ಪುತ್ತೂರು: ಪುತ್ತೂರಿನ ಮಾಯಿದೆ ದೇವುಸ್ ಚರ್ಚಿನಲ್ಲಿ ಯೇಸಕ್ರಿಸ್ತನ ಪುನರ್ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಶನಿವಾರ ರಾತ್ರಿ ಆಚರಿಸಲಾಯಿತು.
ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವoತಹ ಮೊಳೆಗಳನ್ನು ಚುಚ್ಚಲಾಗುತ್ತದೆ. ತದನಂತರ ಆಶೀರ್ವದಿಸಿದ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ. ಈ ಮೇಣದ ಬತ್ತಿಯನ್ನು ಹಿಡಿದ ಯಾಜಕರು ಜನರ ನಡುವಿನಿಂದ ಹೋಗುವಾಗ ಇದು ಯೇಸಕ್ರಿಸ್ತರ ಜ್ಯೋತಿಯು ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲ್ಲಿ ಎಂದು ಜೈಕಾರವನ್ನು ಕೂಗುತ್ತಾ ಆ ಜ್ಯೋತಿಯಿಂದ ತಮ್ಮಲ್ಲಿ ಇರುವ ಮೇಣದ ಬತ್ತಿಯನ್ನು ಹೊತ್ತಿಸಿದರು.
ವಂ.ಸ್ಟ್ಯಾನಿ ಪಿಂಟೋ ರವರು ಸಂದೇಶ ನೀಡಿ, ಈ ದಿವಸ ಜಾಗರಣೆಯ ರಾತ್ರಿ. ನಮಗೆಲ್ಲರಿಗೂ ರಕ್ಷಣೆಯನ್ನು ಅವರು ನೀಡಿದ್ದಾರೆ. ದೇವರ ಕುವರ ಮೂರು ದಿವಸ, ಮೂರು ರಾತ್ರಿ ಭೂಮಿಯ ಗರ್ಭದಲ್ಲಿ ಇರುತ್ತಾರೆ. ಈ ಪ್ರಪಂಚದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಆತನ ಮರಣದ ನಂತರ ಎದ್ದು ಬಂದಿಲ್ಲ. ಯೇಸು ಕ್ರಿಸ್ತನನ್ನು ದಫನ ಮಾಡಿದ ಹೊಂಡ ಈಗಲೂ ಕಾಲಿ ಇರೋದು ಸಿಗುತ್ತದೆ ಎಂದು ಹೇಳಿದರು.
ಬಲಿ ಪೂಜೆಯಲ್ಲಿ ವಂ.ಲಾರೆನ್ಸ್ ಮಸ್ಕರೇನಸ್, ವಂ.ಕೆವಿನ್ ಲಾರೆನ್ಸ್ ಡಿಸೋಜಾ, ವಂ ಅಶೋಕ್ ರಾಯನ್ ಕ್ರಾಸ್ತಾ ಉಪಸ್ಥಿತರಿದ್ದರು.