ಸಂತ ಫಿಲೋಮಿನಾ ಕಾಲೇಜಿನ ಎನ್‌ ಎಸ್‌ ಎಸ್‌ ಶಿಬಿರ ಸಮಾರೋಪ

ಪುತ್ತೂರು: ಬಡಗನ್ನೂರು ಪಟ್ಟೆ ವಿದ್ಯಾಸಂಸ್ಥೆಯಲ್ಲಿ ಏಳು ದಿನಗಳ ಕಾಲ ನಡೆದ ಸಂತ ಫಿಲೋಮಿನಾ ಕಾಲೇಜಿನ ಎನ್‌ ಎಸ್‌ ಎಸ್‌ ಶಿಬಿರ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್‌ ಮಸ್ಕರೇನ್ಹಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಪ್ರೀತಿ, ಸಹಬಾಳ್ವೆ, ಶಿಸ್ತಿನ ಜೀವನ ನಡೆಸಲು ಎನ್‌ ಎಸ್‌ ಎಸ್‌ ಶಿಬಿರಗಳು ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನವಾಗುವುದು. ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವ ಹಾಗೂ ತಮ್ಮ ಶ್ರಮದ ಬೆಲೆ ಈ ಶಿಬಿರದಲ್ಲಿ ಭಾಗವಹಿಸಿದ್ದರಿಂದ ಅರಿವಿಗೆ ಬಂದಿದೆ” ಎಂದು ಹೇಳಿದರು.

ಸಮಾರೋಪ ಭಾಷಣ ಮಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹರಿಪ್ರಸಾದ್‌, ಕಾಲೇಜುಗಳಲ್ಲಿ ನಡೆಸುವ ಏಕದಿನ ಎನ್‌ ಎಸ್‌ ಎಸ್‌ ಶಿಬಿರಗಳಲ್ಲಿ ಭಾಗವಹಿಸಿದಲ್ಲಿ ವಿದ್ಯಾರ್ಥಿಗಳಿಗೆ ಸೇವೆಯ ಅನುಭವ ದೊರಕುತ್ತದೆ. ವಾರ್ಷಿಕ ಶಿಬಿರಗಳು ಶಿಬಿರಾರ್ಥಿಗಳ ಸರ್ವತೋಮುಖ ಬೆಳವಣೆಗೆಗೆ ಕಾರಣವಾಗುತ್ತವೆ. ಏಳು ದಿನಗಳ ಸಹಬಾಳ್ವೆ ಶಿಬಿರಾರ್ಥಿಗಳಿಗೆ ಮುಂದೆ ಯಾವುದೇ ಪರಿಸರದಲ್ಲೂ ಜೀವನ ನಡೆಸಲು ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ, ಆತ್ಮವಿಶ್ವಾಸ ಹೆಚ್ಚಿಸಿ ಸಭಾಕಂಪನವನ್ನು ಹೋಗಲಾಡಿಸುತ್ತವೆ ಎಂದರು.







































 
 

ಮುಖ್ಯ ಅತಿಥಿಯಾಗಿ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ  ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ನಡುವೆ ಕಲಿತ ಪಾಠಗಳು ಜ್ಷಾನವನ್ನು ವೃದ್ಧಿಸಿದರೆ ಇಂತಹ ಶಿಬಿರಗಳು ಜೀವನಾನುಭವವನ್ನು ಹೆಚ್ಚಿಸುತ್ತವೆ. ಇಲ್ಲಿ ಕಲಿತ ಜೀವನ ಪಾಠವು ಶಿಬಿರಾರ್ಥಿಗಳಿಗೆ ತಮ್ಮ ಜೀವನದುದ್ದಕ್ಕೂ ಅವಿಸ್ಮರಣೀಯವಾಗಿರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಟ್ಟೆ ಶ್ರೀಕೃಷ್ಣ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ  ರಾಜಗೋಪಾಲ್‌, ಇಂತಹ ಶಿಬಿರಗಳು ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತವೆ ಎಂದರು.

ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ನಹುಷಾ ಪಿ ಬಿ, ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಬಗ್ಗೆ ಅರಿವು ಮೂಡಿಸಲು ಪಟ್ಟೆ ವಿದ್ಯಾಸಂಸ್ಥೆಗಳನ್ನು ಆಯ್ಕೆ ಮಾಡಿದುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಾದ ವೈಷ್ಣವಿ ಹಾಗೂ ಜೈನುದ್ದೀನ್‌ ಅನುಭವಗಳನ್ನು ಹಂಚಿಕೊಂಡರು. ಏಳು ದಿನಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಸವಿವರ ವರದಿಯನ್ನು ಶಿಬಿರಾರ್ಥಿಗಳಾದ ಚಸ್ಮಿಕಾ ಹಾಗೂ ನಿಕ್ಷೀತ್‌ ವಾಚಿಸಿದರು. ಶಿಬಿರಾಧಿಕಾರಿಗಳಾದ ಪುಷ್ಪ ಎನ್‌ ಸ್ವಾಗತಿಸಿದರು. ವಾಸುದೇವ ಎನ್‌ ವಂದಿಸಿದರು. ಸಹಶಿಬಿರಾಧಿಕಾರಿಯಾದ ಚೈತ್ರ ಎನ್‌ ಪಿ ಶಿಬಿರಕ್ಕೆ ಸಹಾಯಹಸ್ತ ನೀಡಿದವರ ವಿವರಗಳನ್ನು ತಿಳಿಸಿದರು. ಸಹ ಶಿಬಿರಾಧಿಕಾರಿ ಧನ್ಯ ಪಿ ಟಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top