ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭಾರತ ಸ್ವಾತಂತ್ರ್ಯ ಹೋರಾಟ ಹಾಗೂ 1837 ರಲ್ಲಿ ತುಳುನಾಡಿನಲ್ಲಿ ನಡೆದ ಅಮರ ಸುಳ್ಯ ಮಹಾ ಕ್ರಾಂತಿಗೂ ಇದುವ ಅವಿನಾಭಾವ ಸಂಬಂಧದ ಕುರಿತ ದಾಖಲೆಗಳನ್ನು ಕನ್ನಡ ಅನುವಾದದಲ್ಲಿ ಪ್ರಸ್ತುತಪಡಿಸುವ “ಪುತ್ತೂರಿನಲ್ಲಿ ಅಂದು ನಡೆದದ್ದು ಏನು ?” ಕಿರು ಇ-ಪುಸ್ತಕ ಮಾ.30 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳ್ಳಳಿದೆ ಎಂದು ಲೇಖಕ ಅನಿಂದಿತ ಗೌಡ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ಪುಸ್ತಕ ಇದಾಗಿದ್ದು,, ದಾಖಲೆಗಳ ಪ್ರಕಾರ 1837 ಮಾ.30 ರಂದು ಪುತ್ತೂರಿನಲ್ಲಿ ಜಮಾಬಂದಿಯ ದಿನವಾಗಿದ್ದು. ಈಸ್ಟ್ ಇಂಡಿಯಾ ಕಂಪೆನಿ ಸರಕಾರದ ಕೆನರಾದ ಶಿರಸ್ತೇದಾರರ ಮುಖ್ಯಸ್ಥರಾಗಿದ್ದ ದೇವಪ್ಪ ಎಂಬವರು ಅಂದಿನ ಕಲೆಕ್ಟರ್ ಎಂ.ಲೆವಿಸ್ ಉಪಸ್ಥಿತಿಯಲ್ಲಿ ಊರ ಜನರ ಮುಂದೆ ಹಣ ರೂಪದ ಕಂದಾಯದ ಒತ್ತಾಯ ಹೇರಿದ್ದ ಸಂಭಾಷಣೆ ಸಮೇತ ಈ ಪುಸ್ತಕದಲ್ಲಿ ವಿವರಗಳಿವೆ. ಇದಕ್ಕಾಗಿ ಊರಿನ ಜನ ಸೇರಿ ಅವರನ್ನು ಬಂಧಿಸಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರಕಾರದ 150 ಸಿಪಾಯಿಗಳನ್ನು ಇಲ್ಲಿಂದ ಬೆನ್ನಟ್ಟಿದ ಸ್ವಪ್ನ ದಾಖಲೆಗಳು ಲಭ್ಯಾವಾಗಿದ್ದು, ಲಂಡನಿನ ನ್ಯಾಶನಲ್ ಆರ್ಮಿ ಮ್ಯೂಸಿಯಂ ಸಹಕರಿಸಿದಂತಹ “ರಿಕಾಲಿಂಗ್ ಅಮರ ಸುಳ್ಯ” ಪುಸ್ತಕದಲ್ಲಿ ದಾಖಲೆ ಸಮೇತ ಆಂಗ್ಲ ಭಾಷೆಯಲ್ಲಿ ಈಗಾಗಲೇ ಪ್ರಕಟಗೊಂಡಿದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಮಹಾಜನತೆಗೆ ಮತ್ತೊಮ್ಮೆ ಈ ಮಣ್ಣಲ್ಲಿ ಎಲ್ಲರನ್ನು ಒಗ್ಗೂಡಿಸಿ ನಡೆದಿದ್ದ ಚರಿತ್ರೆಯನ್ನು ಮರು ನೆನಪಿಸುವ ಸಲುವಾಗಿ ಅದೇ ದಿನದಂದು ಚರಿತ್ರೆಯ ಅರಿವು ಮೂಡಿಸುವ ಸಲುವಾಗಿ ಸಾಹಿತ್ಯ, ಅಧ್ಯಯನದೊಂದಿಗೆ ಆಧುನಿಕತೆಯನ್ನು ಒಗ್ಗೂಡಿಸಿ ಜನರಿಗೆ ಚರಿತ್ರೆಯ ವಿಚಾರ ತಿಳಿಸುವುದಾಗಿ ಲೇಖಕ ಅನಿಂದಿತ ಗೌಡ ತಿಳಿಸಿದ್ದಾರೆ.