ಸುದ್ದಿ

ಭದ್ರತಾ ಪಡೆಗಳ ಕಾರ್ಯಾಚರಣೆ: ಮಹಿಳಾ ನಕ್ಸಲ್ ಕಮಾಂಡರ್ ಸೇರಿ ನಾಲ್ವರು ನಕ್ಸಲರ ಹತ್ಯೆ

ನವದೆಹಲಿ: ಜಾರ್ಖಂಡ್‌ನ ಪಿಪರ್ವಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳಾ ನಕ್ಸಲ್ ಕಮಾಂಡರ್ ಸೇರಿದಂತೆ ನಾಲ್ಕು ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ತಲೆೆಗ 15 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಶಹದಿಯೋ ಮಹ್ತೋ ಮತ್ತು ಮಹಿಳಾ ನಕ್ಸಲ್ ನತಾಶಾ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರದೇಶದಲ್ಲಿ ನಕ್ಸಲರಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಈ ದಾಳಿ ನಡೆಸಲಾಗಿದೆ. ಕೋಬ್ರಾ ಬೆಟಾಲಿಯನ್‌ನ ಸೈನಿಕರು ಛತ್ರ-ಹಜಾರಿಬಾಗ್ ಗಡಿಯಲ್ಲಿ ಶೋಧ […]

ಭದ್ರತಾ ಪಡೆಗಳ ಕಾರ್ಯಾಚರಣೆ: ಮಹಿಳಾ ನಕ್ಸಲ್ ಕಮಾಂಡರ್ ಸೇರಿ ನಾಲ್ವರು ನಕ್ಸಲರ ಹತ್ಯೆ Read More »

10 ಸಾವಿರ ರೂ. ಮೇಲ್ಪಟ್ಟ ಯುಪಿಐ ಪಾವತಿಗೆ ಹೊಸ ನಿಯಮ : ಆರ್‌ಬಿಐ ಚಿಂತನೆ

ಡಿಜಿಟಲ್‌ ವಂಚನೆ ತಡೆಯುವ ಸಲುವಾಗಿ ನಿಯಮ ಬದಲಾವಣೆಗೆ ಮುಂದಾದ ಆರ್‌ಬಿಐ ನವದೆಹಲಿ: ಯುಪಿಐ ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಹಣ ತಕ್ಷಣ ಕಡಿತವಾಗದೆ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ಆರ್‌ಬಿಐ ಮುಂದಾಗಿದೆ. ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು

10 ಸಾವಿರ ರೂ. ಮೇಲ್ಪಟ್ಟ ಯುಪಿಐ ಪಾವತಿಗೆ ಹೊಸ ನಿಯಮ : ಆರ್‌ಬಿಐ ಚಿಂತನೆ Read More »

ಇನ್ನೆರಡು ದಿನ ಸೂರ್ಯನ ತಾಪ ಹೆಚ್ಚಳ: ಬಿಸಿಲಿಗೆ ಅನಗತ್ಯ ಹೊರ ಹೋಗದಂತೆ ಜನರಿಗೆ ತಜ್ಞರ ಸಲಹೆ

ಬೆಂಗಳೂರು: ಬೇಸಿಗೆಯ ಬಿಸಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇನ್ನೂ ಹಲವು ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಬಿಸಿಗಾಳಿ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದ್ದು ಜನರು ಎಚ್ಚರದಿಂದ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಕರ್ನಾಟಕದ ಕರಾವಳಿ ಭಾಗ ಮತ್ತು ಕಲ್ಯಾಣ ಕರ್ನಾಟಕ ಈಗಾಗಲೇ ಕಾದ ಕಾವಲಿಯಂತಾಗಿವೆ. ಕೆಲವು ಪ್ರದೇಶಗಳಲ್ಲಿ ತಾಪಮಾನ 45% ಗಿಂತ ಅಧಿಕವಾಗುವ‌‌ ಸಾಧ್ಯತೆ ಸಹ ಇದೆ

ಇನ್ನೆರಡು ದಿನ ಸೂರ್ಯನ ತಾಪ ಹೆಚ್ಚಳ: ಬಿಸಿಲಿಗೆ ಅನಗತ್ಯ ಹೊರ ಹೋಗದಂತೆ ಜನರಿಗೆ ತಜ್ಞರ ಸಲಹೆ Read More »

ಮಹಿಳೆಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ : ವಿಪಕ್ಷಗಳಿಗೆ ಅಮಿತ್‌ ಶಾ ಎಚ್ಚರಿಕೆ

ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ವಿಪಕ್ಷಗಳಿಗೆ ತರಾಟೆ ನವದೆಹಲಿ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಇದು ವಿರೋಧ ಪಕ್ಷದ ವಿರುದ್ಧ ಬಿಜೆಪಿ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಸೂದೆಯೊಂದಿಗೆ ಮಹಿಳಾ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದ ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ

ಮಹಿಳೆಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ : ವಿಪಕ್ಷಗಳಿಗೆ ಅಮಿತ್‌ ಶಾ ಎಚ್ಚರಿಕೆ Read More »

