ಬೆಂಗಳೂರು : ಐಎಎಸ್ ರೋಹಿಣಿ ಸಿಂಧೂರಿ ವಿರುದ್ದ ಐಪಿಎಸ್ ಅಧಿಕಾರಿ ಡಿ.ರೂಪ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಹೊರಡಿಸಿದ್ದ ನಿರ್ಭಂಧಕ ಆದೇಶವನ್ನ ಹೈಕೋರ್ಟ್ ತೆರವುಗೊಳಿಸಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನ ಹೈಕೋರ್ಟ್ ಏಕಸದಸ್ಯ ಪೀಠ ತೆರವುಗೊಳಿಸಿ ಆದೇಶ ನೀಡಿದೆ.
ಐಪಿಎಸ್ ಅಧಿಕಾರಿ ಡಿ.ರೂಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠವು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ನಿರ್ಬಂಧಕಾಜ್ಞೆ ಆದೇಶವನ್ನು ತೆರವುಗೊಳಿಸಿ ಇಂದು ಆದೇಶಿಸಿದೆ. ಈಗ ರೂಪಾ ಮೌದ್ಗಿಲ್ ಅವರಿಗೆ ರೋಹಿಣಿ ಸಿಂಧೂರಿ ಕುರಿತಂತೆ ಆರೋಪಗಳನ್ನು ಮಾಡಲು ಸ್ವಾತಂತ್ರ್ಯ ಸಿಕ್ಕಂತಾಗಿದೆ. ಇನ್ನು ನಿರ್ಬಂಧಕಾಜ್ಞೆ ತೆರವಿನಿಂದಾಗಿ ತಮ್ಮ ವಿರುದ್ಧ ಮತ್ತೆ ಯಾವ ಆರೋಪಗಳು ಬರುತ್ತವೆ ಎಂಬ ಆತಂಕ ರೋಹಿಣಿ ಸಿಂಧೂರಿಗೆ ಶರುವಾಗಿದೆ.
ರೋಹಿಣಿ ಸಿಂಧೂರಿ ಕೇಸ್: ಡಿ. ರೂಪಾಗೆ ಮ್ಯಾಜಿಸ್ಪ್ರೇಟ್ ಕೋರ್ಟ್ ಸಮನ್ಸ್
ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ಮಾನ ಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ರೋಹಿಣಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರತಿವಾದಿಗಳ ವಾದವನ್ನೂ ಆಲಿಸದೆ ನಿರ್ಬಂಧಕಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಡಿ. ರೂಪ ಹೈಕೋರ್ಟ್ ಮೊರೆ ಹೋಗುದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬರೆದಿದ್ದ ಡಿ.ರೂಪ ಹಲವು ಆರೋಪಗಳನ್ನ ಮಾಡಿದ್ದರು.
ರಾಜ್ಯದಲ್ಲಿ ಅಧಿಕಾರ ದುರುಪಯೋಗ ಸೇರಿ ಹತ್ತು ಹಲವು ಆರೋಪ ಮಾಡಿದ್ದರು. ಈ ಸಂಬಂಧ ಸರ್ಕಾರ ಅಧಿಕಾರಿಗಳ ಬಾಯಿಮುಚ್ಚಿಸುವ ಯತ್ನ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಅಂತಿಮವಾಗಿ ರೋಹಿಸಿ ಸಿಂಧೂರಿ ಕೋರ್ಟ್ ಮೂಲಕ ಡಿ.ರೂಪ ಬಾಯಿ ಮುಚ್ಚಿಸುವಲ್ಲಿ ಯಶಸ್ವಿ ಆಗಿದ್ದರು. ನಂತರ ಡಿ.ರೂಪ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನೂ ರೋಹಿಣಿ ಸಿಂಧೂರಿ ದಾಖಲಿಸಿದ್ದಾರೆ. ಈ ನಡುವೆ ರೂಪ ವಿರುದ್ಧದ ನಿರ್ಭಂಧಕಾಜ್ಞೆ ತೆರವಾಗಿದ್ದು ಮತ್ತೊಂದು ಸುತ್ತಿನ ಜಟಾಪಟಿ ಆರಂಭವಾಗುವ ಲಕ್ಷಣ ಗೋಚರಿಸುತ್ತಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಶಾಸಕ ಸಾ.ರಾ. ಮಹೇಶ್ ಜತೆ ರಾಜಿ ಸಂಧಾಣ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕುರಿತು ಐಪಿಎಸ್ ಅಧಿಕಾರಿ ಹಾಗೂ ಐಜಿಪಿಯಾಗಿರುವ ಡಿ. ರೂಪಾ ಪ್ರಶ್ನೆ ಮಾಡಿದ್ದರು. ಬರೀ ಪ್ರಶ್ನೆ ಮಾತ್ರವಲ್ಲ, ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳನ್ನು ಮಾಡಿದ್ದರು. ಅಲ್ಲದೆ, ತನ್ನ ಬಳಿ ರೋಹಿಣಿ ಮಾಡಿದ್ದ ಕಾರ್ಯಕ್ಕೆ ಸಾಕ್ಷಿಗಳು ಇವೆ. ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ – ಹೀಗೆ ಮುಂತಾದ ಅನೇಕ ಆರೋಪಗಳನ್ನು ಡಿ. ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಡಿದ್ದರು.
ರೋಹಿಣಿ ವರ್ಸಸ್ ರೂಪಾಗೆ ಕೋರ್ಟ್ ಬ್ರೇಕ್: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು
ಐಎಎಸ್ ಅಧಿಕಾರಿ ರೋಹಿಣಿ ಸೀಂಧೂರಿ ಅವರ ವಿರುದ್ಧ ಪದೇ ಪದೆ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುತ್ತಿದ್ದ ಡಿ.ರೂಪಾ ಹಾಗೂ ಅಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಮಾಧ್ಯಮಗಳಿಗೆ ನ್ಯಾಯಾಲಯ ಮಫೆಬ್ರವರಿಯಲ್ಲಿ ನಿರ್ಬಂಧಕಾಜ್ಞೆ ಜ್ಞೆಯನ್ನು ಹೊರಡಿಸಿತ್ತು. ಈ ಮೂಲಕ ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದೇ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುತ್ತಿದ್ದ ಡಿ. ರೂಪಾ ಅವರ ಬಾಯಿಯನ್ನು ಮುಚ್ಚಿಸುವಲ್ಲಿ ನ್ಯಾಯಾಲಯ ಯಶಸ್ವಿಯಾಗಿದ್ದರು. ಈ ಮೂಲಕ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯದಲ್ಲಿ ಮಾನಹಾನಿಕರ ಹೇಳಿಕೆ ಅಥವಾ ಬರಹಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈಗ ಡಿ. ರೂಪಾ ಅವರ ವಿರುದ್ಧದ ನಿರ್ಬಂಧ ತೆರವಾಗಿದೆ.