ಪತಿಯನ್ನು ಚಾಕು ಇರಿದು ಕೊಂದ ಪತ್ನಿ
ಬೆಂಗಳೂರು: ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆಗೈದ ಘಟನೆ ಅನ್ನಪೂರ್ಣೇಶ್ವರಿ ನಗರದ ಮಲ್ಲತಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತೌಹಿಬ್ ಪಾಷ ಎಂದು ಗುರುತಿಸಲಾಗಿದೆ. ತೌಹಿಬ್ ಪತ್ನಿ ಸೋಹಾನಾ ಕೊಲೆಗೈದ ಆರೋಪಿ. ಕೌಟುಂಬಿಕ ಕಲಹದ ಕಾರಣಕ್ಕೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಪತ್ನಿ, ಆಕೆಯ ತಂದೆ ಮತ್ತು ತಾಯಿ ಸೇರಿ ಈ ಹತ್ಯೆ ಮಾಡಿದ್ದಾರೆ ಎಂದು ಕೊಲೆಯಾದ ತೌಹಿಬ್ನ ಮನೆಯವರು ಆರೋಪಿಸಿದ್ದಾರೆ. ಆರೋಪಿ ಸೋಹಾನಾ ಮತ್ತು ಆಕೆಯ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪತಿಯನ್ನು ಚಾಕು ಇರಿದು ಕೊಂದ ಪತ್ನಿ Read More »










