ಪ್ರಸ್ತುತ ಕಣದಲ್ಲಿ ಒಟ್ಟು 3130 ಸ್ಪರ್ಧಿಗಳು
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಮೇ.10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗುತ್ತದೆ. ಈಗಾಗಲೇ ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಇಂದೇ (ಏ.24) ಕೊನೆಯ ದಿನವಾಗಿದೆ. ಅಧಿಕೃತವಾಗಿ ಕಣದಲ್ಲಿ ಉಳಿಯುವವರು ಯಾರು ಎಂಬುದು ಇಂದು ಸ್ಪಷ್ಟವಾಗಲಿದೆ. ಪ್ರಸ್ತುತ ಕಣದಲ್ಲಿ ಒಟ್ಟು 3130 ಅಭ್ಯರ್ಥಿಗಳಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಎಎಪಿ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರವಾಗಿ ಸರ್ಧಿಸಿರುವ ಅಭ್ಯರ್ಥಿಗಳ ಅಂಕಿ-ಸಂಖ್ಯೆ ಇಲ್ಲಿದೆ..
ಕಾಂಗ್ರೆಸ್ನಿಂದ 223 ಅಭ್ಯರ್ಥಿಗಳು, ಬಿಜೆಪಿಯಿಂದ 224, ಎಎಪಿಯಿಂದ 212, ಜೆಡಿಎಸ್ನಿಂದ 211, ಬಿಎಸ್ಸಿಯಿಂದ 137, ಸಿಪಿಐಎಂಯಿಂದ 4, ಎನ್ಪಿಪಿಯಿಂದ 4, ನೋಂದಾಯಿತ ಮತ್ತು ಮಾನ್ಯತೆರಹಿತ 736 , ಸ್ವತಂತ್ರ ಅಥವಾ ಪಕ್ಷೇತರ 1379, ಒಟ್ಟು 3130 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ್ದರಿಂದ, ಅಖಾಡಕ್ಕಿಳಿದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರೇ, ಸಂಜೆ ವೇಳೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಎಷ್ಟು ಎಂದು ಪಕ್ಕಾ ಮಾಹಿತಿ ದೊರೆಯುತ್ತದೆ.