4989 ನಾಮಪತ್ರಗಳು ಕ್ರಮಬದ್ಧ : 500 ನಾಮಪತ್ರಗಳು ತಿರಸ್ಕೃತ

ಸದ್ಯ 3,044 ಅಭ್ಯರ್ಥಿಗಳು – ಏ.24 ನಾಮಪತ್ರ ಹಿಂಪಡೆಯಲು ಕೊನೇ ದಿನ

ಬೆಂಗಳೂರು : ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದ್ದು, ಶುಕ್ರವಾರ ಪರಿಶೀಲನೆಯ ಬಳಿಕ 4989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟು 3632 ಅಭ್ಯರ್ಥಿಗಳು 5 ಸಾವಿರಕ್ಕೂ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದು, ಈ ಪೈಕಿ 500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. 3,044 ಅಭ್ಯರ್ಥಿಗಳ 4,989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಆಯೋಗ ಹೇಳಿದೆ.
ಐದು ವಿಧಾನಸಭಾ ಕ್ಷೇತ್ರಗಳಾದ ಸವದತ್ತಿ,‌ ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಮಾತ್ರ ಬಾಕಿ ಇದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಉಮೇದುವಾರಿಕೆ ಹಿಂಪಡೆಯಲು ಏ.24 ಕೊನೆಯ ದಿನವಾಗಿದ್ದು, ಆ ಬಳಿಕ ಸ್ಪರ್ಧಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ತಿಳಿಯಲಿದೆ.

ನಾಮಪತ್ರಗಳ ವಿವರ





























 
 

ಒಟ್ಟು 224 ಕ್ಷೇತ್ರಗಳಲ್ಲಿ ಒಟ್ಟು 4989 ನಾಮಪತ್ರಗಳು ಕ್ರಮಬದ್ಧ
ಬಿಜೆಪಿ- 219
ಕಾಂಗ್ರೆಸ್-218
ಜೆಡಿಎಸ್-207
ಎಎಪಿಯ- 207
ಬಿಎಸ್ಪಿ – 135
ಸಿಪಿಎಂ -4
ಪಕ್ಷೇತರರು -1334
ನೋಂದಾಯಿತ, ಮಾನ್ಯತೆ ರಹಿತ ಪಕ್ಷಗಳು- 720
ಕಣದಲ್ಲಿ 3044 ಅಭ್ಯರ್ಥಿಗಳು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top