ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ಶ್ರೀ ದೈವಗಳ ನೇಮೋತ್ಸವ ಬುಧವಾರ ರಾತ್ರಿ ನಡೆಯಿತು.
ಬೆಳಿಗ್ಗೆ ವೀರಮಂಗಲದಿಂದ ಶ್ರೀ ದೇವರು ಅವಭೃತ ಸ್ಣಾನದ ಬಳಿಕ ಶ್ರೀ ದೇವಸ್ಥಾನಕ್ಕೆ ಆಗಮಿಸಿ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತ್ತು.
ರಾತ್ರಿ ಚೂರ್ಣೋತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಬಳಿಕ ಹುಲಿಭೂತ, ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.