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ವಿಟ್ಲ : ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ 36 ಸಲ ಬಂಧನ ವಾರಂಟ್‌ ಜಾರಿಯಾಗಿತ್ತು ಎನ್ನಲಾಗಿದೆ. ಏ.16ರಂದು ಅಬ್ಬಾಸ್ ವಿದೇಶದಿಂದ ಹಿಂತಿರುಗುವಾಗ ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಮೋಹನ ಮತ್ತು ವೆಂಕಪ್ಪ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಜೀವಾವಧಿ ಶಿಕ್ಷೆಗೊಳಗಾದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ರದ್ದು

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ರದ್ದಾಗಿದೆ. ಬುಧವಾರ ಶಾಸಕರು ಸೇರಿದಂತೆ 16 ಮಂದಿಯನ್ನು ಅಪರಾಧಿಗಳು ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದ ಹಿನ್ನೆಲೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ರ

ಜೀವಾವಧಿ ಶಿಕ್ಷೆಗೊಳಗಾದ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ರದ್ದು Read More »

ಜನರಿಗೆ ಕರೆಂಟ್‌ ಶಾಕ್‌ : ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಹೆಚ್ಚಳ

ಮುಂದಿನ ತಿಂಗಳಿಂದ ಗೃಹ ಬಳಕೆದಾರರಿಗೆ ವಿದ್ಯುತ್‌ ಬರೆ ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ. 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಕೊರತೆಯನ್ನು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.

ಜನರಿಗೆ ಕರೆಂಟ್‌ ಶಾಕ್‌ : ವಿದ್ಯುತ್‌ ದರ ಯೂನಿಟ್‌ಗೆ 56 ಪೈಸೆ ಹೆಚ್ಚಳ Read More »

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು

ಪ್ರಸಿದ್ಧ ಪ್ರವಾಸಿ ತಾಣ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ದುರಂತ ಕೊಯಮತ್ತೂರು : ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ. ಮೃತರನ್ನು ಅಜಿತಾ (54), ರಮ್ಲಾ

ವ್ಯಾನ್‌ ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು Read More »

ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ‌ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ?

ಬೆಂಗಳೂರು: ರಾಜ್ಯದ ಚಾರಣಕ್ಕೆ ಸೂಕ್ತ ಪ್ರದೇಶಗಳಲ್ಲಿ ಚಾರಣಿಗರಿಗೆ ಅಪಾಯ ಎದುರಾಗುವ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ, ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಈಗ 44 ಚಾರಣ ಪ್ರದೇಶ ಗಳಿದ್ದು, ಇದರಲ್ಲಿ ಶರಣ್ಯಾ ಎಂಬ ಯುವತಿ ಕಾಣೆಯಾದ ಕೊಡಗಿನ ತಡಿಯಾಂಡಮೋಳ್ ಮತ್ತು ಕೇರಳದ ಬಾಲಕಿ ಮೃತಪಟ್ಟ ಚಿಕ್ಕಮಗಳೂರಿನ ಚಾರಣ ಪ್ರದೇಶಗಳೂ ‌ಸೇರಿವೆ. ಇಲ್ಲಿ ನಡೆದ ಎಲ್ಲಾ ಅಪಘಾತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಾರಣಿಗರ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿದೆ. ಮಾರ್ಗಸೂಚಿಯಲ್ಲೇನಿದೆ?: ಚಾರಣ

ಚಾರಣಿಗರಿಗೆ ಹೊಸ ರೂಲ್ಸ್: ಅಪಾಯ ತಪ್ಪಿಸೋದಕ್ಕೆ ‌ಸರ್ಕಾರದ ಹೊಸ ಮಾರ್ಗಸೂಚಿ ಏನು ಗೊತ್ತಾ? Read More »

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷ ಕಲಾವಿರಿಂದ ಪೊಲೀಸರಿಗೆ ದೂರು

ಮಂಗಳೂರು: ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಮಹಿಳಾ ಠಾಣೆಯಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿವೆ. ಕಲಾವಿದ ಸುಂದರ್ ರೈ ಮಂದಾರ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು ಅವರ ತಾಯಿಯ ಹೆಸರಿನಲ್ಲಿ ತಿಮರೋಡಿ ‌ವಿರುದ್ಧ ದೂರು ದಾಖಲಾಗಿರುವುದಾಗಿದೆ. ಕಳೆದ ಆರು ತಿಂಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಹೆಸರಿನ ಹಾಸ್ಯ ಕಾರ್ಯಕ್ರಮದಲ್ಲಿ ಹೆಸರು ಹೇಳದೆಯೇ ತನ್ನನ್ನು ವಿಡಂಬನೆ ಮಾಡಿರುವುದಾಗಿ ಆರೋಪಿಸಿ ಕಲಾವಿದ ಪ್ರಜ್ವಲ್ ಗುರುವಾಯನಕೆರೆ‌ಗೆ ಫೋನ್ ಮೂಲಕ ತಿಮರೋಡಿ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಕ್ಷ ಕಲಾವಿರಿಂದ ಪೊಲೀಸರಿಗೆ ದೂರು Read More »

error: Content is protected !!
Scroll to Top