ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಬಳಕೆದಾರರು ತಮ್ಮ ಮನೆಗಳಿಗೆ ಪಡೆದುಕೊಂಡಿರುವ ನಳ್ಳಿ ನೀರಿನ ಜೋಡಣೆ ಮೂಲಕ ಕೃಷಿ, ಗಿಡ, ಕಟ್ಟಡ ಕಾಮಗಾರಿಗೆ ನೀರು ಬಳಸುತ್ತಿರುವ ಕುರಿತು ನಗರಸಭೆಗೆ ಈಗಾಗಲೇ ದೂರುಗಳು ಬಂದಿ್‍ದ್ದು, ಸಮಸ್ಯೆ ಉಂಟಾಗಿದೆ.
ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಬೇಕಾಗಿದ್ದು, ಈ ರೀತಿ ನೀರಿನ ದುಪಯೋಗ ಮಾಡದಂತೆ ಎಚ್ಚರಿಕೆ ನೀಡಿದೆ.
ಈ ರೀತಿ ಕಂಡು ಬಂದಲ್ಲಿ ನಗರಸಭೆ ವತಿಯಿಂದ ಯಾವುದೇ ಮುನ್ಸೂಚನೆ ನೀಡದೆ ನಳ್ಳಿ ನೀರಿನ ಜೋಡಣೆ ತುಂಡರಿಸಲಾಗುವುದು. ಈ ನಷ್ಟಗಳಿಗೆ ಬಳಕೆದಾರರೇ ಹೊಣೆಗಾರರಾಗುತ್ತಾರೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.