ಬಂಟ್ವಾಳ: ಕಂಬ್ಳ ಪೋಡಿಕಲ ಹನುಮಾನ್ ನಗರ ಶ್ರೀ ರಾಮ ಭಕ್ತ ಆಂಜನೇಯ ಟ್ರಸ್ಟ್ ಸದಸ್ಯರು ಒಟ್ಟು ಸೇರಿ ವಿಶ್ವಹಿಂದೂ ಪರಿಷದ್, ಭಜರಂಗದಳ ಹನುಮಾನ್ ಶಾಖೆ ನೇತೃತ್ವದಲ್ಲಿ ಕಾರಣಿಕ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವದ ಸಂದರ್ಭದಲ್ಲಿ ಭವತಿ ಬಿಕ್ಷಾಂದೇಹಿ ಸಹಾಯ ಯೋಜನೆಯ0ತೆ ಪುಟ್ಟ ಬಾಲಕನಿಗೆ ಧನ ಸಹಾಯ ಮಾಡಿದರು.
ಮಂಗಳೂರು ತಾಲೂಕಿನ ಕುಪ್ಪೆಪದವು ಸಮೀಪದ ಕೊಳವೂರು ಗ್ರಾಮದ ಜಯಶೀಲಾ ಸದಾಶಿವ ಆಚಾರ್ಯ ದಂಪತಿ 2ವರ್ಷ 3ತಿಂಗಳ ಶಮಿತ್ ಎಂಬ ಮಗುವಿಗೆ ಹುಟ್ಟುವಾಗಲೇ ಮಲ ವಿಸರ್ಜನೆ ಮಾಡುವ ಅಂಗವಿರಲಿಲ್ಲ ಹಾಗೂ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸೆಗೆ 3ರಿಂದ 4ಲಕ್ಷ ಅವಶ್ಯಕತೆ ಇರುವ ಕಾರಣಕ್ಕಾಗಿ ವಿಶ್ವಹಿಂದೂ ಪರಿಷದ್ ಭಜರಂಗದಳ ಹನುಮಾನ್ ಶಾಖೆ ಪೋಡಿಕಲ ಬಂಟ್ವಾಳ ಪ್ರಖಂಡ ಮುಂದಾಳತ್ವದಲ್ಲಿ ಪೊಳಲಿ ರಥೋತ್ಸವ ದ ಸಂದರ್ಭದಲ್ಲಿ ಭವತಿ ಬಿಕ್ಷಾಂದೇಹಿ ಯೋಜನೆಯ0ತೆ ಸಂಗ್ರಹವಾದ 64377ಮೊತ್ತವನ್ನು ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಪೊಳಲಿ ರಾಜರಾಜೇಶ್ವರಿ ದೇವಿಯ ಸಮ್ಮುಖದಲ್ಲಿ ಭರತ್ ಕುಮ್ದೇಲ್ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ವೆಂಕಟೇಶ್ ನಾವುಡ ಪೊಳಲಿ, ಯಶವಂತ್ ಪೊಳಲಿ ಸಂಘದ ಸದಸ್ಯರು, ಭಜರಂಗದಳದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು