ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಸೋಮವಾರ ರಾತ್ರಿ ನಡೆಯಿತು.
ರಥೋತ್ಸವದ ಅಂಗವಾಗಿ ಸಂಜೆ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು.
ರಾತ್ರಿ 9 ಗಂಟೆ ಸುಮಾರಿ ಶ್ರೀ ದೇವರು ರಥಾರೂಢನಾದನು. ಬಳಿಕ ಬ್ರಹ್ಮರಥೋತ್ಸವ ಸೇವೆ ಮಾಡಿಸಿದವರು ಸಂಕಲ್ಪ ಮಾಡಿ ಪ್ರಸಾದ ಸ್ವೀಕರಿಸಿದರು.
ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಪುತ್ತೂರು ಬೆಡಿ ಎಂದೇ ಪ್ರಸಿದ್ಧಿ ಪಡೆದೆ ಸುಡುಮದ್ದು ಪ್ರದರ್ಶನದಲ್ಲಿ ಪಟಾಕಿ. ಮತಾಪುಗಳು ಬಾನೆತ್ತರಕ್ಕೆ ಚಿಮ್ಮಿ ಬಾನಂಗ:ಳದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿದವು. ಸಿಡಿ ಮದ್ದು ಪ್ರದರ್ಶನ ನಡೆದ ಬಳಿಕ ಶ್ರೀ ಮಹಾಲಿಂಗೇಶ್ವರನ ಬ್ರಹ್ಮರಥವನ್ನು ಸಾವಿರಾರು ಕೈಗಳು, ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ರಥಬೀದಿಯುದ್ದಕ್ಕೂ ಎಳೆದರು.
ರಥೋತ್ಸವದ ಬಳಿಕ ಶ್ರೀ ದೇವರು ಶ್ರೀ ದಂಡನಾಯಕ ಉಳ್ಳಾಲ್ತಿಯೊಂದಿಗೆ ಬಂಗಾರ ಕಾಯರ್ ಕಟ್ಟೆಗೆ ತೆರಳಿ ಅಲ್ಲಿ ಕಟ್ಟೆಪೂಜೆ ನಡೆದ ಬಳಿಕ ಶ್ರೀ ದಂಡನಾಯಕ, ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡಲಾಯಿತು.