ಐಪಿಎಲ್ 2023 : ಅರ್ಧಶತಕ, ದಾಖಲೆ ನಿರ್ಮಿಸಿದ ಆರ್ ಸಿಬಿ ‘ರನ್ ಮಷಿನ್’ ವಿರಾಟ್ ಕೊಹ್ಲಿ

ಬೆಂಗಳೂರು : ಐಪಿಎಲ್ ಸೀಸನ್ 16ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದ್ದು, ಆರ್ ಸಿಬಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ 8 ವಿಕೆಗಳ ಭರ್ಜರಿ ಜಯ ದಾಖಲಿಸಿತು. ಇದೇ ಪಂದ್ಯದಲ್ಲಿ ಕೊಹ್ಲಿ ಅಪರೂಪದ ದಾಖಲೆ ಕೂಡ ನಿರ್ಮಾಣ ಮಾಡಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ ಸಿಬಿ ತಂಡ ಎಂಟು ವಿಕೆಟ್ ಅಂತರದ ಜಯಭೇರಿ ಸಾಧಿಸಿತು.
ಮುಂಬೈ ನೀಡಿದ 172 ರನ್ ಗುರಿ ಬೆನ್ನತ್ತಿದ್ದ ಆರ್ ಸಿಬಿಗೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 148 ರನ್ ಒಟ್ಟುಗೂಡಿಸಿದರು. ಫಾಫ್ ಡುಪ್ಲೆಸಿಸ್ 43 ಎಸೆತಕ್ಕೆ 73 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಅವರು 49 ಎಸೆತದಲ್ಲಿ ಅಜೇಯ 82 ರನ್ ಬಾರಿಸಿದರು. ಆ ಮೂಲಕ ಐಪಿಎಲ್ ವೃತ್ತಿ ಜೀವನದ 50ನೇ ಅರ್ಧಶತಕ ಭಾರಿಸಿದರು.

ವಿರಾಟ್ ಕೊಹ್ಲಿ ಅವರಿಗೆ ಇದು ಐಪಿಎಲ್‌ ನಲ್ಲಿ 50ನೇ 50 ಪ್ಲಸ್ ಸ್ಕೋರ್ ಆಗಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಡೇವಿಡ್ ವಾರ್ನರ್ 60 50 ಪ್ಲಸ್ ಸ್ಕೋರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 49 ರೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಪ್ರಸ್ತುತ 45 ಅರ್ಧಶತಕಗಳು ಮತ್ತು 5 ಶತಕಗಳನ್ನು ಬಾರಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top