ಪುತ್ತೂರು : ಕೊಡಿಪಾಡಿ ಶ್ರೀ ಜನಾರ್ಧನ ದೇವರ ಸನ್ನಿಧಿಯಲ್ಲಿ ವರ್ಷಾವಧಿ ಉತ್ಸವ ಮಂಗಳವಾರದಿಂದ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದವರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಯಕ್ಷಗಾನ ತಾಳಮದ್ದಳೆ ಶ್ರೀರಾಮ ದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಕು|ಸಿಂಚನಾ, ಮೂಡುಕೋಡಿ, ಮದ್ದಳೆಯಲ್ಲಿ ಮಾ|ಅದ್ವೈತ್ ಕೃಷ್ಣ, ಪುತ್ತೂರು, ಚೆಂಡೆಯಲ್ಲಿ ಮಾ| ಅದ್ವೈತ್, ಕನ್ಯಾನ ಸಹಕರಿಸಿದರು.
ಮುಮ್ಮೇಳದಲ್ಲಿ,ಪದ್ಮಾ ಕೆ ಆರ್ ಆಚಾರ್ಯ ಹನುಮಂತನಾಗಿ, ಜಯಲಕ್ಷ್ಮಿ ವಿ ಭಟ್, ವೀರಮಣಿಯಾಗಿ, ಪ್ರೇಮಾ ಕಿಶೋರ್ ಈಶ್ವರನಾಗಿ, ಶುಭಾ ಪಿ ಆಚಾರ್ಯ ಶತ್ರುಘ್ನನಾಗಿ, ಹೀರಾ ಉದಯ್ ಶ್ರೀರಾಮನಾಗಿ ಭಾಗವಹಿಸಿದರು. ದೇವಳದ ವತಿಯಿಂದ ಕಲಾವಿದರನ್ನು ಪ್ರಸಾದವಿತ್ತು ಗೌರವಿಸಲಾಯಿತು.