16 ಹೊಸ ಮುಖಗಳಿಗೆ ಅವಕಾಶ
ಪುತ್ತೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳಲ್ಲಿ ಟಿಕೆಟ್ ಬಾಕಿ ಇರಿಸಿಕೊಳ್ಳಲಾಗಿದೆ. ಕೋಲಾರ ಕ್ಷೇತ್ರದಿಂದ ಭಾರೀ ನಿರೀಕಷೆ ಹುಟ್ಟಿಸಿದ್ದ ಸಿದ್ಧರಾಮಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿಲ್ಲ. ಕೋಲಾರದಿಂದ ಕೊತ್ತೂರು ಜಿ ಮಂಜುನಾಥ್‌ಗೆ ಟಿಕೆಟ್ ನೀಡಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆ ಇಟ್ಟಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ಅಲ್ಲಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್ ನೀಡಲಾಗಿದೆ. ಮದ್ದೂರಿನಲ್ಲಿ ರಮ್ಯಾಗೆ ಟಿಕೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದ್ದರೂ, ಅಲ್ಲಿಂದ ಕೆಎಂ ಉದಯ್ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿಎಚ್ ಶ್ರೀನಿವಾಸ್‌ಗೆ ಟಿಕೆಟ್ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲೆ ಮಾರ್ಗೆರೇಟ್ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಪುತ್ತೂರು ನಿಂದ ಅಶೋಕ್ ಕುಮಾರ್ ರೈಗೆ ಟಿಕೆಟ್ ನೀಡಲಾಗಿದೆ.
ಕ್ಷೇತ್ರ – ಅಭ್ಯರ್ಥಿ
1. ಅಥಣಿ – ಲಕ್ಷ್ಣಣ ಸವದಿ
2. ರಾಯಬಾಗ್ (ಎಸ್ ಸಿ) – ಮಹಾವೀರ್ ಮೋಹಿತ್
3. ಅರಭಾವಿ – ಅರವಿಂದ್ ದಲ್ವಾಯಿ
4. ಬೆಳಗಾಂ ಉತ್ತರ – ಅಸಿಫ್ ಸೈತ್
5. ಬೆಳಗಾಂ ದಕ್ಷಿಣ _ ಪ್ರಭಾವತಿ ಮಸ್ತ್‌ಮರ್ಡಿʼ
6. ಟೆರ್ಡಾಲ್ - ಸಿದ್ಧಪ್ಪ ರಾಮಪ್ಪ ಕೊನ್ನೂರು
7. ದೇವರ್‌ಹಿಪ್ಪರ್ಗಿ – ಶರಣಪ್ಪ ಟಿ. ಸುನಾಗರ್
8. ಸಿಂಧಗಿ – ಅಶೋಕ್ ಎಂ. ಮನಗುಳಿ
9. ಗುಲ್ಬರ್ಗಾ ಗ್ರಾಮೀಣ – ರೇವು ನಾಯಕ್ ಬೆಲಮಗಿ
10. ಔರದ್ (ಎಸ್‌ಸಿ) _ ಡಾ. ಶಿಂಧೆ ಭೀಮಸೇನ್ ರಾವ್
