ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀಣೋದ್ಧಾರ – ಪುನಃಪ್ರತಿಷ್ಟಾಪನೆ ಪ್ರಯುಕ್ತ ಪೂರ್ವಭಾವಿ ಸಭೆ ಬಪ್ಪಳಿಗೆಯಲ್ಲಿನ ಸುಬ್ರಹ್ಮಣ್ಯ ನಟ್ಟೋಜ ಅವರ ನಿವಾಸ ಶ್ರೀ ಚಕ್ರದಲ್ಲಿ ಭಾನುವಾರ ನಡೆಯಿತು.
ಎನ್.ಕೆ.ಜಗನ್ನಿವಾಸ ರಾವ್ ಮಾತನಾಡಿ, ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಲಕಯದ ಪುನಃಪ್ರತಿಷ್ಟೆ ಸಮಸ್ತ ಊರಿಗೆ ಸಂಬಂಧಿಸಿದ್ದು. ಊರವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾಗುವಂತಾಗಬೇಕು ಎಂದರು.
ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶ್ರೀ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನ ತೊಟ್ಟಿಲಕಯ ನಟ್ಟೋಜ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿದ್ದರೂ ದೇವರು ಎಲ್ಲರಿಗೂ ಸೇರಿದವರಾಗಿದ್ದಾರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ತೊಟ್ಟಿಲಕಯದ ಅಭಿವೃದ್ಧಿಯು ಪರಿಸರದ ಧರ್ಮಬಂಧುಗಳಿಗೆ ಒಳ್ಳೆಯದನ್ನು ಮಾಡಲಿದೆ. ಆದ್ದರಿಂದ ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿರದೆ ಸಮಸ್ತ ಊರಿನ ಕಾರ್ಯಕ್ರಮ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ನಟ್ಟೋಜ ಕುಟುಂಬಸ್ಥರಾದ ರಾಜಶ್ರೀ ಎಸ್. ನಟ್ಟೋಜ, ಶ್ರೀಕೃಷ್ಣ ನಟ್ಟೋಜ, ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿ ರಚನೆ:
ವಿವಿಧ ಧಾರ್ಮಿಕ ಕ್ರಿಯೆಗಳು, ಆಹ್ವಾನ ಪತ್ರಿಕೆ ತಯಾರಿಕೆ, ಭಕ್ತಾದಿಗಳ ಊಟೋಪಚಾರವೇ ಮೊದಲಾದ ಸಂಗತಿಗಳ ಬಗೆಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುನಃಪ್ರತಿಷ್ಟಾಪನೆ ನೆಲೆಯಲ್ಲಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ನಟ್ಟೋಜ ಶಿವಾನಂದ ರಾವ್ ಹಾಗೂ ಬಾಲಚಂದ್ರ ನಟ್ಟೋಜ, ಅಧ್ಯಕ್ಷರಾಗಿ ಎನ್.ಕೆ. ಜಗನ್ನಿವಾಸ ರಾವ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸೀತಾರಾಮ ಭಟ್ ಬಿ., ರವಿಕೃಷ್ಣ ಡಿ. ಕಲ್ಲಾಜೆ, ಎನ್.ಎಸ್. ಶಾಂತಾರಾಮ ರಾವ್, ಎನ್.ಎಸ್. ದಿನೇಶ ರಾವ್, ಕಿರಣ್ ಕುಮಾರ್ ರೈ, ಕೆ. ಮಾಧವ ಗೌಡ ಕಾಂತಿಲ, ಎನ್.ಎಸ್.ನಟರಾಜ್, ಮೋಹನ ನೆಲ್ಲಿತ್ತಾಯ ಆಯ್ಕೆಗೊಂಡರೆ ಕಾರ್ಯದರ್ಶಿಗಳಾಗಿ ಸುಬ್ರಹ್ಮಣ್ಯ ನಟ್ಟೋಜ, ಜತೆ ಕಾರ್ಯದರ್ಶಿಗಳಾಗಿ ಕೃಷ್ಣರಾಜ ಎನ್.ಎಸ್, ಬೊಳ್ಳಾವ ವಿದ್ಯಾಶಂಕರ, ಬಲ್ನಾಡು ಪ್ರಸನ್ನ ಎನ್. ಭಟ್ ಜವಾಬ್ದಾರಿ ವಹಿಸಿಕೊಂಡರು. ಕೋಶಾಧಿಕಾರಿಗಳಾಗಿ ಬಾಲಕೃಷ್ಣ ರಾವ್ ಎಂ ಆಯ್ಕೆಯಾದರು. ಸದಸ್ಯರಾಗಿ ಅನಾರು ಬಾಲಕೃಷ್ಣ ರಾವ್, ಪರಮೇಶ್ವರಿ ಭಟ್ ಬಬ್ಬಿಲಿ, ಪ್ರಕಾಶ್ ಕಲ್ಲಾಡಿ, ಆನಂದ ಸುವರ್ಣ, ವಾಟೆ ಎಚ್.ವಿ.ಶಾಂತಾರಾಮ ರಾವ್, ಎಸ್. ಸುಬ್ಬರಾವ್, ಬಾಬು ಪೂಜಾರಿ, ಮದಕ ನಾರಾಯಣ ಗೌಡ, ಕೃಷ್ಣಪ್ಪ ಗೌಡ, ರಾಮಣ್ಣ ಗೌಡ ಕರ್ಕುಂಜ ಹಾಗೂ ಬಾಳಪ್ಪ ಗೌಡ ಕರ್ಕುಂಜ ಆಯ್ಕೆಯಾದರು.