ಹಿಂದೂಗಳ ಆರಾಧ್ಯಮೂರ್ತಿ, ಭಾರತದ ಆದರ್ಶ ಪುರುಷೋತ್ತಮ ಶ್ರೀರಾಮಚಂದ್ರ ಈ ಧರೆಗೆ ಅವತರಿಸಿದ ದಿನ. ಈ ದಿನ ಭಾರತೀಯರಿಗೆ ಸುದಿನ.
ಶ್ರೀ ರಾಮ ನವಮಿಯ ಸಂಭ್ರಮವನ್ನು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ. ರಾಮ ನವಮಿಯ ದಿನದಂದೇ ಶ್ರೀ ರಾಮಚಂದ್ರನನ್ನು ಅಕ್ಷರಗಳಲ್ಲಿ ಪೂಜಿಸಿದ್ದಾರೆ. ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ ‘ಆದರ್ಶ ಶ್ರೀರಾಮ’ ಕವನ ಇಲ್ಲಿದೆ.
ಆದರ್ಶ ಶ್ರೀರಾಮ
ಆದರ್ಶಗುಣವುಳ್ಳ ಶ್ರೀರಾಮ ರಾಮ
ಮಾನವೀಯ ಗುಣಗಳನು ನೀಡುವನು ರಾಮ|
ಮನ ಮನೆಗಳಲ್ಲಿ ಬೆಳಗಿದ ರಾಮ
ಆದರ್ಶ ಪುರುಷ ಅನುಗ್ರಹಿಸೋ ರಾಮ||
ರಾಮ… ರಾಮ… ರಾಮ…ರಾಮ…
ಆಧ್ಯಾತ್ಮ ಅನುಭೂತಿ ನೀಡುವನು ರಾಮ
ಅಂತಃಕರಣವ ಬೆಳಗಿಸುವನು ರಾಮ|
ಅನುದಿನವು ನೆನೆನೆನೆವು ಶ್ರೀರಾಮ ರಾಮ
ಅನುಭಾವ ಅನುಭೂತಿ ನೀಡುವನು ರಾಮ||
ರಾಮ… ರಾಮ… ರಾಮ… ರಾಮ…
ಆನಂದ ನೆಮ್ಮದಿಯನು ನೀಡುವನು ರಾಮ
ಅಂತರಂಗದ ಕದವ ತೆರೆಸುವನು ರಾಮ|
ಅನುರಾಗ ಭಕುತಿಯಲಿ ಜಪಿಸುವೆನು ರಾಮ
ಅನುರಕ್ತನಾಗಿ ಬಂದಿಹೆನು ರಾಮ ||
ರಾಮ… ರಾಮ… ರಾಮ… ರಾಮ
ಶ್ರೀ ರಾಮ ನವಮಿಯ ಶುಭಾಶಯಗಳು
ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ
ಮಂಗಳೂರು ಶಾಖಾ ಮಠ, ಶ್ರೀ ಕ್ಷೇತ್ರ ಆದಿಚುಂಚನಗಿರಿ