಸಂತ್ರಸ್ತೆ ಕುಟುಂಬ ಸಮೇತ ಪೊಲೀಸ್ ಠಾಣೆಗೆ

ಹಿಂದು ಹೆಸರಿನಲ್ಲಿ ಯುವತಿಗೆ ವಂಚನೆ | ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ತೋರಿಸಿ ಯುವತಿಗೆ ಬೆದರಿಕೆ Read More »

error: Content is protected !!
Scroll to Top