ಪುತ್ತೂರು: ಜವುಳಿ ಉದ್ಯಮದಲ್ಲೇ ತನ್ನದೇ ಆದ ಛಾಪು ಮೂಡಿಸಿರುವುದಲ್ಲದೆ ಕಳೆದ ಸುಮಾರು 79 ವರ್ಷಗಳ ಪರಂಪರೆಯನ್ನು ಹೊಂದಿರುವ ಪುತ್ತೂರಿನ ಪ್ರತಿಷ್ಠತ ಜವುಳಿ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಕ್ ರೆಡಿಮೇಡ್ಸ್‌ನವರ ನೂತನ ಶಾಖೆ ಬ್ರಾಂಡೆಡ್ ಡ್ರೆಸ್ಸ್‌ಗಳ ಎಕ್ಸ್‌ಕ್ಲೂಸಿವ್ ಮಳಿಗೆ ಎಂಎಸ್‌ಎಸ್ ಆಲ್ ಎಕ್ಸ್‌ಕ್ಲೂಸಿವ್ ಶುಕ್ರವಾರ ಮುಖ್ಯರಸ್ತೆ ಹಳೆ ಅಂಚೆ ಕಚೇರಿ ಬಳಿ ಶುಭಾರಂಭಗೊಂಡಿತು.
ಮಳಿಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜವುಳಿ ಉದ್ಯಮದಲ್ಲಿ ಮಾದರಿಯಾಗಿದ್ದಾರೆ. ದಾನ, ಧರ್ಮದಲ್ಲಿಯೂ ಸಂಜೀವ ಶೆಟ್ಟಿಯವರು ಎತ್ತಿದ ಕೈ. ದ.ಕ ಜಿಲ್ಲೆಯಲ್ಲಿ ಜವುಳಿ ಉದ್ಯಮದಲ್ಲಿಯೇ ತನ್ನದೇ ಛಾಪು ಮೂಡಿಸಿರುವ ಸಂಜೀವ ಶೆಟ್ಟಿಯವರ ಹೆಸರಿನಲ್ಲಿಯೇ ಮುನ್ನಡೆಯುವ ಸಂಸ್ಥೆಯ ಇಂದು ಮೂರನೇ ಮಳಿಗೆ ಪ್ರಾರಂಭಿಸಿ ಜನರಿಗೆ ಒಂದೇ ಸೂರಿನಡಿಯಲ್ಲಿಯೇ ಎಲ್ಲಾ ಮಾದರಿ ಬಟ್ಟೆಗಳನ್ನು ಒದಗಿಸಿದ್ದಾರೆ. ಮಳಿಗೆಯಲ್ಲಿ ಆಧುನಿಕ ಜೀವನಕ್ಕೆ ಪೂರಕವಾದ ಕಾಸ್ಮೆಟಿಕ್ ಉತ್ಪನ್ನಗಳು ಜನರಿಗೆ ಒಂದೇ ಕಡೆ ದೊರೆಯುತ್ತಿದ್ದು ಪುತ್ತೂರಿನ ಜನತೆಗೆ ಸ್ಮಾರ್ಟ್ ಆಗಲು ಸಹಕಾರಿಯಾಗಿದೆ ಎಂದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಜವುಳಿ ಉದ್ಯಮದಲ್ಲಿ ಹೆಸರಾಂತ ಮಳಿಗೆಯಾಗಿರುವ ಸಂಜೀವ ಶೆಟ್ಟಿ ಮಳಿಗೆಯು ಹೆಸರಾಂತ ಮಳಿಗೆಯಾಗಿ ಜಿಲ್ಲೆ, ರಾಜ್ಯಕ್ಕೆ ವ್ಯಾಪಿಸಿದೆ. ಈ ಮಳಿಗೆಯು ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ ಎಂದರು.
ಮಳಿಯನ್ನು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಸಂಚಾರಿ ಪೊಲೀಸ್ ಠಾಣಾ ಎಸ್.ಐ. ರಾಜಶೇಖರ ವಂದಲಿ ಹಾಗೂ ಸಂಸ್ಥೆಯ ಹಿರಿಯ ಸಿಬಂದಿಗಳಾಎ ಲೀನಾ ಕುಮಾರಿ, ಬಾಬು ಗೌಡ, ಸುಂದರ ಗೌಡ, ಸುರೇಶ್, ಮೋನಪ್ಪ ಗೌಡ ದೀಪ ಬೆಳಗಿಸಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಮೀನಾ ಕುಮಾರಿ, ಬಾಬು ಗೌಡ, ಸುಂದರ ಗೌಡ, ಸುರೇಶ್, ಮೋನಪ್ಪ ಗೌಡರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಂಜೀವ ಶೆಟ್ಟಿ ಕುಟುಂಬಸ್ಥರಾದ ಮುರಳೀಧರ್, ಗಿರಿಧರ್, ಮನೋಹರ್, ಶಿವಶಂಕರ್, ಸೂರಜ್, ಕೀರ್ತನ್, ಸುಶಾಂತ್, ನರೇಂದ್ರ, ಮಹೇಂದ್ರ, ನಮೃತಾ, ಡಾ.ಲಿಖಿತಾ, ಡಾ.ಹರಿಣಿ, ರಜನಿ, ವಿದ್ಯಾ, ಇಂದು ಹಾಗೂ ಅಶ್ವಿತಾ ಉಪಸ್ಥಿತರಿದ್ದರು. ಶ್ರೀಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರಣಿ ಸೂರಜ್ ಶೆಟ್ಟಿ ವಂದಿಸಿದರು.