ಮೆಕ್ಸಿಕೊ : ಉತ್ತರ ಮೆಕ್ಸಿಕೊದ ಸಿಯುಡಾಡ್ ಜುವಾರೆಜ್ನಲ್ಲಿರುವ ವಲಸೆಗಾರರ ಬಂಧನ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಖಚಿತಪಡಿಸಿದ್ದಾರೆ.
ಅಕ್ರಮ ವಲಸೆಗಾರರನ್ನು ಗಡಿಪಾರು ಮಾಡುವ ಭಯದಿಂದ ಬಂಧಿತರೇ ಈ ಕೃತ್ಯ ನಡೆಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಅಮೆರಿಕ ಗಡಿಯಲ್ಲಿರುವ ಉತ್ತರ ರಾಜ್ಯ ಚಿಹೋವಾದಲ್ಲಿನ ಸಿಯುಡಾಡ್ ಜುವಾರೆಜ್ನಲ್ಲಿರುವ ತಾತ್ಕಾಲಿಕ ವಲಸೆ ಕೇಂದ್ರದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ವಲಸಿಗರು ಹೆಚ್ಚಾಗಿ ಮಧ್ಯ ಅಮೆರಿಕ ಮತ್ತು ವೆನೆಜುವೆಲಾದಿಂದ ಬಂದವರು. ಅಧಿಕಾರಿಗಳು ಸತ್ತವರ ಗುರುತುಗಳನ್ನು ಇನ್ನೂ ನಿರ್ಧರಿಸಿಲ್ಲ. ಅಟಾರ್ನಿ ಜನರಲ್ ಕಚೇರಿಯು ಸಂಬಂಧಿತ ತನಿಖೆಗಳನ್ನು ಪ್ರಾರಂಭಿಸಿದೆ ಎಂದು ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.