ನ್ಯೂಯಾರ್ಕ್ : ಅಮೆರಿಕದ ಪ್ರಾಥಮಿಕ ಶಾಲೆಯೊಂದರಲ್ಲಿ ಯುವತಿಯೊಬ್ಬಳು ಬಂದೂಕಿನಿಂದ ಯದ್ವಾತದ್ವಾ ಗುಂಡು ಹಾರಿಸಿ ಕನಿಷ್ಠ 6 ಮಂದಿಯನ್ನು ಸಾಯಿಸಿದ್ದಾಳೆ. ಗುಂಡಿಗೆ ಬಲಿಯಾದವರಲ್ಲಿ ಮೂವರು ವಿದ್ಯಾರ್ಥಿಗಳು. ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯು ಎರಡು ರೈಫಲ್ ಮತ್ತು ಒಂದು ಪಿಸ್ತೂಲ್ ಮೂಲಕ ಮನಬಂದಂತೆ ಶೂಟೌಟ್ ಮಾಡಿದ್ದಾಳೆ.
ನ್ಯಾಶ್‌ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಪ್ರೈಮರಿ ಶಾಲೆ “ದಿ ಕವೆನೆಂಟ್ ಸ್ಕೂಲ್”ನಲ್ಲಿ ಈ ಹಿಂಸಾಕೃತ್ಯ ನಡೆದಿದೆ. ಬಳಿಕ ಪೊಲೀಸರ ಗುಂಡಿಗೆ ಹಂತಕಿ ಬಲಿಯಾಗಿದ್ದಾಳೆ. ಈ ಶೂಟರ್ ನ್ಯಾಶ್‌ವಿಲ್ಲೆಯ 28 ವರ್ಷದ ಯುವತಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಗನ್ ಸಂಸ್ಕೃತಿ ಕುರಿತು ಯುಎಸ್ ಅಧ್ಯಕ್ಷರಾದ ಜೋ ಬೈಡೆನ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು. ನಾವು ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಬೇಕಾಗಿದೆ. ನಿಷೇಧಿಸುವುದು ನಮಗೆ ಸಾಧ್ಯವಾಗದಿದ್ದರೆ, ಅವುಗಳನ್ನು ಖರೀದಿಸಲು ಇರುವ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು. ಹೆಚ್ಚಿನ ಸಾಮರ್ಥ್ಯದ ಮ್ಯಾಗಜಿನ್‌ಗಳನ್ನು ನಿಷೇಧಿಸಬೇಕು ಅವರು ಹೇಳಿದ್ದರು.