ಹೊಸದಿಲ್ಲಿ : ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಒಂದೇ ದಿನದ ಅಂತರದಲ್ಲಿ ಬಿಡುಗಡೆಗೊಳಿಸರುವ ಬಿಜೆಪಿ ಕೆಲವೊಂದು ಅಚ್ಚರಿಗಳನ್ನು ನೀಡಿದೆ. ಅದರಲ್ಲಿ ಗಮನಾರ್ಹವಾದದ್ದು ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸುಕುಮಾರ ಶೆಟ್ಟಿಯುವರನ್ನು ಕೈಬಿಟ್ಟು ಗುರುರಾಜ್ ಗಂಟಿಹೊಳಿ ಅವರಿಗೆ ಟಿಕೆಟ್ ನೀಡಿದ್ದು.
ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ 24 ಗಂಟೆಗಳಲ್ಲೇ 2ನೇ ಪಟ್ಟಿ ದಿಢೀರ್ ಬಿಡುಗಡೆಯಾಗಿದೆ. 2ನೇ ಪಟ್ಟಿ ಗುರುವಾರ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಬುಧವಾರ ರಾತ್ರಿ 11 ಗಂಟೆಗೆ 2ನೇ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದರೆ, 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.
ಹಗರಣವೊಂದರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ತಪ್ಪಿದ್ದು, ಆ ಕ್ಷೇತ್ರದಿಂದ ಶಿವಕುಮಾರ್‌ಗೆ ಟಿಕೆಟ್ ನೀಡಲಾಗಿದೆ. ಮೂಡಿಗೆರೆ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿಗೂ ಟಿಕೆಟ್ ಕೈತಪ್ಪಿದ್ದು, ದೀಪಕ್ ದೊಡ್ಡಯ್ಯ ಅವರಿಗೆ ನೀಡಲಾಗಿದೆ.
2ನೇ ಪಟ್ಟಿಯಲ್ಲಿ ಟಿಕೆಟ್ ಕಳೆದುಕೊಂಡ 5 ಹಾಲಿ ಶಾಸಕರು
ಬೈಂದೂರು-ಸುಕುಮಾರ್ ಶೆಟ್ಟಿ
ಚೆನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ
ಕಲಘಟಗಿ-ನಿಂಬಣ್ಣನವರ್ ಲಿಂಗಣ್ಣ
ಮೂಡಿಗೆರೆ-ಎಂ.ಪಿ ಕುಮಾರಸ್ವಾಮಿ
ಹಾವೇರಿ-ನೆಹರು ಓಲೆಕಾರ್
ಮಾಯಕೊಂಡ-ಎನ್. ಲಿಂಗಣ್ಣ
ಗುರ್ಮಿಠಕಲ್-ನಾಗನಗೌಡ ಕಂದಕೂರ್
2ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು
ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನಬಾಗೇವಾಡಿ-ಎಸ್ .ಕೆ.ಬೆಳ್ಳುಬ್ಬಿ
ಇಂಡಿ-ಕಾಸಗೌಡ ಬಿರಾದಾರ್
ಗುರುಮಿಠಕಲ್-ಲಲಿತ ಅನಪೂರ್
ಬೀದರ್-ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ-ಪ್ರಕಾಶ್ ಖಂಡ್ರೆ
ಗಂಗಾವತಿ-ಪರಣ್ಣ ಮುನವಳ್ಳಿ
ಕಲಘಟಗಿ-ನಾಗರಾಜ್ ಛಬ್ಬಿ
ಹಾನಗಲ್-ಶಿವರಾಜ್ ಸಜ್ಜನರ್
ಹಾವೇರಿ-ಗವಿಸಿದ್ದಪ್ಪ ದ್ಯಾಮಣ್ಣನವರ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್
ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
ಮಾಯಕೊಂಡ-ಬಸವರಾಜ್ ನಾಯ್ಕ್
ಚನ್ನಗಿರಿ-ಶಿವಕುಮಾರ್
ಬೈಂದೂರು-ಗುರುರಾಜ್ ಗಂಟಿಹೊಳೆ
ಮೂಡಿಗೆರೆ-ದೀಪಕ್ ದೊಡ್ಡಯ್ಯ
ಗುಬ್ಬಿ-ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಘಟ್ಟ-ರಾಮಚಂದ್ರ ಗೌಡ
ಕೆಜಿಎಫ್-ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ-ಚಿದಾನಂದ
ಅರಸೀಕೆರೆ-ಜಿ.ಬಿ.ಬಸವರಾಜು
ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್