ಹೊಸ ವಿದೇಶಿ ವ್ಯಾಪಾರ ನೀತಿ- 2023 ಬಿಡುಗಡೆ

ದೆಹಲಿ : ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ ಹೆಚ್ಚಿಸುವ​ ಗುರಿಯನ್ನು ಹೊಂದಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ದೆಹಲಿಯಲ್ಲಿ ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಗೋಯಲ್ ಅವರು 2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.

ವಿದೇಶಿ ವ್ಯಾಪಾರ ನೀತಿ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡನೆ ಮಾಡಿದ ವಾಣಿಜ್ಯ ಸಚಿವಾಲಯ, ಡಬ್ಲ್ಯುಟಿಒದ ಜಾಗತಿಕ ವ್ಯಾಪಾರ ಮುನ್ಸೂಚನೆಯು 2023 ರಲ್ಲಿ ಜಾಗತಿಕ ವ್ಯಾಪಾರದಲ್ಲಿ ಶೇಕಡಾ ಒಂದರಷ್ಟು ನಿಧಾನಗತಿಯ ಮುನ್ಸೂಚನೆ ನೀಡಿದೆ. ಮಾರ್ಚ್ 2023 ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿ ಸುಮಾರು 3.5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಮಾಹಿತಿ ನೀಡಿತು.
ಭಾರತವು 2022-23ರಲ್ಲಿ 765 ಶತಕೋಟಿ ಮೌಲ್ಯದ ಸರಕು ರಫ್ತು ಮಾಡುವ ಸಾಧ್ಯತೆಯಿದೆ ಎಂದು ಸಾರಂಗಿ ಹೇಳಿದರು.

ಹೊಸ ನೀತಿಯ ಅಡಿಯಲ್ಲಿ ಡೈರಿ ವಲಯಕ್ಕೆ ಸರಾಸರಿ ರಫ್ತು ಬಾಧ್ಯತೆಯ ನಿಯಮದಿಂದ ವಿನಾಯಿತಿ ನೀಡಲಾಗಿದೆ. ವಿಶೇಷ ಮುಂಗಡ ಅಧಿಕಾರ ಯೋಜನೆಯನ್ನು ಉಡುಪು ಮತ್ತು ಬಟ್ಟೆ ವಲಯಕ್ಕೆ ವಿಸ್ತರಿಸಲಾಗಿದೆ ಎಂದು ಡಿಜಿಎಫ್​​ಟಿ ಹೇಳಿದೆ.

ದೆಹಲಿ: ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ ಹೆಚ್ಚಿಸುವ​ ಗುರಿಯನ್ನು ಹೊಂದಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ದೆಹಲಿಯಲ್ಲಿ ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಗೋಯಲ್ ಅವರು 2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.

ವಿದೇಶಿ ವ್ಯಾಪಾರ ನೀತಿ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡನೆ ಮಾಡಿದ ವಾಣಿಜ್ಯ ಸಚಿವಾಲಯ, ಡಬ್ಲ್ಯುಟಿಒದ ಜಾಗತಿಕ ವ್ಯಾಪಾರ ಮುನ್ಸೂಚನೆಯು 2023 ರಲ್ಲಿ ಜಾಗತಿಕ ವ್ಯಾಪಾರದಲ್ಲಿ ಶೇಕಡಾ ಒಂದರಷ್ಟು ನಿಧಾನಗತಿಯ ಮುನ್ಸೂಚನೆ ನೀಡಿದೆ. ಮಾರ್ಚ್ 2023 ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿ ಸುಮಾರು 3.5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಮಾಹಿತಿ ನೀಡಿತು.
ಭಾರತವು 2022-23ರಲ್ಲಿ 765 ಶತಕೋಟಿ ಮೌಲ್ಯದ ಸರಕು ರಫ್ತು ಮಾಡುವ ಸಾಧ್ಯತೆಯಿದೆ ಎಂದು ಸಾರಂಗಿ ಹೇಳಿದರು.

ಹೊಸ ನೀತಿಯ ಅಡಿಯಲ್ಲಿ ಡೈರಿ ವಲಯಕ್ಕೆ ಸರಾಸರಿ ರಫ್ತು ಬಾಧ್ಯತೆಯ ನಿಯಮದಿಂದ ವಿನಾಯಿತಿ ನೀಡಲಾಗಿದೆ. ವಿಶೇಷ ಮುಂಗಡ ಅಧಿಕಾರ ಯೋಜನೆಯನ್ನು ಉಡುಪು ಮತ್ತು ಬಟ್ಟೆ ವಲಯಕ್ಕೆ ವಿಸ್ತರಿಸಲಾಗಿದೆ ಎಂದು ಡಿಜಿಎಫ್​​ಟಿ ಹೇಳಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top