ಸುಳ್ಯ: ಕಾಡಾನೆಗಳ ಹಿಂಡೊಂದು ನಾಡಿಗೆ ಬಂದು ತೋಟವೊಂದರ ಕೆರೆಗೆ ಬಿದ್ದು ಮೇಲೆ ಬರಲಾಗದೆ ಸಿಕ್ಕಿ ಬಿದ್ದಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಗುರುವಾರ ನಡೆದಿದೆ.
ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಮಧ್ಯೆ ಕೆರೆಗೆ ಎರಡು ದೊಡ್ಡ ಆನೆ, ಎರಡು ಮರಿ ಆನೆ ಸಹಿತ ನಾಲ್ಕು ಆನೆಗಳು ಕೆರೆಗಿಳಿದಿದ್ದು, ಮೇಲೆ ಬರಲಾಗದೇ ಕೆರೆಯಲ್ಲೇ ಸಿ್ಕ್ಕಿ ಹಾಕಿಕೊಂಡಿದೆ. ಕೆರೆಯಲ್ಲಿ ತುಂಬಾ ನೀರಿದ್ದ ಪರಿಣಾಮ ಮೇಲೆ ಬರಲಾಗಲಿಲ್ಲ. ಕೆರೆಯಲ್ಲೇ ಆಚೀಚೆ ಓಡಾಡುತ್ತಿದ್ದು, ಆನೆಗಳಿಗೆ ಮೇಲೆ ಬರಲು ಇನ್ನೂ ಸಾಧ್ಯವಾಗಿಲ್ಲ.
ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಅವರಿಗೆ ಸುದ್ದಿ ತಿಳಿದಿದ್ದು, ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಆನೆಗಳ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.