ಮೂರು ದಿನಗಳ ಯೋಗ ಪ್ರಶಿಕ್ಷಣ ಶಿಬಿರ ಯೋಗ-ಜೀವನ-ದರ್ಶನ-2023 ಸಮಾರೋಪ | ಮೂರು ವಿಭಾಗಗಳಲ್ಲಿ ನಡೆದ ಯೋಗ ಪ್ರಶಿಕ್ಷಣ ಶಿಬಿರ

ಪುತ್ತೂರು : ಶ್ರೀ ಪತಂಜಲಿ  ಯೋಗ ಶಿಕ್ಷಣ ಸಮಿತಿ ಕರ್ನಾಟಕ. ನೇತ್ರಾವತಿ ವಲಯ, ಪುತ್ತೂರು, ದ.ಕ.ಜಿಲ್ಲೆ. ಹಾಗೂ ಶ್ರೀ ಪತಂಜಲಿ  ಯೋಗ ಶಿಕ್ಷಣ ಪೌಂಡೇಶನ್ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಮೂರು ವಿಭಾಗಗಳಲ್ಲಿ ಉದ್ಘಾಟನೆಗೊಂಡಿದ್ದ ಯೋಗ-ಜೀವನ-ದರ್ಶನ-2023 ಯೋಗ ಪ್ರಶಿಕ್ಷಣ ಶಿಬಿರವು ಭಾನುವಾರ ಸಮಾರೋಪಗೊಂಡಿತು.

ಸಾಮಾನ್ಯ ಯೋಗ ಪ್ರಶಿಕ್ಷಣ ಶಿಬಿರವನ್ನು ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ ಉದ್ಘಾಟಿಸಿದರು. ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಪ್ರಧಾನ ಅರ್ಚಕ  ರವೀಂದ್ರ ಭಟ್  ಆಶೀರ್ವಚನ ನೀಡಿದರು. ಜಿಲ್ಲಾ ಸಹಸಂಚಾಲಕ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ವಿಭಾಗದ ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್ ಕೆ ಎಮ್. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಕ್ಕಳ ವಿಭಾಗದ ಉದ್ಘಾಟನೆಯನ್ನು  ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್, ನೆರವೇರಿಸಿದರು. ಶಿಕ್ಷಕರಾದ  ರಾಮಚಂದ್ರ, ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬೆಟ್ಟ ಈಶ್ವರ ಭಟ್ ಹಿರಿಯ ನ್ಯಾಯವಾದಿಗಳು ಮುಖ್ಯ ಅತಿಥಿಗಳಾಗಿದ್ದರು.



































 
 

ಹಿರಿಯರ  ವಿಭಾಗದ ಉದ್ಘಾಟನೆಯನ್ನು ಉದ್ಯಮಿ ಇಂದಾಜೆ ಎಸ್ ವಿನಾಯಕ ನಾಯಕ್ ನೆರವೇರಿಸಿದರು. ಶಿಕ್ಷಕ  ಶಾಂತ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ಕೇಶವ ಪೈ, ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಂಘಟನಾ ಪ್ರಮುಖ್ ಜಗನ್ನಾಥ ಉಪಸ್ಥಿತರಿದ್ದರು.

ಶುಕ್ರವಾರ ನಡೆದ ಮಾತೃ ಪೂಜನ, ಮಾತೃ ಭೋಜನ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಕಾವ್ಯಶ್ರೀ ಅತಿಥಿಗಳಾಗಿದ್ದರು. ಸೇವಾ ವಿಭಾಗದ ಪ್ರಾಂತ ಸಂಚಾಲಕ ರವೀಶ ಕುಮಾರ್, ಜಿಲ್ಲಾ ಸಂಸ್ಕಾರ ಪ್ರಮುಖ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

ಶನಿವಾರ ಪೊಲೀಸ್ ಉಪಾಧೀಕ್ಷಕ ಡಾ. ವೀರಯ್ಯ ಹಿರೇಮಠ ಆರೋಗ್ಯದೆಡೆಗೆ ಯೋಗ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 650 ಯೋಗಪಟುಗಳು ಕೋರ್ಟ್ ರಸ್ತೆ, ಪುತ್ತೂರು ಮುಖ್ಯ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ, ಶ್ರೀಧರ ಭಟ್ ಬಿಲ್ಡಿಂಗ್ ಮೂಲಕ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ತೆಂಕಿಲ ಪುತ್ತೂರು ಆಟದ ಮೈದಾನದ ತನಕ ಯೋಗ ನಡಿಗೆಯಲ್ಲಿ ಪಾಲ್ಗೊಂಡರು. 

