ಪುತ್ತೂರು: ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಗೊಂಡಿದೆ. ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು.
189 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ 33 ಮಂದಿ ಓಬಿಸಿ ವರ್ಗದವರು, 30 St ಅಭ್ಯರ್ಥಿಗಳು, 16 scಗಳು, 52 ಹೊಸ ಮುಖಗಳು, 9 ವೈದ್ಯರು, ಓರ್ವ ಐಎಸ್, ಐಪಿಎಸ್, 31 ಮಂದಿ ಸ್ನಾತಕೋತ್ತರ ಪದವೀಧರರು, 8 ಮಹಿಳೆಯರು ತಂಡದಲ್ಲಿದ್ದಾರೆ.
ಪುತ್ತೂರಿನಿಂದ ಗೌಡ ಸಮುದಾಯದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗೀರಥಿ ಮುರುಳ್ಯ ಅವರನ್ನು ಕಣಕ್ಕಿಳಿಸಲಾಗಿದೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಸುನಿಲ್ ಕುಮಾರ್ ಅವರು ಕಾರ್ಕಳ ಸ್ವ- ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ. ಬೆಳ್ತಂಗಡಿಯಿಂದ ಹರೀಶ್ ಪೂಂಜಾ, ಮೂಡುಬಿದರೆಯಿಂದ ಉಮಾನಾಥ್ ಕೋಟ್ಯಾನ್, ಬಂಟ್ವಾಳದಿಂದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಭರತ್ ಶೆಟ್ಟಿ, ವೇದನಾಥ್ ಕಾಮತ್, ಸತೀಶ್ ಕುಂಪಲ ಕೂಡ ಕಣದಲ್ಲಿದ್ದಾರೆ.
ಉಳಿದಂತೆ ಬಸವರಾಜ್ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ರಮೇಶ್ ಕತ್ತಿ, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಬಸವನಗೌಡ ಪಾಟೀಲ್ ಯತ್ನಾಳ್, ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀರಾಮುಲು, ವಿಜಯೇಂದ್ರ, ಸೋಮಶೇಖರ ರೆಡ್ಡಿ, ಯಶ್ ಪಾಲ್ ಸುವರ್ಣ, ಆರಗ ಜ್ಞಾನೇಂದ್ರ, ಸಿ.ಟಿ.ರವಿ,
ಡಾ. ಕೆ. ಸುಧಾಕರ್, ವರ್ತೂರು ಪ್ರಕಾಶ್, ಎಸ್.ಆರ್. ವಿಶ್ವನಾಥ್, ಮುನಿರತ್ನ ನಾಯ್ಡು, ನಾರಾಯಣ ಸ್ವಾಮಿ, ಡಾ. ಅಶ್ವತ್ಥ ನಾರಾಯಣ್, ಎಸ್.ಟಿ. ಸೋಮಶೇಖರ್, ನಾರಾಯಣ ಸ್ವಾಮಿ, ಭಾಸ್ಕರ್ ರಾವ್, ಆರ್. ಅಶೋಕ್, ಭೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್, ಸುರೇಶ್ ಕುಮಾರ್ ಕಣದಲ್ಲಿದ್ದಾರೆ.