11. ಮಾನ್ವಿ (ಎಸ್‌ಟಿ) – ಜಿ. ಹಂಪಯ್ಯ ನಾಯಕ್
12. ದೇವದುರ್ಗಾ (ಎಸ್‌ಟಿ) – ಶ್ರೀದೇವಿ ಆರ್. ನಾಯಕ್
13. ಸಿಂದನೂರು – ಹಂಪನ್ ಗೌಡ ಬದರ್ಲಿ
14. ಶಿರ ಹಟ್ಟಿ (ಎಸ್‌ಟಿ) – ಸುಜಾತ ಎನ್. ದೊಡಮನಿ
15. ನವಲಗುಂಡ್ – ಎನ್. ಎಚ್. ಕೊನರೆಡ್ಡಿ
16. ಕುಂಡ್‌ಗೋಲ್ – ಕುಸುಮಾವತಿ ಸಿ. ಶಿವಳ್ಳಿ
17. ಕುಮ್ಟ – ನಿವೇದಿತ ಆಳ್ವ
18. ಸಿರುಗುಪ್ಪ (ಎಸ್‌ಟಿ) – ಬಿ. ಎಮ್. ನಾಗರಾಜ್
19. ಬೆಳ್ಳಾರಿ ಸಿಟಿ – ನಾರಾ ಭರತ್ ರೆಡ್ಡಿ
20. ಜಗಳೂರು (ಎಸ್‌ಟಿ) – ಬಿ. ದೇವೆಂದ್ರಪ್ಪ
21. ಹರಪನ ಹಳ್ಳಿ – ಎನ್. ಕೊಟ್ರೇಶ್
22. ಹೊನ್ನಳ್ಳಿ – ಡಿ. ಜಿ. ಶಾಂತನ ಗೌಡ
23. ಶಿವಮೊಗ್ಗ ಗ್ರಾಮೀಣ (ಎಸ್‌ಸಿ) – ಡಾ. ಶ್ರೀನಿವಾಸ್ ಕರಿಯಣ್ಣ
24. ಶಿವಮೊಗ್ಗ – ಎಚ್.ಸಿ. ಯೋಗೇಶ್
25. ಶಿಕಾರಿಪುರ – ಜಿ.ಬಿ. ಮಾಲತೇಶ್
26. ಕಾರ್ಕಳ – ಉದಯ್ ಶೆಟ್ಟಿ
27. ಮೂಡಿಗೆರೆ (ಎಸ್‌ಸಿ) – ನಯನ ಜ್ಯೋತಿ ಜಾ಼ವರ್
28. ತರಿಕೆರಿ – ಜಿ.ಎಚ್. ಶ್ರೀನಿವಾಸ
29. ತುಮಕೂರು ಗ್ರಾಮೀಣ – ಜಿ.ಎಚ್. ಷಣ್ಮುಖಪ್ಪ ಯಾದವ್
30. ಚಿಕ್ಕಬಳ್ಳಾಪು – ಪ್ರದೀಪ್ ಈಶ್ವರ್ ಅಯ್ಯರ್ ಪಿ. ಇ
31. ಕೋಲಾರ್ – ಕೊತ್ತೂರು ಜಿ. ಮಂಜುನಾಥ್
32. ದಾಸರಹಳ್ಳಿ – ಧನಜಯ ಗಂಗಾಧರಯ್ಯ
33. ಚಿಕ್ಕಪೇಟೆ – ಆರ್. ವಿ. ದೇವರಾಜ್
34. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
35. ಬೆಂಗಳೂರು ದಕ್ಷಿಣ – ಆರ್. ಕೆ. ರಮೇಶ್
36. ಚೆನ್ನಪಟ್ಟಣ – ಗಂಗಾಧರ್ ಎಸ್.
37. ಮದ್ದೂರ್ – ಕೆ. ಎಂ. ಉದಯ್
38. ಅರಸಿಕೆರೆ – ಕೆ. ಎಂ. ಶಿವಲಿಂಗೇಗೌಡ
39. ಹಾಸನ – ಬನವಾಸಿ ರಂಗಸ್ವಾಮಿ
40. ಮಂಗಳೂರು ನಗರ ದಕ್ಷಿಣ – ಜ್ವಾನ್ ರಿಚರ್ಡ್ ಲೋಬೋ
41. ಪುತ್ತೂರು – ಅಶೋಕ್ ಕುಮಾರ್ ರೈ
42. ಕೃಷ್ಣರಾಜ – ಎಂ.ಕೆ. ಸೋಮಶೇಖರ
43. ಚಾಮರಾಜ _ ಕೆ. ಹರೀಶ್ ಗೌಡ