ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೀಡಿದ ವೈಯಕ್ತಿಕ ಕೀಳು ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಮತ್ತು ಅವಹೇಳನಕಾರಿ ಎಂದು ಬಿಜೆಪಿ ಬಣ್ಣಿಸಿದೆ.
ಬಿಲಾವಲ್ ಭುಟ್ಟೊ ಅಧಿಕಾರದಲ್ಲಿ ಉಳಿಯಲು ಮತ್ತು ಪಾಕಿಸ್ಥಾನದ ಸರ್ಕಾರವನ್ನು ಉಳಿಸಲು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆ ಸಚಿವರ ಹೇಳಿಕೆಯು ಜಗತ್ತನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿದೆ. ದೇಶಾದ್ಯಂತ ಡಿ.17ರಂದು ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು. ಪಾಕಿಸ್ಥಾನದ ಸಚಿವರು ಮತ್ತು ಅದರ ವಿದೇಶಾಂಗ ಸಚಿವರ ಪ್ರತಿಕೃತಿಗಳನ್ನು ಸುಡಲಿದ್ದಾರೆ ಎಂದು ಹೇಳಿದೆ.
ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ವಿದ್ಯಾರ್ಥಿಗಳಿಗಾಗಿ ಮೋದಿ ಸರ್ಕಾರದ ರಕ್ಷಣಾ ಕಾರ್ಯಾಚರಣೆಯು ಕೆಲವು ಪಾಕಿಸ್ಥಾನಿ ವಿದ್ಯಾರ್ಥಿಗಳನ್ನು ಸಹ ಸಂಘರ್ಷ ವಲಯದಿಂದ ಸ್ಥಳಾಂತರಿಸಿದೆ ಭುಟ್ಟೋ ಬಳಸಿದ ಭಾಷೆ ಅತ್ಯಂತ ಖಂಡನೀಯ. ಅದು ರಾಜನೀತಿಯ ನಿಜವಾದ ಮನೋಭಾವವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಸಾರ್ವಜನಿಕ ಜೀವನದಲ್ಲಿ ಸಭ್ಯತೆಯ ಮಿತಿಯನ್ನು ಮೀರುತ್ತದೆ. ನಿಜವಾದ ರಾಜಕಾರಣಿ ಮತ್ತು ಅತ್ಯಂತ ಗೌರವಾನ್ವಿತ ಜಾಗತಿಕ ನಾಯಕರಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರತಿಕ್ರಿಯಿಸುವ ಮಟ್ಟವೂ ಅವರಿಗೆ ಇದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಭಾರತ ಎರಡೂ ದೇಶಗಳ ಮುಸ್ಲಿಮರನ್ನು ಭಯೋತ್ಪಾದಕರೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ. ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿಯಾಗಿದ್ದಾನೆ ಎಂದು ಭುಟ್ಟೊ ಹೇಳಿದ್ದಾರೆ.