ಪುತ್ತೂರು: ರೆಂಜಿಲಾಡಿ ಗ್ರಾಮದ ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ ಏ.5 ರಿಂದ 8 ರ ತನಕ ನಡೆಯಲಿದೆ.
ಏ.5 ರಂದು ಬೆಳಿಗ್ಗೆ ಧ್ವಜಾರೋಹಣ, ಉಗ್ರಾಣ ಮುಹೂರ್ತ, ಕ್ಷೇತ್ರ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ದೈವಜ್ಞರಾದ ಬಾಲಕೃಷ್ಣ ನಾಯರ್ ಹಾಗೂ ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕದವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಏ.6 ರಂದು ನೂಜಿಗುತ್ತು ಮನೆಯಿಂದ ದೈವಗಳ ಆಭರಣವನ್ನು ಹಾಗೂ ಇಚಿಲಂಪಾಡಿ ಬೀಡಿನ ಶುಭಕರ ಹೆಗ್ಗಡೆಯವರನ್ನು ಮೆರವಣಿಗೆಯಲ್ಲಿ ಸಂಪ್ರದಾಯದAತೆ ಕರೆತರುವುದು. ರಾತ್ರಿ ಸುಬ್ರಹ್ಮಣ್ಯ ಮಾಗಣೆ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರನ್ನು ಸ್ವಾಗತಿಸುವುದು. ರಾತ್ರಿ ಸಾಮೂಹಿಕ ರಂಗಪೂಜೆ ಮತ್ತು ಪ್ರಸಾದ ವಿತರಣೆ, ಬಳಿಕ ಹಲ್ಲತ್ತಾಯ ಮತ್ತು ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮ ನಡೆದ ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಏ.7 ರಂದು ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ತೆಗೆದು ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನಸಂgತರ್ಪಣೆ, ಅಪರಾಹ್ನ ಧ್ವಜಾರೋಹಣ ನಡೆಯಲಿದೆ. ರಾತ್ರಿ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ.
ಏ.8 ರಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಶುದ್ಧಿಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ನೂಜಿಗುತ್ತು ಅಂಕದ ಮಜಲು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗದು ನೇಮೋತ್ಸವ ನಡೆಯಲಿದೆ ಎಂದು ವಿವಿಧ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.