ಭಾನುವಾರ ಪೂರ್ವಾಹ್ನ ಮೂರೂ ವಿಭಾಗಗಳ ಶಿಬಿರಗಳು ಸಮಾರೋಪಗೊಂಡಿತು. ತಾಲೂಕು ಸಂಚಾಲಕ  ಯೋಗೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಜಿಲ್ಲಾ ಪ್ರಶಿಕ್ಷಣ ಪ್ರಮುಖ ಲೋಕೇಶ, ವ್ಯವಸ್ಥಾಪನಾ ಸಂಚಾಲಕ ಕೃಷ್ಣಾನಂದ, ಜಿಲ್ಲಾ ಪ್ರಮುಖ ಶಿವ ಪ್ರಸಾದ್, ಮಂಗಳೂರು ವಿಭಾಗದ ಸಹಸಂಚಾಲಕ ಅಚ್ಯುತ ನಾಯಕ್, ವ್ಯವಸ್ಥಾಪಕಾ ನಿರ್ದೇಶಕ ಸತ್ಯ ಶಂಕರ ಕೆ, ಶಂಕರ್, ಮುಖ್ಯ ಶಿಕ್ಷಕ ಹರಿಪ್ರಸಾದ್, ನೇತ್ರಾವತಿ ವಲಯ ಸಂಯೋಜಕ ಅಶೋಕ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು 

ಶಿಬಿರದಲ್ಲಿ ಯೋಗಾಸನ, ಭಾರತೀಯ ಜೀವನ ಪದ್ದತಿ, ಆಯುರ್ವೇದ ಪದ್ಧತಿ ಆಹಾರ ಕ್ರಮ, ಚಿಕಿತ್ಸಾ ಯೋಗ ಕ್ರಮ ಕಲಿಸಲಾಯಿತು. ಮಕ್ಕಳಿಗೆ ದೇಶದ ಸೇನೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.  ರಾಜ್ಯದ ವಿವಿಧ ಜಿಲ್ಲೆಗಳಿಂದ 94 ಮಕ್ಕಳ ಸಹಿತ 277 ಪ್ರಶಿಕ್ಷಣಾರ್ಥಿಗಳು, 57 ಶಿಕ್ಷಕರು ಹಾಗೂ 200 ಪ್ರಬಂಧಕರು ಹಾಗೂ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಮುಖ್ಯ ಶಿಕ್ಷಕರಾಗಿ ಶಿವಾನಂದ ರೈ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಎ. ಆರ್. ರಾಮಸ್ವಾಮಿ, ಪ್ರಾಂತ ಸಂಯೋಜಕ ರಾಘವೇಂದ್ರ, ಪ್ರಮುಖರಾದ ಅಶೋಕ್ ಕುಮಾರ್ ಜೈನ್, ಕನಕ ಅಮಿನ್, ಪ್ರತಾಪ್ ಕೆ. ಎಸ್., ಹರೀಶ್ ಅಂಚನ್, ಗಣೇಶ್ ಸುವರ್ಣ, ಅಕ್ಷತ್ ಕುಮಾರ್, ಕಾರ್ಯಕ್ರಮ ಸಂಚಾಲಕರಾದ ಕೃಷ್ಣಾನಂದ ನಾಯಕ್, ಆಶಾಲತಾ ರಮೇಶ್, ವಸಂತ ಸುವರ್ಣ ಪುತ್ತೂರು ಮೊದಲಾದವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top