ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಹಾಗೂ ವರ್ಷಾವಧಿ ನೇಮ ನಡಾವಳಿ ಕುರಿತು ಪೂರ್ವಭಾವಿ ಸಭೆ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.
ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಅಧ್ಯಕ್ಷತೆ ವಹಿಸಿ, ಏ.16 ರಂದು ಸಲು
ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಆಗಮಿಸಲಿದ್ದು,ಈ ನಿಟ್ಟಿನಲ್ಲಿ ಈ ಬಾರಿ ಬೆಳಗ್ಗೆಯಿಂದಲೇ ಹೂ ಅರ್ಪಿಸಿ ಪ್ರಸಾದ ಪಡೆದುಕೊಳ್ಳಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ. ಭಂಡಾರ ಸಂಜೆ ಆಗಮಿಸಿದ ಬಳಿಕ ದೈವಸ್ಥಾನದ ವತಿಯಿಂದಲೇ ಉಳ್ಳಾಲ್ತಿ ದೈವದ ಪ್ರಸಾದ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಮಾನಿಸಲಾಯಿತು.
ಶ್ರೀ ದೈವಸ್ಥಾನದಲ್ಲಿ ನಡೆಯುವ ವರ್ಷಾವಧಿ ನೇಮೋತ್ಸವದಲ್ಲಿ ತಂತ್ರಿಗಳ ಮಾರ್ಗದರ್ಶನದಂತೆ ಬದಲಾವಣೆಗಳನ್ನು ಮಾಡಲಾಗಿದ್ದು, ಏ.27 ರಂದು ಸಂಜೆ 7 ಗಂಟೆಗೆ ದೈವಗಳ ಭಂಡಾರ ತೆಗೆದು 9 ಗಂಟೆಗೆ ಶ್ರೀ ದೈವಗಳಿಗೆ ತಂಬಿಲ ಸೇವೆ, 9.30 ಕ್ಕೆ ಪಲ್ಲ ಪೂಜೆ ನಡೆದು ಕೊನೆಯಲ್ಲಿ ಅನ್ನಸಂತರ್ಪಣೆ ಜರಗಲಿದೆ. ಇದಕ್ಕೆ ಪೂರಕವಾಗಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಕಿರುವಾಳು ಆಗಮನದ ಸಂದರ್ಭ ಸೇವೆ ಸಲ್ಲಿಸುವ ಪರಿಚಾರಕರು, ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಲಾಯಿತು. ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕಿರಣ್ ಕುಮಾರ್ ರೈ, ಭೋಜರಾಜ ಗೌಡ, ಶ್ಯಾಮಣ್ಣ ನಾಯಕ್, ನಾರಾಯಣ ಪೂಜಾರಿ, ಕಿಶೋರ್ ಕುಮಾರ್, ಹರೀಶ ಪದವು, ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಆನಂದ ಸುವರ್ಣ, ಬಲ್ನಾಡು ಗ್ರಾಪಂ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ನಾರಾಯಣ ಪಾಟಾಳಇ, ಅಚ್ಯುತ, ವೆಂಕಟಕೃಷ್ಣ, ಭಕ್ತಾಧಿಕಾರಿಗಳು, ಕ್ಷೇತ್ರ ಪರಿಚಾರಕರು ಉಪಸ್ಥಿತರಿದ್ದರು.