ನ್ಯೂಯಾರ್ಕ್: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನವಾಗಿದೆ. ಟ್ರಂಪ್ ವಿರುದ್ಧ ಕೇಳಿಬಂದ ಆರೋಪ ತನಿಖೆ ನಡೆಸಲು ಸೂಕ್ತವಾಗಿದೆ ಎಂದು ಇತ್ತೀಚೆಗೆ ಗ್ರ್ಯಾಂಡ್ ಜ್ಯೂರಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಭಾರಿ ಬಿಗಿಭದ್ರತೆಯೊಂದಿಗೆ ಟ್ರಂಪ್ ಮಂಗಳವಾರ ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಅವರನ್ನು ಬಂಧಿಸಿದ ಪೊಲೀಸರು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು,. ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದೂ ಸೇರಿದಂತೆ ಹಣ ವಂಚನೆಯ 30ಕ್ಕೂ ಹೆಚ್ಚು ದೋಷಾರೋಪಗಳನ್ನು ಹೊರಿಸಿತು. ಈ ವೇಳೆ ಟ್ರಂಪ್ ನಾನು ತಪ್ಪು ಮಾಡಿಲ್ಲ. 32 ಆರೋಪಗಳಲ್ಲಿ ನಾನು ನಿರಪರಾಧಿ ಎಂದಿದ್ದಾರೆ.
ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ 2016ರ ಅಧ್ಯಕ್ಷೀಯ ಚುನಾವಣೆಯ ಮೊದಲು ಟ್ರಂಪ್1,30,000 ಡಾಲರ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿರಪರಾಧಿ ಎಂದಿರುವ ಟ್ರಂಪ್, ಈ ಪ್ರಕರಣ ರಾಜಕೀಯ ದ್ವೇಷದಿಂದ ಮಾಡಲಾಗಿದ್ದು ಎಂದು ಹೇಳಿದ್ದಾರೆ.
76 ವರ್ಷದ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಕಾರ್ಪೊರೇಟ್ ವಂಚನೆ ಆರೋಪ ಮಾಡಲಾಗಿದೆ, ಅದರಲ್ಲಿ ಅತ್ಯಂತ ಗಂಭೀರವಾದದ್ದು ನೀಲಿ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ಗೆ ಗೌಪ್ಯವಾಗಿ ಹಣ ಪಾವತಿಸಿರುವುದು.
ದಶಕಗಳ ಹಿಂದೆ ಗಾಲ್ಫ್ ಪಂದ್ಯಾವಳಿ ಆಡಲು ತೆರಳಿದ್ದ ವೇಳೆ ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಜೊತೆ ಟ್ರಂಪ್ ಲೈಂಗಿಕ ಸಂಪರ್ಕ ಬೆಳೆಸಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯದ ಕುರಿತು ಬೆಳಕು ಚೆಲ್ಲಿದ್ದರು. ಈ ನಡುವೆ 2016ರಲ್ಲಿ ಟ್ರಂಪ್ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ ಸುಮಾರು 1 ಕೋಟಿ ರೂ. ಹಣ ನೀಡಿದ್ದರು. ಈ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು.