ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಬುಧವಾರ ಬೆಳಿಗ್ಗೆ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ಸಂಜೆ ಶ್ರೀ ದೇವರು ದೂರದ ವೀರಮಂಗಲಕ್ಕೆ ಜಳಕಕ್ಕೆ ತೆರಳಿ ಬುಧವಾರ ಮುಂಜಾನೆ ಕುಮಾರಧಾರ ನದಿಯಲ್ಲಿ ಜಳಕಗೊಂಡು ಅಲ್ಲಿಂದ ಪುನಃ ಶ್ರೀ ದೇವಸ್ಥಾನಕ್ಕೆ ಆಗಮಿಸಿದರು.
ಸಂಪ್ರದಾಯದಂತೆ ದೇವಸ್ಥಾನದಲ್ಲಿ ಶ್ರೀ ದೇವರನ್ನು ಬರಮಾಡಿಕೊಂಡು ಬಳಿಕ ಶ್ರೀ ದೇವರು ಗರ್ಭಗುಡಿ ಪ್ರವೇಶಿಸಿದರು. ಶ್ರೀ ಮಹಾಲಿಂಗೇಶ್ವರನಿಗೆ ಆರತಿ ಬೆಳಗಲಾಯಿತು. ಬಳಿಕ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಧ್ವಜಾವರೋಹಣ ನಡೆಯುವ ಮೂಲಕ ಒಂಭತ್ತು ದಿನಗಳ ಜಾತ್ರೆ ಸಂಪನ್ನಗೊಂಡಿತು.