ಪುತ್ತೂರು: ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಈ ತಿಂಗಳ ಸೇವೆ ಭಾನುವಾರ ” ಪ್ರಜ್ಞಾ ” ಬೀರಮಲೆ ಮಾನಸಿಕ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ನಡೆಯಿತು.
ಸಂಸ್ಥೆಯು ದಾನಿಗಳು, ಸಂಘ ಸಂಸ್ಥೆಗಳ ಸಹಕಾರದಿಂದ ನಡೆಯುತ್ತಿದ್ದು ಆಶ್ರಮಕ್ಕೆ ಒಂದು ಎಕ್ರೆ ಜಾಗ ಇದ್ದು ಆಶ್ರಮ ಬಿಟ್ಟು ಉಳಿದ ಜಾಗದಲ್ಲಿ ಮರ ಬಳ್ಳಿ ಗಿಡಗಳು ತುಂಬಿ ದಟ್ಟವಾದ ಕಾಡಿನಂತೆ ಇದೆ, ನಮ್ಮ ಘಟಕದ ಸದಸ್ಯರು ಅವರ ಮನವಿಯಂತೆ ಸೇವೆ ಮಾಡುವುದು ಎಂದು ನಿರ್ಣಯ ಮಾಡಿ ಭಾನುವಾರ ಆ ಕಾರ್ಯವನ್ನು ಮಾಡಿದೆ.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆನಂದ ಭೇಟಿ ನೀಡಿ, ಇಂತಹ ಮಕ್ಕಳಿಗೋಸ್ಕರ ಮಾಡುವ ಸೇವೆ ದೇವರ ಸೇವೆ ಮಾಡಿದಂತೆ , ನಿಮ್ಮ ಘಟಕದ ಸದಸ್ಯರು ದೇವರು ಮೆಚ್ಚುವಂತಹ ಸೇವೆ ಮಾಡಿರುತ್ತೀರಿ ಎಂದು ಹೇಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು,
ಮದ್ಯಾಹ್ನ 2 ಗಂಟೆಗೆ ಮಾಸಿಕ ಸಭೆ ಘಟಕದ ಪ್ರತಿನಿಧಿ ವಿನಯ ನಾಯ್ಕ ವರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ ನಡೆಯಿತು,
ಈ ಸೇವೆಯಲ್ಲಿ ಘಟಕದ ಪ್ರತಿನಿಧಿ ವಿನಯ ನಾಯ್ಕ, ಮತ್ತು ಸದಸ್ಯರಾದ ಜಗದೀಶ, ನವೀನ, ವಿನೋದ್, ಅರುಣ, ಅಜೇಯ, ಶಂಭು ಪೂಜಾರಿ, ಸುನೀಲ್, ಹರಿಪ್ರಸಾದ್, ಸ್ವಾತಿ, ರೋಷನ್, ಚಂದ್ರಶೇಖರ ಉಪಸ್ಥಿತರಿದ್ದರು, ಊಟದ ವ್ಯವಸ್ಥೆಯನ್ನು ರೋಷನ್ ಮಾಡಿದರು, ಸ್ವೀಟ್ ಹರಿಪ್ರಸಾದ್, ಸುನೀಲ್ ಮಾಡಿದರು. ಮರ ಕಟಾವು ಮಾಡುವ
ಸದಸ್ಯ ಜಗದೀಶ್ ಸ್ವಾಗತಿಸಿ, ಸಂಯೋಜಕಿ ಆಶಾಲತಾ ವಂದಿಸಿದರು. ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿರುವ ಜ್ಯೋತಿ ಅಣ್ಣಪ್ಪ ದಂಪತಿಯವರು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.