ಎರಡು ದಿನ ನಿರಂತರ ದಾಳಿ
ಲಾಗೋಸ್: ನೈಜೀರಿಯಾದ ಬೆನ್ಯೂ ರಾಜ್ಯದಲ್ಲಿ ಸಮುದಾಯವೊಂದರ ಮೇಲೆ ಶಸ್ತ್ರಸಜ್ಜಿತ ಡಕಾಯಿತರು ನಡೆಸಿದ ದಾಳಿಯಲ್ಲಿ ಕನಿಷ್ಠ 46 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ರಾಜ್ಯದ ಉಮೊಗಿಡಿ ಸಮುದಾಯದಲ್ಲಿ ಮಂಗಳವಾರ ಮತ್ತು ಬುಧವಾರದ ನಡುವೆ ಸಂಭವಿಸಿದ ದಾಳಿಯಲ್ಲಿ ನೂರಾರು ನಿವಾಸಿಗಳು ಗಾಯಗೊಂಡಿದ್ದು, ಹಲವರು ತಮ್ಮ ಮನೆಗಳಿಂದ ಓಡಿಹೋದರು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿ ಖಚಿತಪಡಿಸಿದ್ದಾರೆ. ದಾಳಿಕೋರರು ಬುಧವಾರ ಮನಬಂದಂತೆ ಗುಂಡು ಹಾರಿಸಿ 46 ಜನರನ್ನು ಕೊಂದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ನೈಜೀರಿಯಾದ ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಸಶಸ್ತ್ರ ದಾಳಿಗಳು ಸಾಮಾನ್ಯವಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ನೂರಾರು ಸಾವುಗಳು ಮತ್ತು ಅಪಹರಣಗಳು ಸಂಭವಿಸಿವೆ.